ರೋಯಿಂಗ್ ಸ್ಪರ್ಧೆಯ ವೇಳೆ ಮೊಬೈಲ್ ಪತ್ತೆ: ಗೆದ್ದಿದ್ದ ಪದಕವನ್ನೇ ಕಳಕೊಂಡ ಇಟಲಿ ಅಥ್ಲೀಟ್
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ರೋಯಿಂಗ್ ಸ್ಪರ್ಧೆಯ ವೇಳೆ ಮೊಬೈಲ್ ಇಟ್ಟುಕೊಂಡಿದ್ದಕ್ಕೆ ಗೆದ್ದ ಪದಕವನ್ನು ಇಟಲಿ ಅಥ್ಲೀಟ್ ಕಳೆದುಕೊಂಡ ಘಟನೆ ನಡೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್: ಸ್ಪರ್ಧೆ ವೇಳೆ ದೋಣಿಯಲ್ಲಿ ಮೊಬೈಲ್ ಪತ್ತೆಯಾಗಿದ್ದಕ್ಕೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ರೋಯಿಂಗ್‌ನಲ್ಲಿ ಗೆದ್ದಿದ್ದ ಕಂಚಿನ ಪದಕವನ್ನು ಇಟಲಿಯ ಜಿಯಕಾಮೊ ಪೆನಿನಿ ಕಳೆದುಕೊಂಡಿದ್ದಾರೆ.
ಭಾನುವಾರ ಪಿಆರ್1 ಪುರುಷರ ಸಿಂಗಲ್ಸ್ ಸ್ಕಲ್ಸ್ ಫೈನಲ್‌ನಲ್ಲಿ ಪೆನಿನಿ ಸ್ಪರ್ಧಿಸಿ, 3ನೇ ಸ್ಥಾನ ಪಡೆದಿದ್ದರು. ಆದರೆ ಸ್ಪರ್ಧೆ ವೇಳೆ ಬೋಟ್‌ನಲ್ಲಿ ಮೊಬೈಲ್ ಕಂಡುಬಂದಿದ್ದರಿಂದ ಪೆನಿನಿಯನ್ನು ಆಯೋಜಕರು ಅಮಾನತುಗೊಳಿಸಿ, ಪದಕ ಪಟ್ಟಿಯಿಂದ ಹೊರಗಿಟ್ಟಿದ್ದಾರೆ. ಇದನ್ನು ವಿರೋಧಿಸಿ ಇಟಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಯೋಜಕರು ತಿರಸ್ಕರಿಸಿದ್ದಾರೆ. ತಾವು ಸ್ಪರ್ಧೆ ವೇಳೆ ಮೊಬೈಲ್ ಬಳಸಿಲ್ಲ, ನೀರಿನ ಬಾಟಲ್ ಜೊತೆ ಬ್ಯಾಗ್‌ನಲ್ಲಿ ಇಟ್ಟಿದ್ದೆ ಎಂದು ಪೆನಿನಿ ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ ಆರ್‌ಸಿಬಿ ಆಫರ್ ರಿಜೆಕ್ಟ್ ಮಾಡಿದ ಸ್ಟಾರ್ ಆಟಗಾರನೀಗ ಹೊಟ್ಟೆಪಾಡಿಗಾಗಿ ಅಕೌಂಟ್ಸ್ ಮ್ಯಾನೇಜರ್ ಆಗಿ ಕೆಲಸ..!
ಬ್ಯಾಡ್ಮಿಂಟನ್ ಕಂಚು ಗೆದ್ದ ಭಾರತದ ನಿತ್ಯಶ್ರೀ ಶಿವನ್
ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದೆ. ಸೋಮವಾರ ಮಧ್ಯರಾತ್ರಿ ಮಹಿಳೆಯರ ಸಿಂಗಲ್ಸ್‌ನ ಎಸ್‌ಎಚ್6 ವಿಭಾಗ(ಕುಬ್ಜ ಕ್ರೀಡಾಪಟುಗಳು ಸ್ಪರ್ಧಿಸುವ ವಿಭಾಗ)ದಲ್ಲಿ ನಿತ್ಯಶ್ರೀ ಶಿವನ್ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಸೆಮಿಫೈನಲ್‌ನಲ್ಲಿ ಚೀನಾದ ಶುವಾಂಗ್‌ಬೊ ವಿರುದ್ಧ 13-21, 19-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡಿದ್ದ ತಮಿಳುನಾಡಿದ 19 ವರ್ಷದ ನಿತ್ಯಶ್ರೀ, ಕಂಚಿನ ಪದಕ ಪಂದ್ಯದಲ್ಲಿ ಇಂಡೋನೇಷ್ಯಾದ ಮರ್ಲಿನಾ ರಿನಾ ವಿರುದ್ಧ 21-14, 21-6ರಲ್ಲಿ ಸುಲಭ ಗೆಲುವು ಸಾಧಿಸಿದರು. ಕುಬ್ಜರಾಗಿರುವ ನಿತ್ಯಶ್ರೀ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಪದಕ ತಮ್ಮದಾಗಿಸಿಕೊಂಡರು. ಕಳೆದ ವರ್ಷ ಅವರು ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ 2 ಕಂಚಿನ ಪದಕ ಗೆದ್ದಿದ್ದರು.
ಪ್ಯಾರಾಲಿಂಪಿಕ್ಸ್ ಆರ್ಚರಿಯಲ್ಲಿ ಕಂಚು ಗೆದ್ದ ರಾಕೇಶ್-ಶೀತಲ್ ದೇವಿ; ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
ಕ್ರಿಕೆಟ್ ನೆಚ್ಚಿನ ಕ್ರೀಡೆಯಾದ್ರೂ ಬ್ಯಾಡ್ಮಿಂಟನ್ ಆಡಿದ ನಿತ್ಯಶ್ರೀ
ತಮಿಳುನಾಡಿದನ ಹೊಸೂರಿನ ನಿತ್ಯಶ್ರೀಗೆ ಬಾಲ್ಯದಲ್ಲಿ ಕ್ರಿಕೆಟ್ ನೆಚ್ಚಿನ ಕ್ರೀಡೆಯಾಗಿತ್ತು. ಆದರೆ 2016ರ ರಿಯೋ ಪ್ಯಾರಾಲಿಂಪಿಕ್ಸ್ ಬಳಿಕ ಅವರು ಬ್ಯಾಡ್ಮಿಂಟನ್ ಮೇಲೆ ಹೆಚ್ಚಿನ ಒಲವು ತೋರಿಸಿದರು. 2 ಬಾರಿ ಒಲಿಂಪಿಕ್ಸ್ ಚಾಂಪಿಯನ್, ಚೀನಾದ ಲಿನ್ ಡಾನ್ ಅವರನ್ನು ರೋಲ್ ಮಾಡೆಲ್ ಎಂದು ಪರಿಗಣಿಸಿರುವ ನಿತ್ಯಶ್ರೀ, ಲಿನ್ ಬಗೆಗಿನ ಹೆಚ್ಚಿನ ಬರಹಗಳನ್ನು ಓದಿ ಬ್ಯಾಡ್ಮಿಂಟನ್ ಕಡೆ ಆಕರ್ಷಿತರಾಗಿದ್ದರು. 2019ರಲ್ಲಿ ಪ್ಯಾರಾ ಗೇಮ್ಸ್ ಬಗ್ಗೆ ಅರಿತ ನಿತ್ಯಶ್ರೀ ವೃತ್ತಿಪರ ಬ್ಯಾಡ್ಮಿಂಟನ್ ಬಗ್ಗೆ ಗಮನಹರಿಸಿದರು. ಈವರೆಗೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಹಲವು ಪದಕ ಗೆದ್ದಿದ್ದಾರೆ.