ನವದೆಹಲಿ[ಡಿ.31]: ಶೂಟಿಂಗ್‌ ಕ್ರೀಡೆಯನ್ನು ಕೈಬಿಟ್ಟಿದ್ದಕ್ಕೆ 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಬಹಿಷ್ಕರಿಸುವ ಯೋಚನೆಯನ್ನು ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ಕೈಬಿಟ್ಟಿದೆ. ಕ್ರೀಡಾಕೂಟಕ್ಕೆ ಭಾರತೀಯ ಕ್ರೀಡಾಪಟುಗಳನ್ನು ಕಳುಹಿಸಲು ನಿರ್ಧರಿಸಿದೆ.

2022ರಲ್ಲಿ ಭಾರತದಲ್ಲಿ ಕಾಮನ್ವೆಲ್ತ್‌ ಶೂಟಿಂಗ್‌?

ಕ್ರೀಡಾಕೂಟಕ್ಕೂ ಮುನ್ನ ಭಾರತದಲ್ಲಿ ಪ್ರತ್ಯೇಕವಾಗಿ ಕಾಮನ್‌ವೆಲ್ತ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ ಆಯೋಜಿಸಿ, ಅಲ್ಲಿ ಗೆಲ್ಲುವ ಪದಕಗಳನ್ನು ಕಾಮನ್‌ವೆಲ್ತ್‌ ಗೇಮ್ಸ್‌ನ ಪದಕ ಪಟ್ಟಿಗೆ ಪರಿಗಣಿಸುವುದಾಗಿ ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ (ಸಿಜಿಎಫ್‌) ಸ್ಪಷ್ಟಪಡಿಸಿದ ಬಳಿಕ, ಬಹಿಷ್ಕಾರ ಯೋಚನೆ ಕೈಬಿಡಲು ಇಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಐಒಎ ನಿರ್ಧರಿಸಿತು.

2026 ಇಲ್ಲವೇ 2030ರ ಕ್ರೀಡಾಕೂಟಕ್ಕೆ ಬಿಡ್‌

2010ರಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದ್ದ ಭಾರತ, ಮತ್ತೊಮ್ಮೆ ಜಾಗತಿಕ ಮಟ್ಟದ ಕೂಟಕ್ಕೆ ವೇದಿಕೆ ಒದಗಿಸಲು ಇಚ್ಛಿಸಿದೆ. 2026 ಇಲ್ಲವೇ 2030ರ ಕ್ರೀಡಾಕೂಟದ ಆತಿಥ್ಯ ಹಕ್ಕು ಪಡೆಯಲು ಬಿಡ್‌ ಸಲ್ಲಿಸುವುದಾಗಿ ಐಒಎ ತಿಳಿಸಿದೆ.