Pro Kabaddi League: ಮೂರನೇ ಹಂತದ ವೇಳಾಪಟ್ಟಿ ಪ್ರಕಟ

* ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮೂರನೇ ಹಂತದ ವೇಳಾಪಟ್ಟಿ ಪ್ರಕಟ

* ಜನವರಿ 31ರಿಂದ ಫೆಬ್ರವರಿ 6ರ ವರೆಗಿನ ವೇಳಾಪಟ್ಟಿ ಪ್ರಕಟ

* ಪ್ಲೇ-ಆಫ್ಸ್‌ ರೇಸ್‌ನಲ್ಲಿ ಉಳಿದುಕೊಳ್ಳಬೇಕಿದ್ದರೆ ದಿಟ್ಟ ಪ್ರದರ್ಶನ ತೋರಬೇಕಿದೆ ಬುಲ್ಸ್‌

Pro Kabaddi League Organisers release schedule for next phase starting 31 January kvn

ಬೆಂಗಳೂರು(ಜ.30): ಪ್ರೊ ಕಬಡ್ಡಿ ಲೀಗ್ (Pro Kabaddi League) 8ನೇ ಆವೃತ್ತಿಯ 3ನೇ ಹಂತದ ವೇಳಾಪಟ್ಟಿಯನ್ನು ಆಯೋಜಕರು ಪ್ರಕಟಿಸಿದ್ದು, ಜನವರಿ 31ರಿಂದ ಫೆಬ್ರವರಿ 6ರ ವರೆಗೂ ಬೆಂಗಳೂರು ಬುಲ್ಸ್‌ (Bengaluru Bulls) 3 ಪಂದ್ಯಗಳನ್ನು ಆಡಲಿದೆ. 15 ಪಂದ್ಯಗಳಲ್ಲಿ 8 ಗೆಲುವುಗಳನ್ನು ಕಂಡಿರುವ ಬುಲ್ಸ್‌ 46 ಅಂಕ ಕಲೆಹಾಕಿದೆ. 7ನೇ ಸ್ಥಾನದಲ್ಲಿರುವ ಯು.ಪಿ.ಯೋಧಾ (UP Yoddha) 40 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ಅಗ್ರ 6 ಸ್ಥಾನಗಳನ್ನು ಪಡೆಯಲು ಪೈಪೋಟಿ ಹೆಚ್ಚಾಗುತ್ತಿದೆ. 

ಅಂಕಗಳ ಅಂತರ ಕಡಿಮೆ ಇರುವ ಕಾರಣ ಬೆಂಗಳೂರು ಬುಲ್ಸ್‌, ಪ್ಲೇ-ಆಫ್ಸ್‌ ರೇಸ್‌ನಲ್ಲಿ ಉಳಿದುಕೊಳ್ಳಬೇಕಿದ್ದರೆ ಬಾಕಿ ಇರುವ 7 ಪಂದ್ಯಗಳಲ್ಲಿ ಕನಿಷ್ಠ 4ರಿಂದ 5 ಪಂದ್ಯಗಳನ್ನು ಗೆಲ್ಲಬೇಕಿದೆ. ಜನವರಿ 30ರಂದು ತಮಿಳ್‌ ತಲೈವಾಸ್‌ ತಂಡವನ್ನು ಎದುರಿಸಲಿರುವ ಬುಲ್ಸ್‌, 3ನೇ ಹಂತದ ಮೊದಲ ಪಂದ್ಯವನ್ನು ಫೆಬ್ರವರಿ 1ರಂದು ಯು.ಪಿ.ಯೋಧಾ ವಿರುದ್ಧ ಆಡಲಿದೆ. ಫೆಬ್ರವರಿ 4ಕ್ಕೆ ಡೆಲ್ಲಿ, ಫೆಬ್ರವರಿ 6ಕ್ಕೆ ಗುಜರಾತ್‌ ವಿರುದ್ಧ ಸೆಣಸಲಿದೆ. ಫೆಬ್ರವರಿ 4, 5 ಹಾಗೂ 6ರಂದು ತಲಾ 3 ಪಂದ್ಯಗಳು ನಡೆಯಲಿವೆ.

ಪ್ರೊ ಕಬಡ್ಡಿ: ಡೆಲ್ಲಿ ಮತ್ತೆ ಅಗ್ರಸ್ಥಾನಕ್ಕೆ

ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಡಬಾಂಗ್‌ ಡೆಲ್ಲಿ (Dabang Delhi) ಮತ್ತೆ ಅಗ್ರಸ್ಥಾನಕ್ಕೇರಿದೆ. ಶನಿವಾರ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ 41-22 ಅಂಕಗಳಿಂದ ಜಯ ಗಳಿಸಿತು. ಇದರೊಂದಿಗೆ ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಂಡ ಡೆಲ್ಲಿ 8ನೇ ಗೆಲುವು ದಾಖಲಿಸಿದರೆ, ಗುಜರಾತ್‌ ಕೇವಲ 3 ಜಯದೊಂದಿಗೆ 11ನೇ ಸ್ಥಾನದಲ್ಲೇ ಉಳಿದಿದೆ. 

Australian Open: ಐತಿಹಾಸಿಕ 21ನೇ ಗ್ರ್ಯಾನ್‌ ಸ್ಲಾಂ ಗೆಲುವಿನ ಉತ್ಸಾಹದಲ್ಲಿ ರಾಫೆಲ್ ನಡಾಲ್‌

ಶನಿವಾರ ತೆಲುಗು ಟೈಟಾನ್ಸ್‌-ಬೆಂಗಾಲ್‌ ವಾರಿಯ​ರ್ಸ್‌ ನಡುವೆ ನಡೆಯಬೇಕಿದ್ದ ಮತ್ತೊಂದು ಪಂದ್ಯ ಕೆಲವೇ ಗಂಟೆಗಳಿರುವಾಗ ಮುಂದೂಡಲಾಯಿತು. ಪಂದ್ಯ ಮುಂದೂಡಿಕೆ ಆಗಲು ಕಾರಣವನ್ನು ಆಯೋಜಕರು ಬಹಿರಂಗಪಡಿಸಿಲ್ಲ.

ಸದ್ಯ ದಬಾಂಗ್ ಡೆಲ್ಲಿ ತಂಡವು 48 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಬುಲ್ಸ್ ತಂಡವು 46 ಅಂಕಗಳ ಸಹಿತ ಎರಡನೇ ಸ್ಥಾನದಲ್ಲಿದೆ. ಇನ್ನು ಪಾಟ್ನಾ ಪೈರೇಟ್ಸ್‌ ಹಾಗೂ ಹರ್ಯಾಣ ಸ್ಟೀಲರ್ಸ್‌ ತಂಡಗಳು ಕ್ರಮವಾಗಿ ಮೊದಲ 4 ಸ್ಥಾನಗಳಲ್ಲಿ ಭದ್ರವಾಗಿವೆ. ಇನ್ನು ತೆಲುಗು ಟೈಟಾನ್ಸ್‌ ತಂಡವು 14 ಪಂದ್ಯಗಳಿಂದ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ನಗೆ ಬೀರಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.

ಇಂದಿನ ಪಂದ್ಯಗಳು: 
ಪಾಟ್ನಾ-ಜೈಪುರ, ಸಂಜೆ 7.30ಕ್ಕೆ, 
ಬೆಂಗಳೂರು-ತಲೈವಾಸ್‌, ರಾತ್ರಿ 8.30ಕ್ಕೆ

ಏಷ್ಯನ್‌ ಗೇಮ್ಸ್‌: ಭಾರತ ಚೆಸ್‌ ತಂಡಕ್ಕೆ ವಿಶಿ ಮೆಂಟರ್‌

ನವದೆಹಲಿ: ಚೀನಾದ ಹ್ಯಾಂಗ್‌ಝುನಲ್ಲಿ ಈ ವರ್ಷ ಸೆಪ್ಟೆಂಬರ್ 10ರಿಂದ 25ರ ವರೆಗೂ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿ (Asian Games) ಪಾಲ್ಗೊಳ್ಳಲಿರುವ ಭಾರತೀಯ ಚೆಸ್‌ ಆಟಗಾರರಿಗೆ ದಿಗ್ಗಜ ಆಟಗಾರ, ಐದು ಬಾರಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ (Viswanathan Anand) ಮಾರ್ಗದರ್ಶನ ನೀಡಲಿದ್ದಾರೆ. 

Australian Open 2022: ವರ್ಷದ ಮೊದಲ ಗ್ರ್ಯಾನ್‌ ಸ್ಲಾಂ ಜಯಿಸಿ ಇತಿಹಾಸ ಬರೆದ ಆ್ಯಶ್ಲೆ ಬಾರ್ಟಿ

‘ಏಷ್ಯನ್‌ ಗೇಮ್ಸ್‌ನಲ್ಲಿ 4 ಚಿನ್ನದ ಪದಕಗಳನ್ನು ಗೆಲ್ಲುವ ಗುರಿಯೊಂದಿಗೆ ಆನಂದ್‌ರನ್ನು ಮೆಂಟರ್‌ ಆಗಿ ನೇಮಿಸಲಾಗಿದೆ’ ಎಂದು ಭಾರತೀಯ ಚೆಸ್‌ ಫೆಡರೇಶನ್‌ (Indian Chess Federation) ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ. 12 ವರ್ಷಗಳ ಬಳಿಕ ಏಷ್ಯನ್‌ ಗೇಮ್ಸ್‌ಗೆ ಚೆಸ್‌ ಸೇರ್ಪಡೆಯಾಗಿದ್ದು, 2010ರಲ್ಲಿ ಕೊನೆ ಬಾರಿ ನಡೆದಾಗ ಭಾರತ 2 ಕಂಚಿನ ಪದಕ ಗೆದ್ದಿತ್ತು.

Latest Videos
Follow Us:
Download App:
  • android
  • ios