ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಮುಗ್ಗರಿಸಿ ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬಾಸೆಲ್(ಮಾ.08)‌: ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಫೈನಲ್‌ನಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಒಲಿಂಪಿಕ್‌ ಚಿನ್ನದ ಪದಕ ವಿಜೇತೆ ಕ್ಯಾರೋಲಿನಾ ಮರಿನ್‌ ವಿರುದ್ಧ 12-21, 5-21 ಗೇಮ್‌ಗಳಲ್ಲಿ ಸೋಲುಂಡರು.

2019ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದ ಭಾರತೀಯ ಆಟಗಾರ್ತಿ ಪಿ.ವಿ. ಸಿಂಧು, ಮರಿನ್‌ರ ವೇಗ ಹಾಗೂ ನಿಖತರೆಯ ಎದುರು ಮಂಕಾದರು. ಕೇವಲ 35 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಂಡಿತು. 

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್: ಸೆಮೀಸ್‌ಗೆ ಸಿಂಧು, ಶ್ರೀಕಾಂತ್

Scroll to load tweet…

ಮರಿನ್‌ ವಿರುದ್ಧ ಸಿಂಧುಗಿದು ಸತತ 3ನೇ ಸೋಲು: ಕಳೆದ 4 ಪಂದ್ಯಗಳಲ್ಲಿ ಒಂದೇ ಒಂದು ಗೇಮ್‌ನಲ್ಲಿ ಸೋಲದ ಸಿಂಧು ವಿಶ್ವ ನಂ.7 ಸಿಂಧು, ಕಳೆದ 18 ತಿಂಗಳಲ್ಲಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ್ದರು. ಪ್ರಶಸ್ತಿ ಸುತ್ತಿನಲ್ಲಿ ಅವರು ತಮ್ಮ ಶ್ರೇಷ್ಠ ಪ್ರದರ್ಶನ ತೋರುವಲ್ಲಿ ವಿಫಲರಾದರು. ಸಿಂಧು ಮಾ.17ರಿಂದ ನಡೆಯಲಿರುವ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.