ನಮ್ಮನ್ನು ಹಾವಾಡಿಗರು & ಆನೆಗಳ ನಾಡು ಎಂದು ನೋಡುತ್ತಿದ್ದರು; ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದ ಕೊಹ್ಲಿ
ಇದೇ ಜುಲೈ 26ರಿಂದ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಅಥ್ಲೀಟ್‌ಗಳಿಗೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಸ್ಪೂರ್ತಿಯ ಮಾತುಗಳನ್ನಾಡಿ ಹುರಿದುಂಬಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳಿಗೆ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದು, ನಿಮ್ಮ ಸಾಧನೆಯಿಂದಾಗಿ ದೇಶದ ಹೆಸರು ವಿಶ್ವದೆಲ್ಲೆಡೆ ಪಸರಿಸಲಿ ಎಂದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ತಾಣಗಳಲ್ಲಿ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ.
'ಭಾರತವನ್ನು ಮೊದಲು ಪ್ರಪಂಚದಾದ್ಯಂತ ಹಾವಾಡಿಗರು ಮತ್ತು ಆನೆಗಳ ನಾಡು ಎಂದು ಮಾತ್ರ ನೋಡುತ್ತಿದ್ದರು. ಆದರೆ ಈಗ ಇದು ಬದಲಾಗಿದೆ. ಇಂದು ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಗೋಬಲ್ ಟೆಕ್ ಹಬ್ ಎಂದು ಕರೆಯಲ್ಪಡುತ್ತೇವೆ. ನಾವು ಕ್ರಿಕೆಟ್, ಬಾಲಿವುಡ್ ಮೂಲಕ ಗುರುತಿಸಲ್ಪಡುತ್ತಿದ್ದೇವೆ. ಈಗ ನಾವೆಲ್ಲರೂ ಒಲಿಂಪಿಕ್ಸ್ ಕಡೆ ಗಮನಹರಿಸಿದ್ದೇವೆ. ನಮ್ಮ ದೇಶದ ಕ್ರೀಡಾಪಟುಗಳು ಒಲಿಂಪಿಕ್ ನಲ್ಲಿ ಹೆಚ್ಚಿನ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆಲ್ಲುವಂತಾಗಲಿ' ಎಂದು ಹಾರೈಸಿದ್ದಾರೆ.
ಕೋಪಾ ಅಮೆರಿಕ ಫುಟ್ಬಾಲ್: 16ನೇ ಬಾರಿ ಕಪ್ ಗೆದ್ದ ಅರ್ಜೆಂಟೀನಾ
'ನಮ್ಮ ಅಫೀಟ್‌ಗಳು ಪ್ಯಾರಿಸ್‌ನಲ್ಲಿ ಪದಕ ಗೆಲ್ಲುವ ಕಾತರದಲ್ಲಿದ್ದಾರೆ. ಶತಕೋಟಿ ಭಾರತೀ ಯರ ಆಶೀರ್ವಾದ ಅವರ ಮೇಲಿದೆ. ನಿಮ್ಮ ಪ್ರದರ್ಶನವನ್ನು ನೋಡಲು ನಾವೆಲ್ಲರೂ ಉತುಕರಾಗಿದ್ದೇವೆ' ಎಂದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 26ರಿಂದ ಆರಂಭವಾಗಿ ಆಗಸ್ಟ್ 11ರ ವರೆಗೆ ನಡೆಯಲಿದೆ. ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆ ಎನಿಸಿಕೊಂಡಿರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದಿಂದ 118 ಅಥ್ಲೀಟ್‌ಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 118 ಅಥ್ಲೀಟ್‌ಗಳ ಪೈಕಿ 48 ಮಂದಿ ಮಹಿಳಾ ಅಥ್ಲೀಟ್‌ಗಳಾಗಿದ್ದಾರೆ. ಭಾರತೀಯರು ಈ ಬಾರಿ 16 ಕ್ರೀಡೆಗಳ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಇಂಟ್ರೆಸ್ಟಿಂಗ್ ಸಂಗತಿಯೆಂದರೆ, 118 ಭಾರತೀಯ ಅಥ್ಲೀಟ್‌ಗಳ ಪೈಕಿ 26 ಕ್ರೀಡಾಪಟುಗಳು ಖೇಲೋ ಇಂಡಿಯಾ ಮೂಲಕ ಬೆಳಕಿಗೆ ಬಂದಿದ್ದರೆ, 72 ಅಥ್ಲೀಟ್‌ಗಳು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಒಲಿಂಪಿಕ್ಸ್ ಅಥ್ಲೀಟ್‌ಗಳ ಪಟ್ಟಿಯಲ್ಲಿ ಭಾರತದ ಅಭಾ ಕಾತೂನ್ ಹೆಸರು ನಾಪತ್ತೆ!
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಅಥ್ಲೀಟ್‌ಗಳ ಹೆಸರನ್ನು ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಶನಿವಾರ ಪ್ರಕಟಿಸಿದೆ. ಆದರೆ ಅಚ್ಚರಿ ಎಂಬಂತೆ ಭಾರತದ ಶಾಟ್‌ಪುಟ್ ಪಟು ಅಭಾ ಕಾತೂನ್ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದೆ. ಹೀಗಾಗಿ ಅವರ ಒಲಿಂಪಿಕ್ಸ್ ಸ್ಪರ್ಧೆಯ ಕನಸು ಭಗ್ನಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಅಭಾ ವಿಶ್ವ ರ್‍ಯಾಂಕಿಂಗ್ ಆಧಾರದಲ್ಲಿ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಅವರು ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಪ್ರಕಟಿಸಿದ್ದ 30 ಮಂದಿ ಅಥ್ಲೀಟ್‌ಗಳ ಪಟ್ಟಿಯಲ್ಲಿದ್ದರು. ಆದರೆ ವಿಶ್ವ ಅಥ್ಲೆಟಿಕ್ಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ 29 ಮಂದಿ ಆಟಗಾರರ ಹೆಸರು ಉಲ್ಲೇಖಿಸಿದ್ದು, ಅಭಾ ಹೆಸರು ಪಟ್ಟಿಯಲ್ಲಿಲ್ಲ. ತಾಂತ್ರಿಕ ದೋಷದಿಂದ ಹೆಸರು ನಾಪತ್ತೆಯಾಗಿದೆಯೋ ಅಥವಾ ಅಭಾ ಸ್ಪರ್ಧೆಯಿಂದಲೇ ಹೊರಬಿದ್ದಿದ್ದಾರೊ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.