ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು 2022ರ ಸೂಪರ್ 500 ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಿಂಧು ರೆಡಿ ಸಿಂಗಾಪುರ ಓಪನ್ ಟೂರ್ನಿಯಲ್ಲಿ ಪಿವಿ ಸಿಂಧು ಭರ್ಜರಿ ಪ್ರದರ್ಶನ

ಸಿಂಗಾಪುರ(ಜು.16): ಈ ವರ್ಷದ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸಜ್ಜಾಗಿದ್ದಾರೆ. ಸಿಂಗಾಪುರ ಓಪನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಸಯೆನಾ ಕವಾಕಮಿ ವಿರುದ್ಧ 21-15, 21-7 ಅಂತರದಲ್ಲಿ ಸುಲಭ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದಾರೆ. 32 ನಿಮಿಷದಲ್ಲಿ ಸಿಂಧು ಅಮೋಘ ಪ್ರದರ್ಶನದ ಮೂಲಕ ಸಯೆನಾ ಕಮಾಕಮಿ ಮಣಿಸಿದ್ದಾರೆ. ಸೈಯ್ಯದ್ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್ ಟೂರ್ನಿಯಲ್ಲಿ ಭಾರತ ಇತಿಹಾಸ ಬರೆಯಲು ಸಜ್ಜಾಗಿದೆ. ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಎದರು ಕಳೆಗುಂದಿದ ಸಯೆನಾ ಬಹುಬೇಗನೆ ಸೋಲೊಪ್ಪಿಕೊಂಡರು. ಮಾಜಿ ವಿಶ್ವಚಾಂಪಿಯನ್ ಪಿವಿ ಸಿಂಧೂ, 38ನೇ ಶ್ರೇಯಾಂಕಿತ ಸಯೆನಾ ಕವಾಕಮಿ ವಿರುದ್ಧ ಅತ್ಯುತ್ತಮ ಪ್ರದರ್ಶನ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ. ಆರಂಭದಿಂದಲೇ ಹಿನ್ನಡೆ ಅನುಭವಿಸಿದ ಸಯೆನಾ ಕವಾಕಮಿ ಪ್ರಬಲ ಪ್ರತಿರೋಧ ನೀಡಲು ವಿಫಲರಾದರು. ಆದರೆ ಪ್ರತಿ ಪಾಯಿಂಟ್‌ಗೂ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಇದರೊಂದಿಗೆ ಎರಡು ವಿಡಿಯೋ ರೆಫರೆಲ್ಸ್ ಕೂಡ ಸಿಂಧೂ ಪರವಾಗಿತ್ತು. ಸ್ಮ್ಯಾಶ್, ಬೇಸ್‌ಲೈನ್ ಕಾಲ್ಸ್ ಜೊತೆಗೆ ಕವಾಕಮಿ ಮಾಡಿದ ಕೆಲ ತಪ್ಪುಗಳಿಂದ ಸಿಂಧು ಮೊದಲ ಗೇಮ್‌ನಲ್ಲಿ ಸುಲಭವಾಗಿ ಮೇಲುಗೈ ಸಾಧಿಸಿದರು.

ಎರಡನೇ ಗೇಮ್‌ನಲ್ಲೂ ಕವಾಕಮಿ(japanese saena kawakami) ಪ್ರಾಬಲ್ಯ ಸಾಧಿಸಲು ವಿಫಲರಾದರು. ಆರಂಭದಲ್ಲೇ 0-5 ಅಂತರದಿಂದ ಹಿನ್ನಡೆ ಅನುಭವಿಸಿದರು. ಮಿಡ್ ಗೇಮ್ ಇಂಟರ್ವೆಲ್ ಸಮಯದಲ್ಲಿ ಸಿಂಧು(PV Sindhu) 17-5 ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು. ಆಕ್ರಮಣಕಾರಿ ಆಟದ ಜೊತೆಗೆ ಎದುರಾಳಿಗಳ ತಪ್ಪುಗಳ ಲಾಭ ಪಡೆದ ಸಿಂಧು ಬಹುಬೇಗನೆ ಸೆಕೆಂಡ್ ಗೇಮ್ ಮುಗಿಸಿ ಭರ್ಜರಿ ಗೆಲುವು ದಾಖಲಿಸಿದರು.

ಸ್ವಿಸ್‌ ಓಪನ್‌ ಗೆದ್ದ ಪಿವಿ ಸಿಂಧುವಿಗೆ ಪ್ರಧಾನಿ ಮೋದಿ ಅಭಿನಂದನೆ..!

ಕ್ವಾರ್ಟರ್ ಫೈನಲ್‌ನಲ್ಲಿ ಚೀನಾ ಹ್ಯಾನ್ ವಿರುದ್ಧ ಗೆಲುವು
ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಹಣಾಹಣಿಯಲ್ಲಿ(Singapore Open) 3ನೇ ಶ್ರೇಯಾಂಕಿತ ಸಿಂಧು, ಚೀನಾದ(China) ಹ್ಯಾನ್‌ ಯು ವಿರುದ್ಧ 17​-21, 21​-11, 21​-19 ಗೇಮ್‌ಗಳಿಂದ ರೋಚಕವಾಗಿ ಗೆದ್ದರು. ಅಂತಿಮ 4ರ ಸುತ್ತಿನಲ್ಲಿ ಅವರು ಜಪಾನಿನ ಸೆನಾ ಕವಾಕಮಿ ವಿರುದ್ಧ ಸೆಣಸಲಿದ್ದಾರೆ. ಆದರೆ ಸೈನಾ ಜಪಾನ್‌ನ ಆಯಾ ಒಹೊರಿ ವಿರುದ್ಧ 13-21, 21-15, 20-22 ಗೇಮ್‌ಗಳಿಂದ ಪರಾಭವಗೊಂಡರು. ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್‌ ಜಪಾನಿನ ಕೊಡಾಯಿ ನರೋಕಾ ವಿರುದ್ಧ 12-​21, 21​-14, 21-​18 ಸೋತು ಹೊರಬಿದ್ದರು. ಪುರುಷರ ಡಬಲ್ಸ್‌ನಲ್ಲಿ ಧೃವ್‌-ಅರ್ಜುನ್‌ ಜೋಡಿಯೂ ಸೋಲನುಭವಿಸಿತು.

ಕಾಮನ್ವೆಲ್ತ್‌ ಕ್ರೀಡಾಕೂಟಕ್ಕೂ ಮುನ್ನ ನಡೆಯಲಿರುವ ಕೊನೆಯ ಟೂರ್ನಿ ಇದ್ದಾಗಿರುವ ಅತ್ಯುತ್ತಮ ಪ್ರದರ್ಶನ ನೀಡಲು ಶೆಟ್ಲರ್‌ಗಳು ಭಾರಿ ತಯಾರಿ ಮಾಡಿಕೊಂಡಿದ್ದಾರೆ. ಸಿಂಗಾಪುರ ಓಪನ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಪಿವಿ ಸಿಂಧೂ ವಿಯೆಟ್ನಾಂನ ತುಯ್‌ ಲಿನ್‌ ವಿರುದ್ಧ 19-21, 21-19, 21-18 ಗೇಮ್‌ಗಳಿಂದ ಗೆಲುವು ಸಾಧಿಸಿದ್ದರು. ಇದೀಗ ಫೈನಲ್ ಪಂದ್ಯದಲ್ಲಿ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆಯಲು ಪಿವಿ ಸಿಂಧೂ ಸಜ್ಜಾಗಿದ್ದಾರೆ.