2020ನೇ ಸಾಲಿನ ಯುಎಸ್ ಓಪನ್ ಟೆನಿಸ್ ಟೂರ್ನಯಲ್ಲಿ ಆಸ್ಟ್ರೀಯಾದ ಡೊಮಿನಿಕ್ ಥೀಮ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅಂದಹಾಗೆ ಇದು ಥೀಮ್‌ ಅವರ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನ್ಯೂಯಾರ್ಕ್(ಸೆ.15): ಮೊದಲ ಎರಡೂ ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿದರೂ ಫೀನಿಕ್ಸ್‌ನಂತೆ ಮೇಲೆದ್ದ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ 2020ರ ಯುಎಸ್‌ ಓಪನ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಟೆನಿಸ್‌ ವೃತ್ತಿ ಜೀವನದಲ್ಲಿ ಥೀಮ್‌ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಗೆದ್ದ ಸಾಧನೆ ಮಾಡಿದರು. 

4 ಗಂಟೆ 2 ನಿಮಿಷಗಳ ಸುದೀರ್ಘ ಅವಧಿಯ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಥೀಮ್‌, 5ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಜಯ ದಾಖಲಿಸಿದರು. ಆರಂಭದ 2 ಸೆಟ್‌ಗಳಲ್ಲಿ ಹಿನ್ನಡೆ ಹೊಂದಿದ್ದರು. ಆದರೆ, ಬಳಿಕ ಪುಟಿದೆದ್ದ ಥೀಮ್‌ 3 ಹಾಗೂ 4ನೇ ಸೆಟ್‌ಗಳಲ್ಲಿ ಮುನ್ನಡೆ ಕಾಯ್ದು ಕೊಂಡರು. 5ನೇ ಸೆಟ್‌ನ ಟೈಬ್ರೇಕರ್‌ ಅವಕಾಶದಲ್ಲಿ ಮುನ್ನಡೆ ಪಡೆದ ಥೀಮ್‌ ಕಡೆಗೂ ಜಯದ ಕೇಕೆ ಹಾಕಿದರು. ಜ್ವೆರೆವ್‌ ಎದುರು 2-6, 4-6, 6-4, 6-3, 7-6(8-6) ಸೆಟ್‌ಗಳಲ್ಲಿ ಗೆದ್ದು ಪ್ರತಿಷ್ಠಿತ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ವಿಶ್ವ ಟಿನಿಸಿಗರ ಸಾಲಿನಲ್ಲಿ ತಮ್ಮ ಹೆಸರು ದಾಖಲಿಸಿದರು.

Scroll to load tweet…
Scroll to load tweet…

ನವೊಮಿ ಒಸಾಕಗೆ ಒಲಿದ ಯುಎಸ್ ಓಪನ್ ಕಿರೀಟ

ಮೊದಲ 2 ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿಯೂ ಗ್ರ್ಯಾನ್‌ ಸ್ಲಾಮ್‌ ಗೆದ್ದ ಸಾಧನೆಮಾಡಿದ್ದು ಯುಎಸ್‌ ಓಪನ್‌ ಇತಿಹಾಸದಲ್ಲಿ ಇದೇ ಮೊದಲಾಗಿದೆ. 1990ರಲ್ಲಿ ಜನಿಸಿದ ಟೆನಿಸ್‌ ಆಟಗಾರರೊಬ್ಬರು ಯುಎಸ್‌ ಓಪನ್‌ ಗೆದ್ದಿರುವುದು ಇದೇ ಮೊದಲ ಬಾರಿಯಾಗಿದೆ. ಈ ಹಿಂದೆ 3 ಬಾರಿ ಗ್ರ್ಯಾನ್‌ಸ್ಲಾಮ್‌ ಫೈನಲ್‌ಗೇರಿದ್ದ ಥೀಮ್‌, 4ನೇ ಪ್ರಯತ್ನದಲ್ಲಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾದರು. 1995ರ ಬಳಿಕ ಗ್ರ್ಯಾನ್‌ ಸ್ಲಾಮ್‌ ಗೆದ್ದ ಆಸ್ಟ್ರಿಯಾದ ಮೊದಲ ಟೆನಿಸಿಗ ಎಂಬ ಹೆಗ್ಗಳಿಕೆಗೆ ಥೀಮ್‌ ಪಾತ್ರರಾಗಿದ್ದಾರೆ. 1995ರಲ್ಲಿ ಆಸ್ಟ್ರಿಯಾದ ಥಾಮಸ್‌ ಮಸ್ಟರ್‌ ಫ್ರೆಂಚ್‌ ಓಪನ್‌ ಗೆದ್ದಿದ್ದರು.

ಯುಎಸ್‌ ಓಪನ್‌ ಪ್ರಶಸ್ತಿ ಮೊತ್ತ

ಡೊಮಿನಿಕ್‌ ಥೀಮ್‌ 22 ಕೋಟಿ (3 ಮಿಲಿಯನ್‌) ಚಾಂಪಿಯನ್‌

ಅಲೆಕ್ಸಾಂಡರ್‌ ಜ್ವೆರೆವ್‌ 11 ಕೋಟಿ (1.5 ಮಿಲಿಯನ್‌) ರನ್ನರ್‌ ಅಪ್‌

ಯುಎಸ್‌ ಗೆದ್ದ ಒಸಾಕ ನಂ.3ಕ್ಕೆ ಜಿಗಿತ

ಲಂಡನ್‌: ಯುಎಸ್‌ ಚಾಂಪಿಯನ್‌ ಜಪಾನ್‌ನ ನವೊಮಿ ಒಸಾಕ, ಸೋಮವಾರ ನೂತನವಾಗಿ ಬಿಡುಗಡೆಯಾದ WTA ರಾರ‍ಯಂಕಿಂಗ್‌ನಲ್ಲಿ ನಂ.3 ಸ್ಥಾನಕ್ಕೇರಿದ್ದಾರೆ. 2ನೇ ಬಾರಿಗೆ ಯುಎಸ್‌ ಕಿರೀಟಗೆದ್ದ ಬಳಿಕ ಒಸಾಕ, 6 ಸ್ಥಾನ ಜಿಗಿತ ಕಂಡಿದ್ದಾರೆ. ರನ್ನರ್‌ ಅಪ್‌ ಬೇಲಾರಸ್‌ನ ವಿಕ್ಟೋರಿಯಾ ಅಜರೆಂಕಾ 15ನೇ ಸ್ಥಾನಕ್ಕೇರಿದ್ದಾರೆ. ಯುಎಸ್‌ ಓಪನ್‌ ಆರಂಭಕ್ಕೂಮುನ್ನ ಅಜರೆಂಕಾ 59ನೇ ಸ್ಥಾನದಲ್ಲಿದ್ದರು.ಉಳಿದಂತೆ ಆಸ್ಪ್ರೇಲಿಯಾದ ಆ್ಯಶ್ಲೆ ಬಾರ್ಟಿ ಹಾಗೂ ರೋಮೇನಿಯಾದ ಸಿಮೋನಾ ಹಾಲೆಪ್‌ ನಂ.1, 2ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.