ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದ ಫೆಡರರ್
ಬಲಗಾಲಿನ ಮಂಡಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮೆಲ್ಬರ್ನ್(ಡಿ.29): ದಾಖಲೆಯ 20 ಗ್ರ್ಯಾನ್‌ಸ್ಲಾಮ್ ವಿಜೇತ, ಸ್ವಿಜರ್‌ಲೆಂಡ್ ಟೆನಿಸಿಗ ರೋಜರ್ ಫೆಡರರ್, 2021ರ ಫೆ.8 ರಿಂದ ಆರಂಭವಾಗಲಿರುವ ಆಸ್ಪ್ರೇಲಿಯನ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ.
ಫೆಡರರ್ 2 ಬಾರಿ ಬಲಗಾಲಿನ ಮಂಡಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿರುವ ಕಾರಣದಿಂದ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡುತ್ತಿಲ್ಲ ಎಂದು ವಕ್ತಾರರೊಬ್ಬರು ಹೇಳಿದ್ದಾರೆ. 2021ರಲ್ಲಿ ಫೆಡರರ್ ಕಮ್‌ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ.
ಧೋನಿ - ಫೆಡರರ್: ದೀಪಿಕಾ ಪಡುಕೋಣೆ ಡೇಟ್ ಮಾಡಿದ ಕ್ರೀಡಾಪಟುಗಳು!
ಮರ್ರೆಗೆ ವೈಲ್ಡ್ ಕಾರ್ಡ್:
ಬ್ರಿಟನ್‌ನ ಟೆನಿಸಿಗ ಆ್ಯಂಡಿ ಮರ್ರೆಗೆ ಆಸ್ಪ್ರೇಲಿಯಾ ಓಪನ್‌ಗೆ ವೈಲ್ಡ್ ಕಾರ್ಡ್ ಪ್ರವೇಶ ದೊರೆತಿದೆ. ಮರ್ರೆ 5 ಬಾರಿ ಆಸ್ಪ್ರೇಲಿಯನ್ ಓಪನ್‌ನಲ್ಲಿ ಫೈನಲ್ ಪ್ರವೇಶಿಸಿದ್ದರು. ಕೆಲ ವರ್ಷಗಳಿಂದ ಗಾಯ ಹಾಗೂ ಶಸ್ತ್ರಚಿಕಿತ್ಸೆಗಳಿಂದ ಮರ್ರೆ ಬಳಲಿದ್ದಾರೆ. ಮಾಜಿ ನಂ.1 ಟೆನಿಸಿಗ, ಸದ್ಯ 122ನೇ ರಾರಯಂಕಿಂಗ್ ಹೊಂದಿದ್ದಾರೆ.