ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಸ್ಪರ್ಧಿಸಲಿದ್ದಾರೆ ರೋಜರ್ ಫೆಡರರ್
ಮೊಣಕಾಲು ಮಂಡಿ ಶಸ್ತ್ರಚಿಕಿತ್ಸೆಯಿಂದ ಕಳೆದೊಂದು ವರ್ಷದಿಂದ ಟೆನಿಸ್ ಕ್ರೀಡೆಯಿಂದ ದೂರವೇ ಉಳಿದಿದ್ದ ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಮುಂಬರುವ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂನಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪ್ಯಾರಿಸ್(ಏ.20): ಕಳೆದ ವರ್ಷ 2 ಬಾರಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 20 ಗ್ರ್ಯಾನ್ ಸ್ಲಾಂಗಳ ದೊರೆ, ಟೆನಿಸ್ ಮಾಂತ್ರಿಕ ರೋಜರ್ ಫೆಡರರ್, ಈ ವರ್ಷ ಫ್ರೆಂಚ್ ಓಪನ್‌ನಲ್ಲಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.
ಕಳೆದ ವರ್ಷ ಒಂದೂ ಗ್ರ್ಯಾನ್ ಸ್ಲಾಂನಲ್ಲಿ ಆಡದ ಫೆಡರರ್, ಮಂಡಿ ನೋವಿನಿಂದ ಚೇತರಿಸಿಕೊಂಡಿದ್ದು ಈಗಾಗಲೇ ಅಭ್ಯಾಸ ಆರಂಭಿಸಿರುವುದಾಗಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. ಮೇ 30ರಿಂದ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಆರಂಭಗೊಳ್ಳಲಿದೆ.
ಈ ವರ್ಷವೂ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಮುಂದೂಡಿಕೆ?
20 ಟೆನಿಸ್ ಗ್ರ್ಯಾನ್‌ಸ್ಲಾಂ ಒಡೆಯರಾಗಿರುವ ರೋಜರ್ ಫೆಡರರ್ ಕೇವಲ ಒಮ್ಮೆ ಮಾತ್ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಟ್ರೋಫಿಗೆ ಮತ್ತಿಕ್ಕಿದ್ದಾರೆ. 2009ರಲ್ಲಿ ಸ್ವಿಸ್ ಟೆನಿಸ್ ದಿಗ್ಗಜ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮುಂದಕ್ಕೆ
ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನ ಕೊನೆಯ 3 ಅರ್ಹತಾ ಟೂರ್ನಿಗಳಲ್ಲಿ ಒಂದಾದ ಇಂಡಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿ, ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಕಾರಣ, ಮೇ 11ರಿಂದ 16ರ ವರೆಗೂ ಇಲ್ಲಿ ನಡೆಯಬೇಕಿದ್ದ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಕಳೆದ ವರ್ಷ ಟೂರ್ನಿ ಕೋವಿಡ್ ಕಾರಣದಿಂದ ರದ್ದಾಗಿತ್ತು.