ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಬೇಟೆಯಾಡಿದ ನೀರಜ್ ಚೋಪ್ರಾ ಹಾಗೂ ಮನು ಭಾಕರ್ ಬ್ರ್ಯಾಂಡ್‌ ವ್ಯಾಲ್ಯೂ ಭರ್ಜರಿ ಏರಿಕೆ ಕಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ: ಇತ್ತೀಚೆಗೆ ಮುಗಿದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅದ್ಭುತ ಸಾಧನೆ ಬೆನ್ನಲ್ಲೇ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ಶೂಟರ್‌ ಮನು ಬಾಕರ್‌ ಬ್ರ್ಯಾಂಡ್‌ ವ್ಯಾಲ್ಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ನೀರಜ್‌ ಬ್ರ್ಯಾಂಡ್‌ ಮೌಲ್ಯ ಹಲವು ಕ್ರಿಕೆಟಿಗರನ್ನು ಮೀರಿದೆ. ಅವರ ವ್ಯಾಲ್ಯೂ ಇದೀಗ 330 ಕೋಟಿ ರು. ತಲುಪಿದೆ. ಇದು ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯಾ ಹೊಂದಿರುವ ಬ್ರ್ಯಾಂಡ್‌ ವ್ಯಾಲ್ಯೂಗೆ ಸಮನಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಏರಲಿದೆ ಎಂದು ವರದಿಯೊಂದು ತಿಳಿಸಿದೆ. ಈ ಮೊದಲು ಪ್ರತಿ ಜಾಹೀರಾತಿಗೆ 3 ಕೋಟಿ ರು. ಸಂಭಾವನೆ ಪಡೆಯುತ್ತಿದ್ದ ನೀರಜ್‌ ಸಂಭಾವನೆ ಇದೀಗ 4 - 4.50 ಕೋಟಿ ರು. ಏರಿಕೆಯಾಗಿದೆ.

ವಿರಾಟ್ ಕೊಹ್ಲಿಯ ಅಂದ್ರೆ ಪಂಚಪ್ರಾಣ, ಅವರ ಬಗ್ಗೆ ವಿಚಿತ್ರ ಆಸೆ ಹಂಚಿಕೊಂಡ ಕ್ರಿಕೆಟ್ ಜಗತ್ತಿನ ಬ್ಯೂಟಿ ಕ್ವೀನ್..!

ಇನ್ನೊಂದೆಡೆ ಒಲಿಂಪಿಕ್ಸ್‌ ಮಹಿಳಾ ಶೂಟಿಂಗ್‌ ವಿಭಾಗದಲ್ಲಿ ಎರಡು ಕಂಚಿನ ಪದಕ ಗೆದ್ದು ದಾಖಲೆ ಬರೆದ ಮನು ಬಾಕರ್‌ ಬ್ರ್ಯಾಂಡ್‌ ವ್ಯಾಲ್ಯೂ ಕೂಡಾ ಭಾರೀ ಏರಿಕೆ ಕಂಡಿದೆ. ಒಲಿಂಪಿಕ್ಸ್‌ಗೂ ಮುನ್ನ ಪ್ರತಿ ಜಾಹೀರಾತಿಗೆ 25 ಲಕ್ಷ ರು. ಶುಲ್ಕ ವಿಧಿಸುತ್ತಿದ್ದ ಮನು ಬಾಕರ್‌, ಒಲಿಂಪಿಕ್ಸ್‌ ಮುಗಿದ ಬೆನ್ನಲ್ಲೇ ತಮ್ಮ ಶುಲ್ಕವನ್ನು 1 ರಿಂದ 1.5 ಕೋಟಿ ರು.ವರೆಗೂ ಏರಿಸಿದ್ದಾರೆ. ಅವರನ್ನು ಒಳಗೊಂಡ ಜಾಹೀರಾತಿಗಾಗಿ 40ಕ್ಕೂ ಹೆಚ್ಚು ಕಂಪನಿಗಳು ಈಗಾಗಲೇ ಸಂಪರ್ಕ ಮಾಡಿವೆ ಎಂದು ವರದಿಗಳು ತಿಳಿಸಿವೆ.

ತಮಿಳುನಾಡು ಸಿಎಂ ಸ್ಟಾಲಿನ್‌ ಹೆಸರೇ ಕೇಳಿಲ್ಲವಂತೆ ಶೂಟರ್‌ ಮನು ಭಾಕರ್‌!

ಚೆನ್ನೈ: ಒಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದಿದ್ದ ತಾರಾ ಶೂಟರ್‌ ಮನು ಭಾಕರ್‌ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ ಹೆಸರನ್ನು ಈವರೆಗೂ ಕೇಳಿರಲಿಲ್ಲ. ಇದನ್ನು ಸ್ವತಃ ಅವರೇ ಹೇಳಿದ್ದಾರೆ.

ಹರ್ಯಾಣದವರಾದ ಮನು ಮಂಗಳವಾರ ಚೆನ್ನೈನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ಆಯೋಜಕರು ಕೆಲ ರ್‍ಯಾಪಿಡ್‌ ಫೈರ್‌ ಪ್ರಶ್ನೆಗಳನ್ನು ಕೇಳಿದ್ದಾರೆ. ಮಹಾಬಲಿಪುರಂ(ತಮಿಳುನಾಡಿನ ನಗರ), ಮೀನಾಕ್ಷಿ ದೇಗುಲ, ಮುಖ್ಯಮಂತ್ರಿ ಸ್ಟಾಲಿನ್‌ರ ಹೆಸರು ಹೇಳಿ, ಈ ಹೆಸರನ್ನುಗಳನ್ನು ಎಂದಾದರೂ ಕೇಳಿದ್ದೀರಾ ಎಂದು ಮನುಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಮನು ಇಲ್ಲ ಎಂದು ಉತ್ತರಿಸಿದ್ದಾರೆ. ಬಳಿಕ ನಟ ವಿಜಯ್‌, ಚೆಸ್‌ ಪಟು ಪ್ರಜ್ಞಾನಂದ ಬಗ್ಗೆ ಕೇಳಿದಾಗ ಗೊತ್ತಿದೆ ಎಂದು ಮನು ಪ್ರತಿಕ್ರಿಯಿಸಿದ್ದಾರೆ. ಸದ್ಯ ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌: ಭಾರತದ ಕ್ರೀಡಾಳುಗಳಿಗೆ ಶುಭ ಹಾರೈಸಿದ ನರೇಂದ್ರ ಮೋದಿ

ಒಲಿಂಪಿಕ್ಸ್ ಬಳಿಕ ವಿನೇಶ್‌ ಬ್ರಾಂಡ್‌ ಮೌಲ್ಯ ಹೆಚ್ಚಳ

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲದ ಹೊರತಾಗಿಯೂ ಭಾರತದ ತಾರಾ ಕುಸ್ತಿಪಟು ವಿನೇಶ್‌ ಫೋಗಟ್‌ ಬ್ರಾಂಡ್‌ ಮೌಲ್ಯ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಏಷ್ಯನ್‌ ಗೇಮ್ಸ್, ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ವಿನೇಶ್‌ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಪ್ರತಿ ಜಾಹೀರಾತಿಗೆ ₹25 ಲಕ್ಷ ದರ ನಿಗದಿಪಡಿಸುತ್ತಿದ್ದರು. ಆದರೆ ಈಗ ಪ್ರತಿ ಜಾಹೀರಾತುಗಳ ಮೂಲಕ ಅವರು ₹75 ಲಕ್ಷರಿಂದ ₹1 ಕೋಟಿ ವರೆಗೂ ಗಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ, ಶೂಟರ್‌ ಮನು ಭಾಕರ್‌ ಜಾಹೀರಾತು ಮೌಲ್ಯ ಕೂಡಾ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.