ದಂಗಲ್ ಸಿನಿಮಾ ನೆನಪಿಸಿದ ವಿನೇಶ್ ಫೋಗಾಟ್; ವಿಶ್ವ ಚಾಂಪಿಯನ್‌ಗೆ ಸೋಲುಣಿಸಿದ ಭಾರತೀಯ ಕಲಿ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಾಟ್ ಮೊದಲ ಸುತ್ತಿನಲ್ಲೇ ಹಾಲಿ ಚಾಂಪಿಯನ್‌ ಜಪಾನಿನ ಯ್ಯೂ ಸುಸುಕಿ ವಿರುದ್ದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Paris Olympics Vinesh Phogat does the unthinkable beats Olympic champ Susaki to enter quarters kvn

ಪ್ಯಾರಿಸ್: ತೀವ್ರ ಕುತೂಹಲ ಮೂಡಿಸಿದ ಮಹಿಳೆಯರ 50 ಕೆ.ಜಿ ಪ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಟೋಕಿಯೋ ಒಲಿಂಪಿಕ್ ಚಾಂಪಿಯನ್ ಜಪಾನಿನ ಯ್ಯೂ ಸುಸುಕಿ ಎದುರು ಭರ್ಜರಿ ಜಯ ಸಾಧಿಸಿದ ವಿನೇಶ್ ಫೋಗಾಟ್ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಅಕ್ಷರಶಃ ದಂಗಲ್ ಸಿನಿಮಾದ ಕ್ಲೈಮ್ಯಾಕ್ಸ್‌ನಂತಿದ್ದ ರೋಚಕ ಕಾದಾಟದಲ್ಲಿ ಕೊನೆಯ ಕ್ಷಣದಲ್ಲಿ ತಂತ್ರಗಾರಿಗೆ ಮೆರೆದ ವಿನೇಶ್, ವಿಶ್ವ ನಂ.1 ಕುಸ್ತಿಪಟುವಿಗೆ ಶಾಕ್ ನೀಡುವ ಮೂಲಕ ಪವಾಡಸದೃಶ ರೀತಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಆರಂಭದಿಂದಲೇ ಜಪಾನಿನ ಯ್ಯೂ ಸುಸುಕಿ ಸಾಕಷ್ಟು ರಕ್ಷಣಾತ್ಮಕ ಆಟದ ಮೂಲಕ ವಿನೇಶ್‌ಗೆ ಅಂಕ ಗಳಿಸಲು ಅವಕಾಶ ಮಾಡಿಕೊಡಲಿಲ್ಲ. ಬಹುತೇಕ ಪಂದ್ಯ ಮುಕ್ತಾಯದ ಹಂತದ ವೇಳೆಗೆ ಜಪಾನಿನ ಯ್ಯೂ ಸುಸುಕಿ 2-0 ಅಂಕಗಳ ಮುನ್ನಡೆ ಸಾಧಿಸಿದ್ದರು. ಆದರೆ ಕೊನೆಯ 15 ಸೆಕೆಂಡ್‌ಗಳು ಬಾಕಿ ಇದ್ದಾಗ ತಮ್ಮ ಅನುಭವವನ್ನು ಚೆನ್ನಾಗಿಯೇ ಬಳಸಿಕೊಂಡ ವಿನೇಶ್, ಹಾಲಿ ಚಾಂಪಿಯನ್‌ ಆಟಗಾರ್ತಿಗೆ ಮೊದಲ ಸುತ್ತಿನಲ್ಲೇ ಶಾಕ್ ನೀಡುವಲ್ಲಿ ಯಶಸ್ವಿಯಾದರು. 

ಪ್ಯಾರಿಸ್ ಒಲಿಂಪಿಕ್ಸ್‌ ಸಮಾರೋಪಕ್ಕೆ ಮನು ಭಾಕರ್ ಭಾರತದ ಧ್ವಜಧಾರಿ

ವಿನೇಶ್ ಫೋಗಾಟ್ ಕಳೆದ ವರ್ಷ ಪೂರ್ತಿ, ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್‌ಭೂಷಣ್ ಸಿಂಗ್ ವಿರುದ್ದ ಪ್ರತಿಭಟನೆಯ ಮುಂಚೂಣಿ ವಹಿಸಿದ್ದರು. ಇದರ ಹೊರತಾಗಿ ವಿನೇಶ್‌ಗೆ ಮೊದಲ ಸುತ್ತಿನಲ್ಲೇ 4 ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಜಪಾನ್ ಆಟಗಾರ್ತಿಯ ಸವಾಲು ಎದುರಾಗಿತ್ತು. ಆದರೆ ಗೆಲ್ಲಲೇಬೇಕು ಎನ್ನುವ ಛಲದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಬಂದಿಳಿದಿರುವ ವಿನೇಶ್ ಫೋಗಾಟ್, ಎಲ್ಲಾ ಸವಾಲು ಮೆಟ್ಟಿನಿಂತು ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

Latest Videos
Follow Us:
Download App:
  • android
  • ios