ನವದೆಹಲಿ(ಮಾ.06): ಮುಂಬರುವ ವರ್ಷಗಳಲ್ಲಿ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವುದು ಭಾರತದ ಗುರಿಯಾಗಿದ್ದು, ಈ ಬಗ್ಗೆ ಗಂಭೀರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. 

ಶುಕ್ರವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಿಜಿಜು, ‘ಕ್ರೀಡಾ ಕ್ಷೇತ್ರದಲ್ಲಿ ಭಾರತ ತಾನು ಗಳಿಸಬೇಕಿದ್ದ ಸ್ಥಾನವನ್ನು ಇನ್ನೂ ಗಳಿಸಿಲ್ಲ. ಒಲಿಂಪಿಕ್ಸ್‌ ಅತಿದೊಡ್ಡ ಕ್ರೀಡಾಕೂಟ. ಲಂಡನ್‌ 3 ಬಾರಿ ಒಲಿಂಪಿಕ್ಸ್‌ ಆಯೋಜಿಸಿದೆ. ಈ ಬಾರಿ ಒಲಿಂಪಿಕ್ಸ್‌ಗೆ ವೇದಿಕೆಯಾಗಲಿರುವ ಟೋಕಿಯೋ ಈ ಹಿಂದೆ 1964ರ ಕ್ರೀಡಾಕೂಟದ ಆತಿಥ್ಯ ವಹಿಸಿತ್ತು. ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ವರೆಗೂ ಒಲಿಂಪಿಕ್ಸ್‌ ಅಭಿಯಾನ ಪೂರ್ಣಗೊಳ್ಳುವುದಿಲ್ಲ’ ಎಂದರು.

ಖೇಲೋ ಇಂಡಿಯಾ ವಿಂಟರ್ ಗೇಮ್ಸ್: 2ನೇ ಚಿನ್ನದ ಪದಕ ಮುಡಿಗೇರಿಸಿದ ಅಂಚಲ್ ಠಾಕೂರ್!

ಭಾರತದಲ್ಲಿ ಒಲಿಂಪಿಕ್ಸ್‌ ಆಯೋಜಿಸುವ ಕನಸನ್ನು ಸಾಕಷ್ಟು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯುವ ಜನತೆ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಭಾರತ ಸರ್ಕಾರ ಖೇಲೋ ಇಂಡಿಯಾ ಹಾಗೂ ಫಿಟ್ ಇಂಡಿಯಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಎಂದು ರಿಜಿಜು ಹೇಳಿದ್ದಾರೆ.