MTB ಹಿಮಾಚಲ ಮೌಂಟೈನ್ ಬೈಕಿಂಗ್ ರೇಸ್, ಅಂತಿಮ ಸುತ್ತಿನಲ್ಲಿ 3.5 ಕಿ.ಮೀ ಕ್ರಮಿಸಿದ 43 ರೈಡರ್ಸ್!
- ಮೊದಲ ಆವೃತ್ತಿ MTB ಹಿಮಾಚಲ ಬೈಕಿಂಗ್ ರೇಸ್
- ಪರ್ವತ ಶ್ರೇಣಿಯ ಕ್ಲಿಷ್ಟಕರ ದಾರಿಯಲ್ಲಿ ಪ್ರಯಾಣ
- ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೇಸ್
ಜಾಂಜೇಹ್ಲಿ(ಜೂ.27): ಎಂಟಿಬಿ ಹಿಮಾಚಲ ಪ್ರದೇಶ ಮೌಂಟೈನ್ ಬೈಕಿಂಗ್ ರೇಸ್ ಅಂತಿಮ ಸುತ್ತು ತೀವ್ರ ರೋಚಕತೆಗೆ ಸಾಕ್ಷಿಯಾಗಿತ್ತು. ಅಂತಿಮ ಸುತ್ತಿನಲ್ಲಿ 43 ರೈಡರ್ಸ್ ಜಾಂಜೇಹ್ಲಿ ಪರ್ವತ ಶ್ರೇಣಿಯ ಪ್ರಕೃತಿ ಸುಂದರಣ ತಾಣಗಳ ಮೂಲಕ 3.5 ಕಿಲೋಮೀಟರ್ ಕ್ರಮಿಸಿ ರೇಸಿಂಗ್ ಪೂರ್ಣಗೊಳಿಸಿದರು.
ಸಾಂಗ್ಲಾರವಾಲ ಹಳ್ಳಿಯಿಂದ ಆರಂಭಗೊಂಡ ಈ ರೇಸಿಂಗ್, ಆ್ಯಪಲ್ ತೋಟದ ಮೂಲಕ, ಜಲಪಾತ, ತೊರೆಗಳನ್ನು ದಾಟಿ ಸಾಗಿತ್ತು. ಹಿಮಾಚಲ ಪ್ರದೇಶದ ಪ್ರವಾಸೋದ್ಯಮ ದೃಷ್ಟಿಯಿಂದ ಈ ರೇಸಿಂಗ್ ಆಯೋಜಿಸಲಾಗಿದೆ. ಸೈಕ್ಲಿಂಗ್ ಟೂರಿಸಂ ಪ್ರಚುರ ಪಡಿಸಲು ಆಯೋಜಿಸಿರುವ ಈ ಮೌಂಟೈನ್ ಬೈಕಿಂಗ್ ರೇಸ್, ಮೊದಲ ಆವೃತ್ತಿಯಲ್ಲೇ ಅತ್ಯಂತ ಯಶಸ್ವಿಯಾಗಿದೆ.
MTB ಹಿಮಾಚಲ ಪ್ರದೇಶ ಮೌಂಟೈನ್ ಸೈಕ್ಲಿಂಗ್, ಮೊದಲ ಹಂತದಲ್ಲಿ 54 ರೈಡರ್‌ಗಳಿಂದ 80 ಕಿ.ಮೀ ಪ್ರಯಾಣ!
ಹಿಮಾಚಲ ಪ್ರದೇಶ ಮೌಂಟೈನ್ ಬೈಕಿಂಗ್ ರೇಸಿಂಗ್ ಒಟ್ಟು ಮೂರು ಹಂತಗಳನ್ನು ಒಳಗೊಂಡಿತ್ತು. ಮೊದಲ ಹಂತ, ಎರಡನೇ ಹಂತ ಹಾಗೂ ಅಂತಿಮ ಹಂತದ ಮೂಲಕ ರೋಚಕವಾಗಿ ರೇಸಿಂಗ್ ಸಾಗಿತ್ತು. ಅಂಡರ್ 16 ವಿಭಾಗದ ಸ್ಪರ್ಧಿಗಳು 4 ಸುತ್ತು ಪೂರ್ಣಗೊಳಿಸಬೇಕಿತ್ತು. ಇನ್ನು ಇತರ ವಿಭಾಗದ ಸ್ಪರ್ಧಿಗಳು ಒಟ್ಟು 6 ಸುತ್ತುಗಳನ್ನು ಪೂರ್ಣಗೊಳಿಸಲು ಟಾಸ್ಕ್ ನೀಡಲಾಗಿತ್ತು.
ಅಂತಿಮ ಸುತ್ತಿನ ಫಲಿತಾಂಶ
ಅಂಡರ್ 16 ವಿಭಾಗ
1st: ಯುವಗಲ್ ಠಾಕೂರ್
2nd: ವಂಶ್ ಕಾಲಿಯಾ
3rd: ಅಧೀರತ್ ಸಿಂಗ್
U-19 ಹುಡುಗರ ವಿಭಾಗ
1st: ಅರ್ಪಿತ್ ಶರ್ಮಾ
2nd: ವಿಶಾಲ್ ಆರ್ಯ
3rd: ಕುನಾಲ್ ಬನ್ಸಾಲ್
U-19 ಹುಡುಗಿಯರ ವಿಭಾಗ
1st: ದಿವಿಜಾ ಸೂದ್
2nd: ಕ್ಯಾನ ಸೂದ್
3rd: ಶಾಂಭವಿ ಸಿಂಗ್
A-19 ವಿಭಾಗ
1st: ಸುನೀತಾ ಶ್ರೆಷ್ಠ
2nd: ಆಸ್ತಾ ದೋಭಾಲ್
MTB ಹಿಮಾಚಲ ಮೌಂಟೈನ್ ಸೈಕ್ಲಿಂಗ್, ಪರ್ವತ ಶ್ರೇಣಿಯಲ್ಲಿ 37 ಕಿ.ಮೀ ಕ್ರಮಿಸಿದ 48 ರೈಡರ್ಸ್!
U-23 ಯುವಕರ ವಿಭಾಗ
1st: ಪೃಥ್ವಿ ಸಿಂಗ್ ರಾಥೋರ್
2nd: ಅಮನ್‌ದೀಪ್ ಸಿಂಗ್ ದಯಾಲ್
3rd: ಅನಿಶ್ ದುಬೆ
U-35 ಪುರುಷರ ವಿಭಾಗ
1st: ರಾಕೇಶ್ ರಾಣಾ
2nd: ಕ್ರಂಶವೇಂದ್ರ ಸಿಂಗ್ ಯಾದವ್
3rd: ರಾಮಕೃಷ್ಣ ಪಟೇಲ್
U-50 ಪುರುಷರ ವಿಭಾಗ
1st: ಸುನಿಲ್ ಬರೊಂಗ್ಪ
2nd: ಅಮಿತ್ ಬಲ್ಯಾನ್
3rd: ಜಸ್ಪ್ರೀತ್ ಪೌಲ್
A-50 ವಿಭಾಗ
1st ಭಾರತ್ ಸಾ
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಂ ರಮೇಶ್ ಪತ್ನಿ ಡಾ ಸಾಧನಾ ಠಾಕೂರ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಇದೇ ವೇಳೆ ಅತ್ಯುತ್ತಮ ಅಡ್ವೆಂಚರ್ ಸ್ಪೋರ್ಟ್ಸ್ ಆಯೋಜಿಸಿದ ಹಿಮಾಚಲ ಪ್ರದೇಶ ಸರ್ಕಾರ, ಹಿಮಾಲಯನ್ ಅಡ್ವೆಂಚರ್ ಸ್ಪೋರ್ಟ್ಸ್‌ಗೆ ಅಭಿನಂದನೆ ಸಲ್ಲಿಸಿದರು. ಈ ರೇಸ್‌ನಿಂದ ಹಿಮಾಚಲ ಪ್ರದೇಶದ ನೈಸರ್ಗಿಕ ಸೌಂದರ್ಯ ಅನಾವರಣಗೊಂಡಿದೆ. ಜೊತೆಗೆ ಹಿಮಾಚಲ ಪ್ರದೇಶ ಸೈಕ್ಲಿಂಗ್ ರೇಸ್‌ಗೆ ನೆಚ್ಚಿನ ತಾಣ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಜೂನ್ 26 ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಿಮಾಚಲ ಪ್ರದೇಶ ಮೌಂಟೈನ್ ಬೈಕಿಂಗ್ ರೇಸ್ ಕುರಿತು ಉಲ್ಲೇಖಿಸಿದ್ದಾರೆ. ವಿಶೇಷ ಕಾರ್ಯಕ್ರಮದ ಮೂಲಕ ನಮ್ಮ ತಾಣಗಳನ್ನು ದೇಶಾದ್ಯಂತ ಪ್ರಚಾರ ಪಡಿಸಲು ಹಾಗೂ ಭಾರತದಲ್ಲಿ ಎಲ್ಲಾ ರೀತಿಯ ಕ್ರೀಡೆ ಹಾಗೂ ಪ್ರವಾಸಿ ತಾಣಗಳಿವೆ ಅನ್ನೋದು ಈ ಸ್ಪರ್ಧೆಯಿಂದ ತಿಳಿಯಲಿದೆ ಎಂದಿದ್ದರು.