ಇಂದಿನಿಂದ PBL: ಚೆನ್ನೈನಲ್ಲಿ ಮೊದಲ ಚರಣ
5ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಪಿ.ವಿ. ಸಿಂದು ತಮ್ಮ ಬ್ಯಾಡ್ಮಿಂಟನ್ ಗುರು ಪುಲ್ಲೇಲಾ ಗೋಪಿಚಂದ್ ಮಗಳು ಗಾಯಿತ್ರಿ ನಡುವಿನ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ....
ಚೆನ್ನೈ(ಜ.20): 5ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಸೋಮವಾರದಿಂದ ಆರಂಭವಾಗಲಿದ್ದು, ಚೆನ್ನೈನಲ್ಲಿ ಮೊದಲ ಚರಣ ನಡೆಯಲಿದೆ.
ಹಾಲಿ ಚಾಂಪಿಯನ್ ಬೆಂಗಳೂರು ರಾಪ್ಟರ್ಸ್, ಅವಧ್ ವಾರಿಯರ್ಸ್, ಮುಂಬೈ ರಾಕೆಟ್ಸ್, ಹೈದ್ರಾಬಾದ್ ಹಂಟರ್ಸ್, ಚೆನ್ನೈ ಸೂಪರ್‌ಸ್ಟಾರ್ಸ್, ನಾರ್ಥ್ ಈಸ್ಟರ್ನ್ ವಾರಿಯರ್ಸ್ ಮತ್ತು ಪುಣೆ 7 ಏಸಸ್ ತಂಡಗಳು ಅದೃಷ್ಠ ಪರೀಕ್ಷೆಗೆ ಇಳಿಯುತ್ತಿವೆ. ಟೂರ್ನಿಯ ಒಟ್ಟು ಪ್ರಶಸ್ತಿ ಮೊತ್ತ 6 ಕೋಟಿ ಆಗಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ತಂಡ, ಹೈದ್ರಾಬಾದ್ ಎದುರು ಸೆಣಸಲಿದೆ.
ಪಿ ವಿ ಸಿಂಧು ತಮ್ಮ ಗುರು ಪುಲ್ಲೇಲಾ ಗೋಪಿಚಂದ್ ಪುತ್ರಿ ಗಾಯಿತ್ರಿ ಗೋಪಿಚಂದ್ ವಿರುದ್ಧ ಸೆಣಸಲಿದ್ದಾರೆ. ಉದ್ಘಾಟನಾ ಪಂದ್ಯ ಸೋಮವಾರ(ಜ.20) ಸಂಜೆ 7 ಗಂಟೆಗೆ ಆರಂಭವಾಗಲಿದೆ. ಗೋಪಿಚಂದ್ ಪುತ್ರಿ ಹಾಗೂ ಸಿಂಧು ನಡುವಿನ ಕಾದಾಟ ಸಾಕಷ್ಟು ರೋಚಕತೆಯನ್ನು ಹುಟ್ಟುಹಾಕಿದೆ.