ಉಬರ್‌, ಥಾಮಸ್‌ ಕಪ್‌: ಭಾರತ ತಂಡಗಳಿಗೆ ಸೋಲು

* ಥಾಮಸ್ & ಉಬರ್ ಕಪ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತೀಯರಿಗೆ ನಿರಾಸೆ

* ಈಗಾಗಲೇ ಕ್ವಾರ್ಟರ್ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ತಂಡಗಳು

* ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ ಮತ್ತು ಎಚ್‌.ಎಸ್‌.ಪ್ರಣಯ್‌ಗೆ ಗೆಲುವು

Thomas and Uber Cup 2022 Indian Mens and Womens teams lose final group match kvn

ಬ್ಯಾಂಕಾಕ್(ಮೇ.12)‌: ಥಾಮಸ್‌ ಹಾಗೂ ಉಬರ್‌ ಕಪ್‌ ಫೈನಲ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (Thomas and Uber Cup Finals Badminton Tournament) ಈಗಾಗಲೇ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಭಾರತ ತಂಡಗಳು ಗುಂಪು ಹಂತದ ಕೊನೆ ಪಂದ್ಯದಲ್ಲಿ ಸೋಲನುಭವಿಸಿವೆ. ಬುಧವಾರ ಥಾಮಸ್‌ ಕಪ್‌ ‘ಸಿ’ ಗುಂಪಿನ 3ನೇ ಪಂದ್ಯದಲ್ಲಿ ಪುರುಷರ ತಂಡ ಚೈನೀಸ್‌ ತೈಪೆ ವಿರುದ್ಧ 2-3 ಅಂತರದಲ್ಲಿ ಸೋತರೆ, ಉಬರ್‌ ಕಪ್‌ ‘ಡಿ’ ಗುಂಪಿನ ಪಂದ್ಯದಲ್ಲಿ ಕೊರಿಯಾ ವಿರುದ್ಧ ಮಹಿಳಾ ತಂಡ 0-5 ಅಂತರದಲ್ಲಿ ಪರಾಭವಗೊಂಡಿತು. 

ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ (Kidambi Srikanth) ಮತ್ತು ಎಚ್‌.ಎಸ್‌.ಪ್ರಣಯ್‌ ಗೆದ್ದರೆ, ಲಕ್ಷ್ಯ ಸೆನ್‌ ಸೋಲನುಭವಿಸಿದರು. ಈಗಾಗಲೇ ಜರ್ಮನಿ ಮತ್ತು ಕೆನಡಾ ವಿರುದ್ಧ ಗೆದ್ದಿದ್ದ ತಂಡಕ್ಕೆ ಈ ಸೋಲಿನಿಂದ ಯಾವುದೇ ಪರಿಣಾಮ ಬೀರಿಲ್ಲ. ಇನ್ನು, ಉಬರ್‌ ಕಪ್‌ನಲ್ಲಿ ಈಗಾಗಲೇ ಕೆನಡಾ ಹಾಗೂ ಅಮೆರಿಕ ವಿರುದ್ಧ ಗೆದ್ದಿದ್ದ ಮಹಿಳಾ ತಂಡ ಕ್ವಾರ್ಟರ್‌ನಲ್ಲಿ ಗುರುವಾರ ಥಾಯ್ಲೆಂಡ್‌ ವಿರುದ್ಧ ಸೆಣಸಾಡಲಿದೆ.

ಹರ್ಡಲ್ಸ್‌ನಲ್ಲಿ 20 ವರ್ಷ ಹಳೆಯ ರಾಷ್ಟ್ರೀಯ ದಾಖಲೆ ಮುರಿದ ಜ್ಯೋತಿ

ನವದೆಹಲಿ: ಭಾರತದ ಜ್ಯೋತಿ ಯರ್ರಾಜಿ ಸೈಪ್ರಸ್‌ ಅಂತಾರಾಷ್ಟ್ರೀಯ ಹರ್ಡಲ್ಸ್‌ ಮೀಟ್‌ನಲ್ಲಿ 20 ವರ್ಷ ಹಳೆಯ ರಾಷ್ಟ್ರೀಯ ದಾಖಲೆ ಮುರಿದು ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ. ಆಂಧ್ರ ಪ್ರದೇಶದ 22 ವರ್ಷದ ಜ್ಯೋತಿ ಲಿಮಾಸೋನ್‌ನಲ್ಲಿ ಮಂಗಳವಾರ ನಡೆದ 100 ಮೀ. ಹರ್ಡಲ್ಸ್‌ನಲ್ಲಿ 13.23 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, 2002ರಲ್ಲಿ ಅನುರಾಧಾ ಬಿಸ್ವಾಲ್‌ ನಿರ್ಮಿಸಿದ್ದ ದಾಖಲೆ(13.38 ಸೆ.)ಯನ್ನು ಮುರಿದರು. 

Uber Cup 2022 : ಭಾರತ ಮಹಿಳಾ ಬ್ಯಾಡ್ಮಿಂಟನ್ ತಂಡ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

2020ರಲ್ಲಿ ಕರ್ನಾಟಕದ ಮೂಡುಬಿದಿರೆಯಲ್ಲಿ ನಡೆದಿದ್ದ ಅಖಿಲ ಭಾರತ ಅಂತರ್‌ ವಿವಿ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಜ್ಯೋತಿ 13.03 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರೂ, ರಾಷ್ಟ್ರೀಯ ಡೋಪಿಂಗ್‌ ವಿರೋಧಿ ಘಟಕ(ನಾಡಾ) ಆಕೆಯನ್ನು ಪರೀಕ್ಷಿಸದ ಕಾರಣ ಅದನ್ನು ರಾಷ್ಟ್ರೀಯ ದಾಖಲೆ ಎಂದು ಪರಿಗಣಿಸಿರಲಿಲ್ಲ. ಕಳೆದ ತಿಂಗಳು ಫೆಡರೇಶನ್‌ ಕಪ್‌ನಲ್ಲಿ ಜ್ಯೋತಿ 13.09 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರೂ ಗಾಳಿಯ ವೇಗ ಹೆಚ್ಚಿದ್ದರಿಂದ ಅದನ್ನೂ ದಾಖಲೆಯಾಗಿ ಪರಿಗಣಿಸಿರಲಿಲ್ಲ.

ಏಷ್ಯಾ ಕಪ್‌ ಆರ್ಚರಿ: 14 ಪದಕಗಳನ್ನು ಗೆದ್ದ ಭಾರತ

ಸುಲೈಮಾನಿಯಾ(ಇರಾಕ್‌): ಏಷ್ಯಾ ಕಪ್‌ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕ್ರೀಡಾಪಟುಗಳು 8 ಚಿನ್ನ ಸೇರಿದಂತೆ ಒಟ್ಟು 14 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದ್ದಾರೆ. ಮಂಗಳವಾರ 3 ಚಿನ್ನ ಸೇರಿ 4 ಪದಕ ಗೆದ್ದಿದ್ದ ಭಾರತ ಕೂಟದ ಕೊನೆ ದಿನವಾದ ಬುಧವಾರ 5 ಚಿನ್ನ, 4 ಬೆಳ್ಳಿ ಹಾಗೂ 1 ಕಂಚಿನ ಪದಕ ತನ್ನದಾಗಿಸಿಕೊಂಡಿತು. ಪುರುಷರ ಕಾಂಪೌಂಡ್‌ ವೈಯಕ್ತಿಕ ವಿಭಾಗದಲ್ಲಿ ಭಾರತ ಕ್ಲೀನ್‌ಸ್ವೀಪ್‌ ಮಾಡಿದರೆ, ರೀಕವ್‌ರ್‍ನಲ್ಲಿ ಮ್ರಿನಾಲ್‌ ಚೌಹಾಣ್‌ 2, ಕಾಂಪೌಂಡ್‌ನಲ್ಲಿ ಪ್ರಥಮೇಶ್‌ ಹ್ಯಾಟ್ರಿಕ್‌ ಬಂಗಾರ ಗೆದ್ದರು.

Latest Videos
Follow Us:
Download App:
  • android
  • ios