ಇಂದಿನಿಂದ ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ ಆರಂಭ
ಸಯ್ಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಕೂಟದಿಂದ ಸಿಂಧು, ಸೈನಾ ಹಿಂದೆ ಸರಿದಿದ್ದರಿಂದ ಎಲ್ಲರ ಚಿತ್ತ ಇದೀಗ ಲಕ್ಷ್ಯ ಸೇನ್‌ರತ್ತ ನೆಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಲಖನೌ(ನ.26): ಕಳೆದ 3 ತಿಂಗಳಲ್ಲಿ 4 ಪ್ರಶಸ್ತಿ ಗೆದ್ದಿರುವ ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್, ಮಂಗಳವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಸಯ್ಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ತಮ್ಮ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.
ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: 2ನೇ ಸುತ್ತಿಗೆ ಶ್ರೀಕಾಂತ್
ಇನ್ನು ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್, ಈ ಋುತುವಿನ ಮೊದಲ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದ್ದರೆ, ಹಾಲಿ ಚಾಂಪಿಯನ್ ಸಮೀರ್ ವರ್ಮಾ, ವಿಶ್ವ ಚಾಂಪಿಯನ್ ಕಂಚು ವಿಜೇತ ಬಿ. ಸಾಯಿ ಪ್ರಣೀತ್, ಯುವ ಶಟ್ಲರ್ ಲಕ್ಷ್ಯ ಸೇನ್ ಪ್ರಮುಖರಾಗಿದ್ದಾರೆ. ಥಾಯ್ಲೆಂಡ್ ಓಪನ್ ಸೂಪರ್ 500 ಪ್ರಶಸ್ತಿ ಗೆದ್ದಿದ್ದ ಪುರುಷರ ಡಬಲ್ಸ್ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಬ್ಯಾಡ್ಮಿಂಟನ್: ಲಕ್ಷ್ಯಾಸೇನ್ ಚಾಂಪಿಯನ್
ಸಿಂಧು-ಸೈನಾ ಅಲಭ್ಯ:
ವಿಶ್ವ ಚಾಂಪಿಯನ್, ಒಲಿಂಪಿಕ್ ಬೆಳ್ಳಿ ವಿಜೇತೆ ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು ವೈಯಕ್ತಿಕ ಕಾರಣಗಳಿಂದಾಗಿ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸಿಂಗಲ್ಸ್‌ನಲ್ಲಿ ಮುಗ್ದಾ ಆರ್ಗೆ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಈ ಋುತುವಿನಲ್ಲಿ ಗಾಯದಲ್ಲಿಯೇ ಹೆಚ್ಚಿನ ಸಮಯ ಕಳೆದಿದ್ದ ಸೈನಾ ನೆಹ್ವಾಲ್, ಕಳೆದ 6 ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. ಇದೀಗ ಕಡೆಯ ಕ್ಷಣದಲ್ಲಿ ಸೈನಾ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಸ್ಕಾಟ್ಲೆಂಡ್ ಓಪನ್ ಪ್ರಶಸ್ತಿ ಗೆದ್ದ ಲಕ್ಷ್ಯ ಸೇನ್
ಗ್ಲಾಸ್ಗೋ (ಸ್ಕಾಟ್ಲೆಂಡ್): ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್, ಸ್ಕಾಟಿಶ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅತ್ಯುತ್ತಮ ಲಯದಲ್ಲಿರುವ ಲಕ್ಷ್ಯ ಕೇವಲ ಮೂರು ತಿಂಗಳೊಳಗೆ ನಾಲ್ಕನೇ ಪ್ರಶಸ್ತಿ ಗೆದ್ದರು.
ಭಾನುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಬ್ರೆಜಿಲ್ನ ಯಗೊರ್ ಕೊಲ್ಹೊ ಅವರಿಗೆ 3 ಗೇಮ್ಗಳಲ್ಲಿ ಸೋಲುಣಿಸಿದರು. 56 ನಿಮಿಷ ನಡೆದಿದ್ದ ಫೈನಲ್‌ನಲ್ಲಿ 18-21, 21-18, 21-19 ಗೇಮ್ಗಳಿಂದ ಲಕ್ಷ್ಯ ಜಯಿಸಿದರು.
18ರ ಉತ್ತರಾಖಂಡ್ ಶಟ್ಲರ್ ಲಕ್ಷ್ಯ, ಕಳೆದ ಮೂರು ತಿಂಗಳಲ್ಲಿ ಸಾರ್ಲೋರ್ಲಕ್ಸ್, ಡಚ್ ಓಪನ್ ಹಾಗೂ ಬೆಲ್ಜಿಯಂ ಅಂತಾರಾಷ್ಟ್ರೀಯ ಟೂರ್ನಿ ಪ್ರಶಸ್ತಿಗಳನ್ನು ಗೆದ್ದಿದ್ದರು.