ಮೋಟೋಜಿಪಿ ಬೈಕ್ ರೇಸಿಂಗ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ರೇಸರ್ ಜಾರ್ಜ್ ಮಾರ್ಟಿನ್ ಬೈಕ್‌ನಿಂದ ಚಿಮ್ಮಿ ಟ್ರ್ಯಾಕ್‌ಗೆ ಬಿಳುವ ದೃಶ್ಯ ಸೆರೆಯಾಗಿದೆ. ಅಪಘಾತದಿಂದ ಮಾರ್ಟಿನ್‌ರನ್ನು ಆಸ್ಪತ್ರೆ ದಾಖಲಿಸಲಾಗಿದೆ

ಮಲೇಷಿಯಾ(ಫೆ.05) ವಿಶ್ವದ ಜನಪ್ರಿಯ ಬೈಕ್ ರೇಸಿಂಗ್ ಮೋಟೋಜಿಪಿ ರೇಸಿಂಗ್‌ನಲ್ಲಿ ಭಾರಿ ಅಪಘಾತ ಸಂಭವಿಸಿದೆ. ಮಲೇಷಿಯಾದಲ್ಲಿ ನಡೆಯುತ್ತಿರುವ ಮೋಟೋಜಿಪಿ ಪ್ರೀ ಟೆಸ್ಟಿಂಗ್ ರೇಸಿಂಗ್‌ನಿಂದ ಇದೀಗ ಖ್ಯಾತ ರೇಸರ್ ಜಾರ್ಜ್ ಮಾರ್ಟಿನ್ ಹೊರಬಿದ್ದಿದ್ದಾರೆ. ಸಿಪಂಗ್ ಸರ್ಕ್ಯೂಟ್ ಟ್ರ್ಯಾಕ್‌ನಲ್ಲಿ ಜಾರ್ಜ್ ಮಾರ್ಟಿನ್ ಬೈಕ್ ಎರಡು ಪಲ್ಟಿಯಾಗಿದೆ. ಈ ವೇಳೆ ಬೈಕ್‌ನಿಂದ ಚಿಮ್ಮಿ ನೆಲಕ್ಕೆ ಬಿದ್ದ ಮಾರ್ಟಿನ್ ಗಾಯಗೊಂಡಿದ್ದಾರೆ. ಹೀಗಾಗಿ ಜಾರ್ಜ್ ಮಾರ್ಟಿನ್‌ರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಇಷ್ಟೇ ಸರ್ಜರಿ ಕಾರಣದಿಂದ ಜಾರ್ಜ್ ಮಾರ್ಟಿನ್‌ರನ್ನು ಯೂರೋಪ್ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

ಮೋಟೋಜಿಪಿ ಪ್ರೀ ಟೆಸ್ಟಿಂಗ್ ರೇಸಿಂಗ್‌ನಲ್ಲಿ ಮೊದಲ ಸೆಶನ್‌ನಲ್ಲೂ ಜಾರ್ಜ್ ಮಾರ್ಟಿನ್ ಬೈಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಆದರೆ ಈ ವೇಳೆ ಅಪಾಯದ ಪ್ರಮಾಣ ಕಡಿಮೆಯಾಗಿತ್ತು. ಆದರೆ ಎರಡನೇ ಸೆಶನ್‌ನಲ್ಲಿ ಭಾರಿ ಅನಾಹುತ ಸಂಭವಿಸಿದೆ. ಅತೀ ವೇಗದಲ್ಲಿ ಸಾಗುತ್ತದ್ದ ಜಾರ್ಜ್ ಮಾರ್ಟಿನ್ ರೈಟ್ ಟರ್ನ್ ಬಳಿಕ ಲೆಫ್ಟ್ ಟರ್ನ್‌ಗಾಗಿ ಬೈಕ್ ಸ್ಲೋಪ್ ಮಾಡುತ್ತಿದ್ದಂತೆ ನಿಯಂತ್ರಣ ತಪ್ಪಿದೆ. ಅತೀ ವೇಗದ ಪರಿಣಾಮ ಬೈಕ್ ಕ್ಷಣಾರ್ಧದಲ್ಲಿ ಪಲ್ಟಿಯಾಗಿದೆ. ಈ ವೇಳೆ ಜಾರ್ಜ್ ಮಾರ್ಟಿನ್ ಎತ್ತರಕ್ಕೆ ಚಿಮ್ಮಿ ಟ್ರ್ಯಾಕ್ ಮೇಲೆ ಬಿದ್ದಿದ್ದಾರೆ. ಎರಡು ಬಾರಿ ಟ್ರಾಕ್‌ಗೆ ಜಾರ್ಜ್ ಮಾರ್ಟಿನ್ ತಲೆ ಹಾಗೂ ಭಾಗ ಬಡಿದಿದೆ. ಎಲ್ಲಾ ಸುರಕ್ಷತಾ ಜಾಕೆಟ್, ಹೆಲ್ಮೆಟ್‌ನಿಂದ ಬದುಕುಳಿದಿದ್ದಾರೆ.

ವಿಶ್ವ ಜಿಎಸ್ ಮೋಟಾರ್‌ಸೈಕಲ್ ರೇಸ್ ಸ್ಪರ್ಧೆ: ಭಾರತಕ್ಕೆ ಕೀರ್ತಿ ತಂದ ಬೈಕರ್ ಶಹಾನ್

ಬಿದ್ದ ರಭಸದಲ್ಲಿ ಮಾರ್ಟಿನ್‌ಗೆ ಏಳಲು ಸಾಧ್ಯವಾಗಿಲ್ಲ. ತೀವ್ರವಾಗಿ ಗಾಯಗೊಂಡ ಮಾರ್ಟಿನ್ ಟ್ರಾಕ್ ಮೇಲೆ ಬೀಳುತ್ತಿದ್ದಂತೆ ರಕ್ಷಣಾ ತಂಡಗಳು ಕ್ಷಣದಲ್ಲಿ ಸ್ಥಳಕ್ಕೆ ಧಾವಿಸಿದೆ. ಅಷ್ಟೇ ವೇಗದಲ್ಲಿ ಜಾರ್ಜ್ ಮಾರ್ಟಿನ್‌ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಜಾರ್ಜ್ ಮಾರ್ಟಿನ್ ಬಲ ಗೈ ಹಾಗೂ ಎಡ ಕಾಲು ಕಾಲು ಮುರಿತಗೊಂಡಿದೆ. ಮೂಳೆ ಮುರಿತಗೊಂಡಿದೆ. ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನ್ ಮಾಡಲಾಗಿದೆ. 

Scroll to load tweet…

ಮಲೇಷಿಯಾದ ಆಸ್ಪತ್ರೆಯಲ್ಲಿ ಜಾರ್ಜ್ ಮಾರ್ಟಿನ್ ಇನ್ನೊಂದು ದಿನ ಚಿಕಿತ್ಸೆ ಪಡೆಯಲಿದ್ದಾರೆ. ಮೂಳೆ ಮುರಿತಗೊಂಡಿರುವ ಕಾರಣ ಸರ್ಜರಿ ಅವಶ್ಯವಿದೆ. ಹೀಗಾಗಿ ಜಾರ್ಜ್ ಮಾರ್ಟಿನ್‌ರನ್ನು ಯೂರೋಪ್‌ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುತ್ತದೆ. ಅಪಘಾತದಿಂದ ಜಾರ್ಜ್ ಮಾರ್ಟಿನ್ ಇನ್ನುಳಿದ ಮಲೇಷಿಯಾ ಪ್ರಿ ಮೋಟೋಜಿಪಿ ಟೆಸ್ಟಿಂಗ್ ಸೆಶನ್‌ನಿಂದ ಹೊರಬಿದ್ದಿದ್ದಾರೆ. 27 ವರ್ಷದ ಜಾರ್ಜ್ ಮಾರ್ಟಿನ್ 2024ರಲ್ಲಿ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದರು. ಈ ವೇಳೆ ಡುಕಾಟಿಯಿಂದ ಎಪ್ರಿಲಿಯಾ ಬೈಕ್‌ ಆಯ್ಕೆ ಮಾಡಿಕೊಂಡಿದ್ದರು.