Asianet Suvarna News Asianet Suvarna News

ಹಾಕಿಗೆ ಚೈತನ್ಯ ತುಂಬಿದ್ದ ಓರಿಸ್ಸಾದಿಂದ ಮತ್ತೊಂದು ಅದ್ಭುತ ಹೆಜ್ಜೆ

*  ರಾಷ್ಟ್ರೀಯ ಕ್ರೀಡೆ ಹಾಕಿಕೆ ಉತ್ತೇಜನ ನೀಡಿಕೊಂಡು ಬಂದಿದ್ದ ಓರಿಸ್ಸಾ ಸರ್ಕಾರ
*    89 ಬಹು-ಉಪಯೋಗಿ ಒಳಾಂಗಣ  ಕ್ರೀಡಾಂಗಣ ನಿರ್ಮಾಣಕ್ಕೆ ತೀರ್ಮಾನ 
*  ಹಾಕಿ ಆಟಗಾರರ ಬೆನ್ನಿಗೆ ನಿಂತಿದ್ದ ಸಿಎಂ ನವೀನ್ ಪಟ್ನಾಯಕ್

Odisha Only State That Supported Hockey Will Now Build 89 Stadiums With Healthcare mah
Author
Bengaluru, First Published Aug 11, 2021, 5:31 PM IST
  • Facebook
  • Twitter
  • Whatsapp

ಭುವನೇಶ್ವರ(ಆ. 11)  ಹಾಕಿ ಆಟಗಾರರ ಬೆನ್ನಿಗೆ ನಿಂತಿದ್ದ ಓರಸ್ಸಾ ಸರ್ಕಾರ ಈಗ ಮತ್ತೊಂದು ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ.  ಕ್ರೀಡೆಗೆ ಸಂಬಂಧಿಸಿದ ಮೂಲ ಸೌಕರ್ಯ ಹೆಚ್ಚಳ ಮಾಡಲು ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ.

ಓರಿಸ್ಸಾ ಸರ್ಕಾರ ಕ್ಯಾಬಿನೆಟ್ ಸಭೆ ನಡೆಸಿದ್ದು 693.35  ಕೋಟಿ ರೂ. ವೆಚ್ಚದಲ್ಲಿ  89 ಬಹು-ಉಪಯೋಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ತೀರ್ಮಾನ ತೆಗೆದುಕೊಂಡಿದೆ. ನಗರ ಕ್ರೀಡಾ ಅಭಿವೃದ್ಧಿ ಯೋಜನೆಯಡಿ ಈ  ತೀರ್ಮಾನ ತೆಗೆದುಕೊಂಡಿದೆ.   ಈ ಯೋಜನೆ ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಹೊಸ ಚೈತನ್ಯ ನೀಡಲಿದೆ.

ಚಿನ್ನ ಗೆದ್ದ ಸಾಧನೆ ನೋಡಲಿ ಮಿಲ್ಖಾ ನಮ್ಮೊಂದಿಗೆ ಇರಬೇಕಿತ್ತು

ರಾಜ್ಯದ 85 ನಗರ ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ನೀಡಲಾಗಿದ್ದು ಭುವನೇಶ್ವರ, ಕಟಕ್, ರೌರ್ಖೆಲಾದಲ್ಲಿ ಕ್ರೀಡಾ ಚಟುವಟಿಕೆ ಅಭಿವೃದ್ಧಿಗೆ ಪ್ರೇರಣೆ ನೀಡಲಾಗುತ್ತಿದೆ. 

 ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾತರತದ ಮಹಿಳಾ ಮತ್ತು ಪುರುಷರ ಹಾಕಿ ತಂಡ ಅದ್ಭುತ ಸಾಧನೆ ಮಾಡಿತ್ತು.  ಓರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಆಟಗಾರರ ಹಿಂದೆ ನಿಂತಿದ್ದರು. ಇದೀಗ  ಮತ್ತೊಂದು ಅದ್ಭುತ ಹೆಜ್ಜೆ  ಇಟ್ಟಿದ್ದು ಕ್ರೀಡಾ ಅಭಿವೃದ್ಧಿಯಲ್ಲಿ ಕ್ರಾಂತಿಕಾರಕ  ಬೆಳವಣಿಗೆ ನಿರೀಕ್ಷೆ ಮಾಡಲಾಗಿದೆ. 

Follow Us:
Download App:
  • android
  • ios