ಕ್ವಾರ್ಟರ್‌ಗೆ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್‌, ಒಲಿಂಪಿಕ್‌ ಪದಕಕ್ಕೆ ಇನ್ನೊಂದೇ ಪಂಚ್ ಬಾಕಿ!

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ತಾರಾ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್‌ ಮಹಿಳೆಯರ 75 ಕೆ.ಜಿ. ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇನ್ನೊಂದು ಪಂದ್ಯ ಗೆದ್ದರೂ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ

Paris 2024 Olympics Lovlina Borgohain qualify for quarterfinal one win away from assured medal kvn

ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್‌ ಕಂಚು ವಿಜೇತ ಬಾಕ್ಸರ್‌ ಲವ್ಲೀನಾ ಬೊರ್ಗೊಹೈನ್‌ ಪ್ಯಾರಿಸ್‌ ಗೇಮ್ಸ್‌ನ ಮಹಿಳೆಯರ 75 ಕೆ.ಜಿ. ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಖಚಿತಪಡಿಸಿಕೊಳ್ಳಲು ಅವರಿಗೆ ಇನ್ನೊಂದು ಗೆಲುವು ಬೇಕಿದೆ. ಬಾಕ್ಸಿಂಗ್‌ನಲ್ಲಿ ಸೆಮೀಸ್‌ ಪ್ರವೇಶಿಸಿದರೆ ಪದಕ ಸಿಗಲಿದೆ.

ಬುಧವಾರ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ನಾರ್ವೆಯ ಸುನ್ನಿವಾ ಹೊಫ್ಸ್ಟಾಡ್‌ ವಿರುದ್ಧ 5-0 ಅಂತರದಲ್ಲಿ ಸುಲಭ ಗೆಲುವು ಸಾಧಿಸಿದರು. ಆ.4ರಂದು ನಡೆಯಲಿರುವ ಕ್ವಾರ್ಟರ್‌ನಲ್ಲಿ ಲವ್ಲೀನಾಗೆ ಅಗ್ರ ಶ್ರೇಯಾಂಕಿತೆ ಚೀನಾದ ಲೀ ಕ್ವಿಯಾನ್‌ ಎದುರಾಗಲಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌: ಶೂಟಿಂಗ್‌ನಲ್ಲಿ ಇಂದು ಮತ್ತೊಂದು ಪದಕ ನಿರೀಕ್ಷೆ!

ಕ್ವಾರ್ಟರ್‌ನಲ್ಲಿ ಇಂದು ಸಾತ್ವಿಕ್‌-ಚಿರಾಗ್‌ ಕಣಕ್ಕೆ

ಭಾರತದ ಪದಕ ಭರವಸೆಗಳಲ್ಲಿ ಒಂದೆನಿಸಿರುವ ಬ್ಯಾಡ್ಮಿಂಟನ್‌ ಪುರುಷರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಗುರುವಾರ 3ನೇ ಶ್ರೇಯಾಂಕಿತ ಸ್ವಾತಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಜೋಡಿ ಕಣಕ್ಕಿಳಿಯಲಿದೆ. ಗುಂಪು ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದ ಭಾರತೀಯ ಜೋಡಿಗೆ ಮಲೇಷ್ಯಾದ ಆ್ಯರೊನ್‌ ಚಿಯಾ ಹಾಗೂ ವೊಯೊ ಯಿಕ್‌ ಸೊ ಜೋಡಿ ಎದುರಾಗಲಿದೆ. ಕಳೆದ 3 ಮುಖಾಮುಖಿಗಳಲ್ಲೂ ಮಲೇಷ್ಯಾ ಜೋಡಿಯನ್ನು ಭಾರತೀಯ ಜೋಡಿ ಸೋಲಿಸಿದೆ.

ಪ್ರಿ ಕ್ವಾರ್ಟರ್‌ಗೆ ಸಿಂಧು, ಲಕ್ಷ್ಯ ಸೇನ್

ಪ್ಯಾರಿಸ್‌: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಲಕ್ಷ್ಯ ಸೇನ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಸಿಂಧು, ಇಸ್ಟೋನಿಯಾದ ಕ್ರಿಸ್ಟಿನ್‌ ಕುಬಾ ವಿರುದ್ಧ 21-5, 21-10ರಲ್ಲಿ ಗೆದ್ದರೆ, ಪುರುಷರ ಸಿಂಗಲ್ಸ್‌ನ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಲಕ್ಷ್ಯ, ವಿಶ್ವ ನಂ.4, ಹಾಲಿ ಏಷ್ಯನ್‌ ಚಾಂಪಿಯನ್‌ ಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟಿ ವಿರುದ್ಧ 21-18, 21-12ರಲ್ಲಿ ಸುಲಭ ಗೆಲುವು ಸಾಧಿಸಿದರು. 

ಪ್ಯಾರಿಸ್ ಒಲಿಂಪಿಕ್ಸ್‌ ಪದಕ ವಿಜೇತರಿಗೆ ನೀಡುತ್ತಿರುವ ನಿಗೂಢ ಗಿಫ್ಟ್‌ ಬಾಕ್ಸ್‌ನಲ್ಲಿ ಅಂತದ್ದೇನಿದೆ?

ಆರ್ಚರಿ: ಪ್ರಿ ಕ್ವಾರ್ಟರ್‌ಗೆ ದೀಪಿಕಾ

ಭಾರತದ ಅಗ್ರ ಆರ್ಚರಿ ಪಟು ದೀಪಿಕಾ ಕುಮಾರಿ, ಮಹಿಳೆಯರ ರೀಕರ್ವ್‌ ವೈಯಕ್ತಿಕ ವಿಭಾಗದಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ತಂಡ ವಿಭಾಗದಲ್ಲಿ ನೀರಸ ಪ್ರದರ್ಶನ ತೋರಿದ್ದ ದೀಪಿಕಾ, ಬುಧವಾರ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಎಸ್ಟೋನಿಯಾದ ರೀನಾ ಪರ್ನಾಟ್‌ ವಿರುದ್ಧ 6-5ರಲ್ಲಿ ಗೆದ್ದರೆ, 2ನೇ ಸುತ್ತಿನಲ್ಲಿ ನೆದರ್‌ಲೆಂಡ್ಸ್‌ನ ಕ್ವಿಂಟಿ ರೊಫೆನ್‌ ವಿರುದ್ಧ 6-2ರಲ್ಲಿ ಜಯಿಸಿದರು. ಶನಿವಾರ ಪ್ರಿ ಕ್ವಾರ್ಟರ್‌ನಲ್ಲಿ ದೀಪಿಕಾಗೆ ಜರ್ಮನಿಯ ಮಿಷೆಲ್‌ ಕ್ರೊಪ್ಪೆನ್‌ ಎದುರಾಗಲಿದ್ದಾರೆ.
 

Latest Videos
Follow Us:
Download App:
  • android
  • ios