Uganda bomb blast: ಭಾರತದ ಪ್ಯಾರಾ ಬ್ಯಾಡ್ಮಿಂಟನ್‌ ಪಟುಗಳು ಪಾರು..!

* ಉಗಾಂಡ ಪ್ರವಾಸದಲ್ಲಿರುವ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ತಂಡ ಬಾಂಬ್ ಬ್ಲಾಸ್ಟ್‌ನಿಂದ ಬಚಾವ್

* ಭಾರತೀಯ ಪ್ಯಾರಾಥ್ಲೀಟ್‌ಗಳು ಉಳಿಕೊಂಡಿದ್ದ ಹೋಟೆಲ್ ಸಮೀಪದಲ್ಲೇ ಬಾಂಬ್ ಬ್ಲಾಸ್ಟ್

* ಈ ಬ್ಲಾಸ್ಟ್‌ನಲ್ಲಿ ಮೂವರು ಆತ್ಮಾಹುತಿ ದಾಳಿಕೋರರು ಸಾವನ್ನಪ್ಪಿದ್ದಾರೆ ಎಂದು ವರದಿ

Uganda bomb blast Incident Indian para badminton players safe kvn

ಕಂಪಲಾ(ನ.17): ಉಗಾಂಡ ಪ್ಯಾರಾ ಬ್ಯಾಡ್ಮಿಂಟನ್‌ (Para Badminton) ಇಂಟರ್‌ನ್ಯಾಷನಲ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತೀಯ ಶಟ್ಲರ್‌ಗಳು ತಂಗಿದ್ದ ಹೋಟೆಲ್‌ ಸಮೀಪ ಮಂಗಳವಾರ ಸರಣಿ ಬಾಂಬ್‌ ಸ್ಫೋಟ (Serial Bomb Blast) ಸಂಭವಿಸಿದೆ. ಘಟನೆಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಆದರೆ ಭಾರತೀಯ ಕ್ರೀಡಾಳುಗಳು ಸುರಕ್ಷಿತವಾಗಿದ್ದಾರೆ ಎಂದು ಪ್ಯಾರಾ ಬ್ಯಾಡ್ಮಿಂಟನ್‌ ತಂಡದ ಮುಖ್ಯ ಕೋಚ್‌ ಗೌರವ್‌ ಖನ್ನಾ ಖಚಿತಪಡಿಸಿದ್ದಾರೆ.

‘ನಮ್ಮ ತಂಡ ತಂಗಿದ್ದ ಹೋಟೆಲ್‌ನ 100 ಮೀಟರ್ ಅಂತರದಲ್ಲಿ ಸ್ಫೋಟ ಸಂಭವಿಸಿದೆ. ಆದರೆ ಎಲ್ಲರೂ ಸುರಕ್ಷಿತವಾಗಿದ್ದು, ಯಾರೂ ಭಯಪಡಬೇಕಿಲ್ಲ. ಘಟನೆಯಿಂದ ನಮ್ಮ ವೇಳಾಪಟ್ಟಿಗೆ ಯಾವುದೇ ಪರಿಣಾಮ ಬೀರಲ್ಲ. ಟೂರ್ನಿ ನಿಗದಿಯಂತೆಯೇ ನಡೆಯಲಿದೆ’ ಎಂದಿದ್ದಾರೆ. 

ICC T20 World Cup: ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಸಿಕ್ಕಿದ ಬಹುಮಾನದ ಮೊತ್ತವೆಷ್ಟು..?

‘ಇದು ಉಗ್ರ ದಾಳಿಯಾಗಿದ್ದು, ಮೂವರು ಆತ್ಮಾಹುತಿ ದಾಳಿಕೋರರು ಸಾವನ್ನಪ್ಪಿದ್ದಾರೆ’ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ (Tokyo Paralympics) ಚಿನ್ನದ ಪದಕ ವಿಜೇತ ಪ್ರಮೋದ್‌ ಭಗತ್‌ (Pramod Bhagat) ಸೇರಿದಂತೆ ಒಟ್ಟು 54 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದು, ನವೆಂಬರ್ 21ಕ್ಕೆ ಟೂರ್ನಿ ಮುಕ್ತಾಯಗೊಳ್ಳಲಿದೆ.

ಏಷ್ಯನ್‌ ಆರ್ಚರಿ: ಭಾರತಕ್ಕೆ ಮೂರು ಪದಕ ಖಚಿತ

ಢಾಕಾ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ (Asian Archery Championship) ಭಾರತಕ್ಕೆ ಮೂರು ಪದಕ ದೊರೆಯುವುದು ಖಚಿತವಾಗಿದೆ. ಪುರುಷ, ಮಹಿಳಾ ಹಾಗೂ ಮಿಶ್ರ ತಂಡ ವಿಭಾಗಗಳಲ್ಲಿ ಭಾರತ ಆರ್ಚರಿ ತಂಡಗಳು ಫೈನಲ್‌ ಪ್ರವೇಶಿಸಿದೆ. 

ಅಂಕಿತಾ, ಮಧು ವೆದ್ವಾನ್‌ ಹಾಗೂ ರಿಧಿ ಅವರನ್ನೊಳಗೊಂಡ ಮಹಿಳಾ ತಂಡ ಸೆಮಿಫೈನಲ್‌ನಲ್ಲಿ ವಿಯಟ್ನಾಂ ವಿರುದ್ಧ ಜಯಿಸಿದರೆ, ಕಪಿಲ್‌, ಪ್ರವೀಣ್‌ ಜಾಧವ್‌ ಹಾಗೂ ಪಾರ್ಥರ್‌ ಸಾಲುಂಕೆ ಅವರಿರುವ ಪುರುಷರ ರೀಕರ್ವ್ ತಂಡ ಬಾಂಗ್ಲಾದೇಶವನ್ನು ಮಣಿಸಿ ಫೈನಲ್‌ಗೇರಿತು. ಕಾಂಪೌಂಡ್‌ ಮಿಶ್ರ ತಂಡ ವಿಭಾಗದಲ್ಲಿ ರಿಷಭ್‌ ಯಾದವ್‌ ಹಾಗೂ ಜ್ಯೋತಿ ಸುರೇಖಾ ಜೋಡಿ ಕಜಕಸ್ತಾನ ವಿರುದ್ಧ ಜಯಗಳಿಸಿತು. 

Indonesia Badminton Tournament : ಸಿಂಧು, ಶ್ರೀಕಾಂತ್‌, ಲಕ್ಷ್ಯಾ ಸೇನ್ ಪದಕದ ಭರವಸೆ!

ಮೂರೂ ವಿಭಾಗಗಳ ಫೈನಲ್‌ನಲ್ಲಿ ಭಾರತಕ್ಕೆ ಕೊರಿಯಾ ತಂಡಗಳು ಎದುರಾಗಲಿವೆ. ಇನ್ನು ಕಾಂಪೌಂಡ್‌ ಪುರುಷ ಹಾಗೂ ಮಹಿಳಾ ತಂಡ ಹಾಗೂ ರೀಕವ್‌ರ್‍ ಮಿಶ್ರ ತಂಡ ವಿಭಾಗದಲ್ಲಿ ಭಾರತ ಸೆಮೀಸ್‌ನಲ್ಲಿ ಸೋತಿದ್ದು, ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದೆ.

ಇಂಡೋನೇಷ್ಯಾ ಮಾಸ್ಟ​ರ್ಸ್‌: ಸಿಂಧು, ಲಕ್ಷ್ಯಾ 2ನೇ ಸುತ್ತಿಗೆ

ಬಾಲಿ(ಇಂಡೋನೇಷ್ಯಾ): ಹಾಲಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು (PV Sindhu) ಹಾಗೂ ಲಕ್ಷ್ಯಾ ಸೆನ್‌ (Lakshya Sen) ಇಂಡೋನೇಷ್ಯಾ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌ (Badminton) ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ 3ನೇ ಶ್ರೇಯಾಂಕಿತೆ ಸಿಂಧು ಥಾಯ್ಲೆಂಡ್‌ನ ಸುಪನಿದ ಕಟೆಥೊಂಗ್‌ ವಿರುದ್ಧ 21-15, 21-19ರಲ್ಲಿ ಗೆದ್ದರು. 2ನೇ ಸುತ್ತಿನಲ್ಲಿ ಸಿಂಧು ಸ್ಪೇನ್‌ನ ಕ್ಲಾರಾ ಅಜುರ್‌ಮೆಂದಿ ವಿರುದ್ಧ ಸೆಣಸಲಿದ್ದಾರೆ. 

Kohli Controversy;ವಿರಾಟ್ ಕೊಹ್ಲಿ ರೆಸ್ಟೋರೆಂಟ್‌ನಲ್ಲಿ ತಾರತಮ್ಯ ಆರೋಪ, ಸಾಮಾಜಿಕ ಜಾಲತಾಣದಲ್ಲಿ ಟೀಕೆ!

ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯಾ, ಜಪಾನ್‌ನ ಕಂಟ ಸುನೆಯಮ ವಿರುದ್ಧ 21-​17, 18​-21, 21​-17 ಗೇಮ್‌ಗಳಿಂದ ಗೆದ್ದರು. 2ನೇ ಸುತ್ತಿನಲ್ಲಿ ಲಕ್ಷ್ಯಾ 2 ಬಾರಿ ವಿಶ್ವ ಚಾಂಪಿಯನ್‌ ಕೆಂಟೊ ಮೊಮೊಟರನ್ನು ಎದುರಿಸಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ 2ನೇ ಸುತ್ತಿಗೇರಿದರೆ, ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಸಾತ್ವಿಕ್‌-ಚಿರಾಗ್ ಜೋಡಿ ಸೋಲುಂಡಿತು.

Latest Videos
Follow Us:
Download App:
  • android
  • ios