ಮೇರಿ ಕೋಮ್‌ ಭೇಟಿಯಾಗಿ ಆಶೀರ್ವಾದ ಪಡೆದ ನಿಖಾತ್‌

2019ರಲ್ಲಿ ಮೇರಿಗೆ ಸವಾಲು ಹಾಕಿ ಸುದ್ದಿಯಾಗಿದ್ದ ನಿಖಾತ್‌ ಜರೀನ್‌. ಟೋಕಿಯೋ ಒಲಿಂಪಿಕ್ಸ್‌ನ ಅರ್ಹತಾ ಟೂರ್ನಿಯ ವಿಚಾರಕ್ಕೆ ಸಂಬಂಧಿಸಿದಂತೆ ನಿಖಾತ್‌, ಮೇರಿಗೆ ಸವಾಲು ಹಾಕಿ ಸುದ್ದಿಯಾಗಿದ್ದರು. 

Nikhat Zareen who created history by winning gold in the World Boxing Championship met the legend MC Mary Kom san

ನವದೆಹಲಿ (ಮೇ 26): ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ( World Boxing Championship )ಚಿನ್ನ ಗೆದ್ದ ಭಾರತದ 5ನೇ ಮಹಿಳಾ ಬಾಕ್ಸರ್‌ ( Women Boxer ) ಎನ್ನುವ ಹಿರಿಮೆಗೆ ಪಾತ್ರರಾಗಿರುವ ನಿಖಾತ್‌ ಜರೀನ್‌ (Nikhat Zareen) 2019ರಲ್ಲಿ ತಾವು ಸವಾಲು ಹಾಕಿದ್ದ 5 ಬಾರಿ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ ( MC Mary Kom ) ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಫೋಟೋ ಹಂಚಿಕೊಂಡಿರುವ ಅವರು, ‘ನಿಮ್ಮ ರೋಲ್‌ ಮಾಡೆಲ್‌ ಆರ್ಶೀವಾದ ಇಲ್ಲದಿದ್ದರೆ ಯಾವುದೇ ಗೆಲುವು ಪೂರ್ಣವಾಗಲ್ಲ’ ಎಂದಿದ್ದಾರೆ. ಕಳೆದ ವಾರ ನಿಖಾತ್‌ ಚಿನ್ನ ಗೆದ್ದ ಬಳಿಕ ಮೇರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು.

2019ರಲ್ಲಿ ಟೋಕಿಯೋ ಒಲಿಂಪಿಕ್ಸ್‌ನ (Tokyo Olympics) ಅರ್ಹತಾ ಟೂರ್ನಿಯ ವಿಚಾರಕ್ಕೆ ಸಂಬಂಧಿಸಿದಂತೆ ನಿಖಾತ್‌, ಮೇರಿಗೆ ಸವಾಲು ಹಾಕಿ ಸುದ್ದಿಯಾಗಿದ್ದರು. ಒಲಿಂಪಿಕ್ಸ್‌ನ ಫ್ಲೈ ವೇಟ್‌(48ರಿಂದ 51 ಕೆ.ಜಿ. ವಿಭಾಗ) ಅರ್ಹತಾ ಟೂರ್ನಿಗೆ ಭಾರತೀಯ ಬಾಕ್ಸಿಂಗ್‌ ಫೆಡರೇಶನ್‌(ಬಿಎಫ್‌ಐ) ಕೋಮ್‌ರನ್ನು ನೇರವಾಗಿ ಆಯ್ಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಿಖಾತ್‌, ಆಗಿನ ಕ್ರೀಡಾ ಸಚಿವ ಕಿರಣ್‌ ರಿಜಿಜುಗೆ (Kiran Rijiju) ಪತ್ರ ಬರೆದು ತಮಗೂ ಅವಕಾಶ ಸಿಗಬೇಕು ಎಂದು ಕೋರಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಟ್ರಯಲ್ಸ್‌ನಲ್ಲಿ ಮೇರಿ 9-1ರಲ್ಲಿ ನಿಖಾತ್‌ರನ್ನು ಸೋಲಿಸಿ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ಆಯ್ಕೆಯಾಗಿದ್ದರು. ಪಂದ್ಯದ ಬಳಿಕ ನಿಖಾತ್‌ ಆಲಿಂಗನ ಮಾಡಲು ಪ್ರಯತ್ನಿಸಿದ್ದರೂ ಮೇರಿ ಅದನ್ನು ನಿರ್ಲಕ್ಷಿಸಿದ್ದರು.

ಬಳಿಕ ಪ್ರತಿಕ್ರಿಯಿಸಿದ್ದ ಮೇರಿ, ಅನಗತ್ಯವಾಗಿ ನನ್ನ ಹೆಸರು ಎಳೆದು ತಂದು ನಿಖಾತ್‌ ವಿವಾದ ಸೃಷ್ಟಿಸಿದ್ದರು ಎಂದಿದ್ದರು. ನಿಖಾತ್‌, ಮೇರಿ ಅವರ ಒಲಿಂಪಿಕ್ಸ್‌ ಅಭಿಯಾನಕ್ಕೆ ಶುಭ ಹಾರೈಸಿದ ಬಳಿಕ ವಿವಾದ 

ಫಿನ್ಲೆಂಡ್‌ನಲ್ಲಿ ತರಬೇತಿ ಪಡೆಯಲಿರುವ ಚೋಪ್ರಾ
ನವದೆಹಲಿ:
ಟೋಕಿಯೋ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜಾವೆಲಿನ್‌ ಎಸೆತಗಾರ ಭಾರತದ ನೀರಜ್‌ ಚೋಪ್ರಾ ಇನ್ನು ಫಿನ್ಲೆಂಡ್‌ನಲ್ಲಿ ತರಬೇತಿ ಪಡೆಯಲಿದ್ದಾರೆ. 24 ವರ್ಷದ ನೀರಜ್‌, ಸದ್ಯ ಟರ್ಕಿಯ ಗ್ಲೋರಿಯಾ ಸ್ಪೋರ್ಟ್ಸ್ ಅರೆನಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಗುರುವಾರ ಅವರು ಫಿನ್ಲೆಂಡ್‌ಗೆ ತೆರಳಲಿದ್ದು, ಅಲ್ಲಿಯ ಕೋರ್ಟೇನ್‌ ಒಲಿಂಪಿಕ್ಸ್‌ ತರಬೇತಿ ಕೇಂದ್ರದಲ್ಲಿ ಜೂನ್‌ 22ರವರೆಗೆ ಅಭ್ಯಾಸ ನಡೆಸಲಿದ್ದಾರೆ. ಸುಮಾರು 9.8 ಲಕ್ಷ ರು. ವೆಚ್ಚದಲ್ಲಿ ನೀರಜ್‌ ಅವರಿಗೆ ನಾಲ್ಕು ವಾರಗಳ ತರಬೇತಿಗೆ ಸರ್ಕಾರದ ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಂ ಯೋಜನೆಯಡಿ(ಟಾಫ್ಸ್‌) ಅನುಮೋದನೆ ನೀಡಲಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ತಿಳಿಸಿದೆ.

ತಣ್ಣಗಾಗಿತ್ತು.ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ಬಾತ್ರಾ ವಜಾ
ನವದೆಹಲಿ:
ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಅಧ್ಯಕ್ಷ ಸ್ಥಾನದಿಂದ ನರೇಂದ್ರ ಬಾತ್ರಾ ಅವರನ್ನು ಕೆಳಗಿಳಿಸಲಾಗಿದ್ದು, ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾಗಿದ್ದ ಅನಿಲ್‌ ಖನ್ನಾ ಅವರು ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬಾತ್ರಾ ಅವರನ್ನು ಹಾಕಿ ಇಂಡಿಯಾದ ಆಜೀವ ಸದಸ್ಯರನ್ನಾಗಿ ಮಾಡಿರುವುದು ಅಮಾನ್ಯ ಎಂದು ಬುಧವಾರ ದೆಹಲಿ ಹೈಕೋರ್ಟ್ ತಿಳಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಕ್ರೀಡಾ ನಿಯಮಗಳನ್ನು ಗಾಳಿಗೆ ತೂರಿರುವ ಹಾಕಿ ಇಂಡಿಯಾವನ್ನು ಆಡಳಿತ ಸಮಿತಿಯ ಕಣ್ಗಾವಲಿನಲ್ಲಿಡಲು ನ್ಯಾಯಾಲಯ ಸೂಚಿಸಿದೆ. ಬಾತ್ರಾ 2017ರಲ್ಲಿ ಐಒಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರನ್ನು ಹಾಕಿ ಇಂಡಿಯಾಕ್ಕೆ ಆಜೀವ ಸದಸ್ಯರನ್ನಾಗಿ ನೇಮಕ ಮಾಡಿರುವುದರನ್ನು ಪ್ರಶ್ನಿಸಿ 1975ರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ಹಾಕಿ ತಂಡದಲ್ಲಿದ್ದ ಅಸ್ಲಂ ಖಾನ್‌ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

Latest Videos
Follow Us:
Download App:
  • android
  • ios