ಅಥ್ಲೀಟ್ಗಳಿಗೆ ಗಾಂಜಾ ನಿಷೇಧದ ಬಗ್ಗೆ ವಾಡಾ ತೀರ್ಮಾನ..!
* ಗಾಂಜಾದ ಕುರಿತಂತೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲು ರೆಡಿಯಾದ ವಾಡಾ
* ಅಥ್ಲೀಟ್ಸ್‌ಗಳಿಗೆ ಗಾಂಜಾ ಸೇವನೆಯನ್ನು 2022ರ ವರೆಗೆ ನಿಷೇಧ
* ಗಾಂಜಾವನ್ನು ವೈಜ್ಞಾನಿಕವಾಗಿ ಅಧ್ಯಯನಕ್ಕೊಳಪಡಿಸಲು ವಾಡಾ ಸಿದ್ದತೆ
ಲಂಡನ್(ಸೆ.15): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ರೆಡಿಯಾಗಿದ್ದ ಅಮೆರಿಕದ ಫೀಲ್ಡ್ ಅಂಡ್ ಟ್ರ್ಯಾಕ್ ಅಥ್ಲೀಟ್ ಶಾಕೆರ್ರಿ ರಿಚರ್ಡ್ಸನ್ ಡೋಪಿಂಗ್ ಟೆಸ್ಟ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದರಿಂದ ವಂಚಿತರಾಗಿದ್ದರು. ಇದರ ಬೆನ್ನಲ್ಲೇ ಗಾಂಜಾವನ್ನು(Cannabis) ಉದ್ದೀಪನ ಮದ್ದು ಎಂದು ಪರಿಗಣಿಸಬೇಕೇ ಅಥವಾ ಬೇಡವೇ ಎನ್ನುವುದರ ಕುರಿತಂತೆ ವಾಡಾ(ವರ್ಲ್ಡ್ ಆಂಟಿ-ಡೋಪಿಂಗ್ ಏಜೆನ್ಸಿ) ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ.
ಮುಂದಿನ ವರ್ಷ ಗಾಂಜಾ ಕುರಿತಂತೆ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಲಾಗುವುದು ಎಂದು ಮಂಗಳವಾರ(ಸೆ.14) ವಾಡಾ ಸಂಸ್ಥೆ ತಿಳಿಸಿದೆ. 2022ರ ವರೆಗೆ ಕ್ಯಾನ್‌ಬಿಸ್ ಅನ್ನು ಅಥ್ಲೀಟ್‌ಗಳ ಬಳಕೆಗೆ ನಿಷೇಧ ಹೇರಲಾಗಿದೆ.
ಕಳೆದ ಜೂನ್‌ನಲ್ಲಿ ಯುಎಸ್ ಒಲಿಂಪಿಕ್ ಟ್ರ್ತಾಕ್ & ಫೀಲ್ಡ್ ಆಯ್ಕೆ ಸ್ಪರ್ಧೆಯಲ್ಲಿ ರಿಚರ್ಡ್ಸನ್ ಕ್ಯಾನ್‌ಬಿಸ್ ಸೇವಿಸಿರುವುದು ದೃಢಪಟ್ಟಿತ್ತು. ಹೀಗಾಗಿ ರಿಚರ್ಡ್ಸನ್ ಆಯ್ಕೆ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಇದಷ್ಟೇ ಅಲ್ಲದೇ ಆಕೆಯ ಮೇಲೆ ಒಂದು ತಿಂಗಳ ಕಾಲ ನಿಷೇಧ ಹೇರಲಾಗಿತ್ತು.
ಡ್ರಗ್ಸ್ ಸೇವಿಸಿ ಬ್ಯಾನ್ ಆದ ಟಾಪ್ 5 ಕ್ರಿಕೆಟಿಗರಿವರು..!
21 ವರ್ಷದ ರಿಚರ್ಡ್ಸನ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಸ್ಪರ್ಧಿ ಎನಿಸಿದ್ದರು. ತನ್ನ ತಾಯಿಯ ಸಾವಿನ ಆಘಾತದಿಂದ ಹೊರಬರಲು ಗಾಂಜಾವನ್ನು ಸೇವನೆ ಮಾಡಿರುವುದಾಗಿ ತಿಳಿಸಿದ್ದರು. ರಿಚರ್ಡ್ಸನ್ ಮೇಲೆ ನಿಷೇಧ ಹೇರಿದ ಬೆನ್ನಲ್ಲೇ ಆಕೆಯ ಮೇಲೆ ಅನುಕಂಪ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ವಾಡಾ ಗಾಂಜಾ ಕುರಿತಂತೆ ಪುನರಾವಲೋಕನ ಮಾಡಲು ಮುಂದಾಗಿದೆ.