ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಪಾಲ್ಗೊಂಡು ಜಾವೆಲಿನ್ ಥ್ರೋ ಫೈನಲ್ ಪಂದ್ಯವನ್ನು 27 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲಲ್ಇದೆ ನೋಡಿ

ಪ್ಯಾರಿಸ್‌: ನೀರಜ್‌ ಚೋಪ್ರಾರ ಜಾವೆಲಿನ್‌ ಎಸೆತ ಹಾಗೂ ಭಾರತದ ಹಾಕಿ ತಂಡದ ಕಂಚಿನ ಪದಕ ಪಂದ್ಯವನ್ನು ಒಲಿಂಪಿಕ್ಸ್‌ ವೆಬ್‌ಸೈಟ್‌ ಹಾಗೂ ಆ್ಯಪ್‌ನಲ್ಲಿ ಬರೋಬ್ಬರಿ 27.3 ಕೋಟಿ ಮಂದಿ ವೀಕ್ಷಿಸಿದ್ದಾಗಿ ಆಯೋಜಕರು ತಿಳಿಸಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿರುವ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕ ಕ್ರಿಸ್ಟಿಯನ್‌ ಕ್ಲಾಯು, ‘ಒಲಿಂಪಿಕ್ಸ್‌ ವೆಬ್‌ಸೈಟ್‌ ಹಾಗೂ ಆ್ಯಪ್‌ನಲ್ಲಿ 27.3 ಕೋಟಿ ಮಂದಿ ವೀಕ್ಷಿಸಿದ್ದಾರೆ. ಇದರಲ್ಲಿ ಬಹುತೇಕರು ಚೋಪ್ರಾರ ಜಾವೆಲಿನ್‌ ಎಸೆತ ಹಾಗೂ ಹಾಕಿ ತಂಡದ ಕಂಚಿನ ಪದಕ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ಪೈಕಿ ಹೆಚ್ಚಿನ ಮಂದಿ ಭಾರತೀಯರು’ ಎಂದಿದ್ದಾರೆ.

ಒಲಿಂಪಿಕ್ಸ್‌ಗಾಗಿ ಸರ್ಜರಿ ಮುಂಡೂಡಿದ್ದೆ: ನೀರಜ್‌ ಚೋಪ್ರಾ

ಪ್ಯಾರಿಸ್: ದೀರ್ಘ ಸಮಯದಿಂದ ತೊಡೆಯ ಸ್ನಾಯು ನೋವಿನಿಂದ ಬಳಲುತ್ತಿರುವ ಭಾರತದ ತಾರಾ ಅಥ್ಲೀಟ್ ನೀರಜ್‌ ಚೋಪ್ರಾ, ಒಲಿಂಪಿಕ್ಸ್‌ಗಾಗಿ ಶಸ್ತ್ರಚಿಕಿತ್ಸೆಯನ್ನು ಮುಂಡೂಡಿದ್ದೆ ಎಂದಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು ಎಂದು ತಿಳಿಸಿದ್ದಾರೆ. 

ಅಮನ್ ಶೆರಾವತ್ ಬದುಕಿನ ಕಥೆಯೇ ರೋಚಕ..! ಅನಾಥ ಹುಡುಗನಿಗೆ ಆಸರೆಯಾಗಿದ್ದು ಅಜ್ಜನ ಗರಡಿ..!

ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿರುವ ಅವರು, ‘ನಾನು ಜಾವೆಲಿನ್‌ ಎಸೆಯುವಾಗ ನನ್ನ ಶೇ.60-70 ರಷ್ಟು ಗಮನ ಗಾಯದ ಮೇಲೇ ಇರುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾಗಲು ವೈದ್ಯರು ಹೇಳಿದ್ದರು. ಆದರೆ ಇದರಿಂದ ಒಲಿಂಪಿಕ್ಸ್‌ ಸಿದ್ಧತೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುವ ಕಾರಣ ಶಸ್ತ್ರಚಿಕಿತ್ಸೆ ಮುಂದೂಡಿದ್ದೆ’ ಎಂದಿದ್ದಾರೆ.

ಬೆಳ್ಳಿ ಪದಕ ಪಡೆದ ನೀರಜ್‌ಗೆ ಮೋದಿ, ಮುರ್ಮು ಅಭಿನಂದನೆ

ನವದೆಹಲಿ: ಪ್ಯಾರಿಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್ ಚೋಪ್ರಾ ಸಾಧನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ಮೋದಿ, ‘ನೀರಜ್ ಚೋಪ್ರಾ ಒಬ್ಬ ಶ್ರೇಷ್ಠ ವ್ಯಕ್ತಿ. ಅವರು ಮತ್ತೊಂದು ಒಲಿಂಪಿಕ್ ಪದಕದೊಂದಿಗೆ ಹಿಂತಿರುಗಿದ್ದಾರೆ. ಬೆಳ್ಳಿ ಗೆದ್ದಿದ್ದಕ್ಕಾಗಿ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ. ‘ಚೋಪ್ರಾ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಮುಂದೆ ಅವರಿಂದ ಹೆಚ್ಚಿನ ಪದಕಗಳನ್ನು ಭಾರತ ನಿರೀಕ್ಷಿಸುತ್ತದೆ’ ಎಂದು ರಾಷ್ಟ್ರಪತಿ ಮುರ್ಮು ತಿಳಿಸಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಮಾನ್‌ಶುಖ್ ಮಾಂಡವಿಯಾ, ಸ್ಟಾರ್ ಪಿಸ್ತೂಲ್ ಶೂಟರ್ ಮನು ಭಾಕರ್, ಶೂಟರ್ ಗಗನ್ ನಾರಂಗ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತದ ಕೋಚ್‌ ಗೌತಮ್‌ ಗಂಭೀರ್‌, ವೇಗದ ಬೌಲರ್‌ ಮೊಹಮದ್ ಶಮಿ, ಮಾಜಿ ಕ್ರಿಕೆಟಿಗರಾದ ಕೃಷ್ಣಮಾಚಾರಿ ಶ್ರೀಕಾಂತ್‌, ವಿವಿಎಸ್ ಲಕ್ಷ್ಮಣ್ ಕೂಡಾ ನೀರಜ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.