Asianet Suvarna News Asianet Suvarna News

ಇಂದಿನಿಂದ National Shooting Championship: ಮಧ್ಯಪ್ರದೇಶದ ಶೂಟಿಂಗ್‌ ಅಕಾಡೆಮಿ ಆತಿಥ್ಯ!

*ಮಧ್ಯಪ್ರದೇಶದ ಶೂಟಿಂಗ್‌ ಅಕಾಡೆಮಿ ಆತಿಥ್ಯ
*ಡಿಸೆಂಬರ 10ರ ತನಕ ಪಂದ್ಯಾವಳಿ
*ರಾಷ್ಟ್ರೀಯ ರೈಫಲ್‌ ಸಂಸ್ಥೆ ಸಹಭಾಗಿತ್ವ!

MP Shooting academy to host National Shooting Championship Competition in Bhopal mnj
Author
Bengaluru, First Published Nov 25, 2021, 7:09 AM IST

ಭೋಪಾಲ್‌(ನ.25): ಭೋಪಾಲ್‌ನಲ್ಲಿರುವ ಮಧ್ಯಪ್ರದೇಶ ರಾಜ್ಯ ಶೂಟಿಂಗ್‌ ಅಕಾಡೆಮಿ (MPSA)ಯಲ್ಲಿ ನಿಗದಿಯಾಗಿರುವ 64ನೇ ರಾಷ್ಟ್ರೀಯ ರೈಫಲ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ಗೆ  (National Shooting Championship)ಗುರುವಾರ ಚಾಲನೆ ಸಿಗಲಿದೆ. ಕೂಟವನ್ನು ಅಕಾಡೆಮಿಯ ಸಹಭಾಗಿತ್ವದಲ್ಲಿ ರಾಷ್ಟ್ರೀಯ ರೈಫಲ್‌ ಸಂಸ್ಥೆ(ಎನ್‌ಆರ್‌ಎಐ) ಆಯೋಜಿಸಿದ್ದು, ಡಿ.10ರ ವರೆಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕೂಟದಲ್ಲಿ ಪಾಲ್ಗೊಳ್ಳುವ ಶೂಟರ್‌ಗಳು ಈಗಾಗಲೇ ಅಭ್ಯಾಸ ಆರಂಭಿಸಿದ್ದು, ಮಧ್ಯಪ್ರದೇಶ ಕ್ರೀಡಾ ಸಚಿವೆ ಯಶೋಧರಾ ರಾಜೆ ಸಿಂಧಿಯಾ (Yashodhara Raje Scindia) ಸೇರಿದಂತೆ ಅಧಿಕಾರಿಗಳು ಅಕಾಡೆಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಧ್ಯಪ್ರದೇಶದ ಶೂಟಿಂಗ್‌ ಅಕಾಡೆಮಿ ಆತಿಥ್ಯ!

ಹಲವಾರು ಶೂಟಿಂಗ್‌ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಟ್ಟಿರುವ ಈ ಶೂಟಿಂಗ್‌ ಅಕಾಡೆಮಿಯ ಒಳಾಂಗಣ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಅಂತಾರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ. ಡೋಪಿಂಗ್‌ ಟೆಸ್ಟ್‌ ಕೊಠಡಿ, ವೈದ್ಯಕೀಯ ಕೋಣೆ, ಕಾನ್ಫರೆನ್ಸ್‌ ಹಾಲ್‌, ಜಿಮ್‌, ಅಡುಗೆ ಕೋಣೆ ಸೇರಿದಂತೆ ಕ್ರೀಡಾಪಟುಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಹೊಂದಿದೆ. 2019ರಲ್ಲಿ 63ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಕೂಡಾ ಇಲ್ಲಿನ ಶೂಟಿಂಗ್‌ ರೇಂಜ್‌ನಲ್ಲಿ ಆಯೋಜಿಸಲಾಗಿತ್ತು.

Ind vs NZ Kanpur Test: ಇಲ್ಲಿದೆ ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ ಸಂಭಾವ್ಯ ತಂಡ..!

2015ರಲ್ಲಿ ಅಕಾಡೆಮಿಯನ್ನು ಮತ್ತಷ್ಟುಉನ್ನತೀಕರಿಸಿದ್ದು, ಯುವ ಪ್ರತಿಭೆಗಳಿಗೆ ಶೂಟಿಂಗ್‌ನಲ್ಲಿ ಬೆಳೆಯುವ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಿದೆ. ಅಕಾಡೆಮಿಯು ಭೋಪಲ್‌ನ ಗೋರಾ ಎಂಬ ಗ್ರಾಮದಲ್ಲಿ 37.16 ಎಕರೆ ವಿಸ್ತೀರ್ಣದಲ್ಲಿ ಕ್ರೀಡಾಂಗಣ ನಿರ್ಮಿಸಿದ್ದು, ಈ ಅಕಾಡೆಮಿಯಲ್ಲಿ 50 ಮೀಟರ್‌ ರೇಂಜ್‌ ಶೂಟಿಂಗ್‌, ಟ್ರ್ಯಾಪ್‌ ಮತ್ತು ಸ್ಕೀಟ್‌ ರೇಂಜ್‌ ವ್ಯವಸ್ಥೆ ಕೂಡಾ ಒದಗಿಸಿದೆ. ಚಾಂಪಿಯನ್‌ಶಿಪ್‌ನಲ್ಲಿ 4,000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 2019ರಲ್ಲಿ 20 ಚಿನ್ನ, 8 ಬೆಳ್ಳಿ ಹಾಗೂ 13 ಕಂಚಿನ ಪದಕ ಸಹಿತ 41 ಪದಕ ಗೆದ್ದಿದ್ದ ಮಧ್ಯಪ್ರದೇಶ ಈ ಬಾರಿ ಮತ್ತಷ್ಟುಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ.

ಟಿ20 Ranking : 5ನೇ ಸ್ಥಾನಕ್ಕೆ ಜಿಗಿದ ರಾಹುಲ್‌

ದುಬೈ: ಐಸಿಸಿ ನೂತನ ಟಿ20 Ranking ಪಟ್ಟಿಬಿಡುಗಡೆ ಮಾಡಿದ್ದು, ಟಿ20 ವಿಶ್ವಕಪ್‌ ಹಾಗೂ ನ್ಯೂಜಿಲೆಂಡ್‌ ವಿರುದ್ಧದ ಚುಟುಕು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೆ.ಎಲ್‌.ರಾಹುಲ್‌ (K L Raul) 5ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನು 24 ಸ್ಥಾನಗಳ ಜಿಗಿತ ಕಂಡ ಸೂರ್ಯಕುಮಾರ್‌ ಯಾದವ್‌ 59ನೇ ಸ್ಥಾನ ಪಡೆದಿದ್ದಾರೆ. ರೋಹಿತ್‌ ಶರ್ಮಾ 13ನೇ ಬಡ್ತಿ ಪಡೆದಿದ್ದರೆ, ವಿರಾಟ್‌ ಕೊಹ್ಲಿ 11ನೇ ಸ್ಥಾನಕ್ಕೆ ಜಾರಿದ್ದಾರೆ. ಇತ್ತ ಬೌಲಿಂಗ್‌ ಹಾಗೂ ಆಲ್‌ರೌಂಡರ್‌ಗಳ ವಿಭಾಗದಲ್ಲಿ ಟೀಂ ಇಂಡಿಯಾದ (Team India) ಯಾವೊಬ್ಬ ಆಟಗಾರನು ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ.

Ind Vs NZ Test Series: ಭಾರತಕ್ಕೆ ವಿಶ್ವ ಚಾಂಪಿಯನ್‌ ಕಿವೀಸ್‌ ಸವಾಲು!

ಭಾರತ ಹಾಗೂ ನ್ಯೂಜಿಲೆಂಡ್‌ (India Vs Newzealand) ನಡುವಿನ 2 ಪಂದ್ಯಗಳ ಟೆಸ್ಟ್‌ ಸರಣಿಗೆ (Test Series) ವೇದಿಕೆ ಸಿದ್ಧವಾಗಿದ್ದು, ಮೊದಲ ಟೆಸ್ಟ್‌ಗೆ ಇಲ್ಲಿನ ಗ್ರೀನ್‌ ಪಾರ್ಕ್ ಕ್ರೀಡಾಂಗಣದಲ್ಲಿ ಗುರುವಾರದಿಂದ ಚಾಲನೆ ದೊರೆಯಲಿದೆ. ಅತ್ತ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ನ ಸೋಲಿನ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಭಾರತವಿದ್ದರೆ, ಇತ್ತ ಟಿ20 ಸರಣಿಯಲ್ಲುಂಟಾದ ಸೋಲಿಗೆ ಭಾರತಕ್ಕೆ ತಿರುಗೇಟು ನೀಡುವ ತವಕದಲ್ಲಿದೆ ಕಿವೀಸ್‌ ಪಡೆ. ಭಾರತದ ನೆಲದಲ್ಲಿ ಒಂದೇ ಒಂದು ಟೆಸ್ಟ್‌ ಸರಣಿಯನ್ನೂ ಗೆದ್ದಿರದ ಕಿವೀಸ್‌ ಇತಿಹಾಸ ಬದಲಿಸುವ ಉತ್ಸಾಹದಲ್ಲಿದೆ.

Ind Vs NZ Test Series: ಕಾನ್ಪುರ ಟೆಸ್ಟ್‌ಗೂ ಮುನ್ನ ಗುಡ್‌ ನ್ಯೂಸ್ ಕೊಟ್ಟ ಅಜಿಂಕ್ಯ ರಹಾನೆ..!

ಪೂರ್ಣ ಪ್ರಮಾಣದ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ (Rahul Dravid) ಅವರಿಗೆ ಮೊದಲ ಟೆಸ್ಟ್‌ ಇದಾಗಿದ್ದು, ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ (Ajinkya Rahane) ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಕೆ.ಎಲ್‌.ರಾಹುಲ್‌ ಗಾಯಗೊಂಡು ಸರಣಿಯಿಂದ ಹೊರ ನಡೆದಿದ್ದಾರೆ. ಇದೀಗ ಯುವ ಆಟಗಾರರನ್ನೇ ಒಳಗೊಂಡ ತಂಡ ಕಣಕ್ಕೆ ಇಳಿಯಲಿದೆ. ಮಯಾಂಕ್‌ ಅಗರ್‌ವಾಲ್‌ ಜತೆ ಶುಭ್‌ಮನ್‌ ಗಿಲ್‌ ಇನ್ನಿಂಗ್ಸ್‌ ಆರಂಭಿಸುವುದು ಖಚಿತವಾಗಿದ್ದು, ಚೇತೇಶ್ವರ ಪೂಜಾರ, ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹ, ರಹಾನೆ ಬ್ಯಾಟಿಂಗ್‌, ರವೀಂದ್ರ ಜಡೇಜಾ ಜವಾಬ್ದಾರಿ ಹೊರಲಿದ್ದಾರೆ.

Follow Us:
Download App:
  • android
  • ios