Asianet Suvarna News Asianet Suvarna News

ದಕ್ಷಿಣ ಏಷ್ಯನ್‌ ಗೇಮ್ಸ್‌: ತೇಜಿಂದರ್‌ ಧ್ವಜ​ಧಾ​ರಿ

ಭಾರತದ ಶಾಟ್‌ಪುಟ್ ಪಟು ತೇಜಿಂದರ್‌ ಪಾಲ್‌ ಸಿಂಗ್‌ ತೂರ್‌ ದಕ್ಷಿಣ ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭದ ವೇಳೆ ಭಾರತದ ಧ್ವಜ​ಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

South Asian Games Tajinder Pal Singh Toor to be flag bearer of India
Author
New Delhi, First Published Dec 1, 2019, 12:02 PM IST

ನವ​ದೆ​ಹ​ಲಿ(ಡಿ.01): ಡಿ.1ರಿಂದ 10ರ ವರೆಗೆ ನೇಪಾ​ಳದ ಕಠ್ಮಂಡು​ ಹಾಗೂ ಪೊಖಾ​ರ​ದಲ್ಲಿ ನಡೆ​ಯ​ಲಿ​ರುವ 13ನೇ ದಕ್ಷಿಣ ಏಷ್ಯನ್‌ ಗೇಮ್ಸ್‌​ನಲ್ಲಿ, ಏಷ್ಯನ್‌ ಗೇಮ್ಸ್‌ ಹಾಲಿ ಚಾಂಪಿ​ಯನ್‌ 25 ವರ್ಷದ ಶಾಟ್‌​ಪುಟ್‌ ಪಟು ಭಾರತದ ತೇಜಿಂದರ್‌ ಪಾಲ್‌ ಸಿಂಗ್‌ ತೂರ್‌ ಧ್ವಜ​ಧಾರಿ ಆಗ​ಲಿ​ದ್ದಾ​ರೆ. 

ದಕ್ಷಿಣ ಏಷ್ಯನ್ ಗೇಮ್ಸ್‌ಗೆ ಭಾರತ ಕಬಡ್ಡಿ ತಂಡ ಪ್ರಕಟ: ಬುಲ್ಸ್ ನಾಯಕ ಪವನ್‌ಗೆ ಜಾಕ್‌ಪಾಟ್..!

‘ದಕ್ಷಿಣ ಏಷ್ಯನ್‌ ಗೇಮ್ಸ್‌​ನಲ್ಲಿ ಭಾರತ ತಂಡ​ದ ಧ್ವಜ​ಧಾ​ರಿ​ಯಾ​ಗಿ ಆಯ್ಕೆ​ಯಾ​ಗಿ​ದ್ದೀರಿ. ತೇಜಿಂದ​ರ್‌, ಈ ಮೂಲಕ ಭಾ​ರತ ಒಲಿಂಪಿಕ್‌ ಸಂಸ್ಥೆ (ಐಒ​ಎ) ನಿಮ್ಮನ್ನು ಗೌರ​ವಿ​ಸು​ತ್ತಿ​ದೆ’ ಎಂದು ಐಒಎ ಕಾರ‍್ಯ​ದರ್ಶಿ ರಾಜೀವ್‌ ಮೆಹ್ತಾ ತಿಳಿ​ಸಿ​ದ್ದಾರೆ.
ಕಳೆದ ವರ್ಷ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್’ನಲ್ಲಿ ತೇಜಿಂದರ್‌ ಪಾಲ್‌ ಸಿಂಗ್‌ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಇನ್ನು 59ನೇ ರಾಷ್ಟ್ರೀಯ ಮುಕ್ತ ಅಥ್ಲೇಟಿಕ್ಸ್ ಚಾಂಪಿಯನ್’ಶಿಪ್’ನಲ್ಲಿ 50.75 ಮೀಟರ್ ಶಾಟ್‌​ಪುಟ್‌ ಎಸೆಯುವ ಮೂಲಕ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಮುರಿದು ಹೊಸ ದಾಖಲೆ ಬರೆದಿದ್ದರು.

ಮುಷ್ತಾಕ್‌ ಅಲಿ ಟ್ರೋಫಿ ಫೈನಲ್: ಕರ್ನಾಟಕಕ್ಕಿಂದು ತಮಿಳುನಾಡು ಚಾಲೆಂಜ್‌

ನೇಪಾಳವು ಮೂರನೇ ಬಾರಿಗೆ ದಕ್ಷಿಣ ಏಷ್ಯನ್‌ ಗೇಮ್ಸ್‌​ ಕೂಟಕ್ಕೆ ಆತಿಥ್ಯ ವಹಿಸುತ್ತಿದ್ದು, 7 ದೇಶಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿವೆ. ಸುಮಾರು 2700 ಅಥ್ಲೀಟಿಕ್ಸ್’ಗಳು 26 ಕ್ರೀಡೆಗಳಲ್ಲಿ 319 ಚಿನ್ನ ಸಹಿತ 1,119 ಪದಕಗಳಿಗಾಗಿ ಹೋರಾಡಲಿದ್ದಾರೆ. ಭಾರತದಿಂದ 499 ಅಥ್ಲೀಟ್ಸ್’ಗಳು ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 
 

Follow Us:
Download App:
  • android
  • ios