ವಾಲಿಬಾಲ್ ಆಟದ ನಡುವೆಯೇ ಮಗುವಿಗೆ ಎದೆಹಾಲುಣಿಸಿದ ಆಟಗಾರ್ತಿ..!
ಮಿಜೋರಾಂ ವಾಲಿಬಾಲ್ ಆಟಗಾರ್ತಿಯೊಬ್ಬರು ಪಂದ್ಯಾವಳಿಯ ಬಿಡುವಿನ ವೇಳೆಯಲ್ಲಿ ತಮ್ಮ 7 ತಿಂಗಳ ಮಗುವಿಗೆ ಹಾಲುಣಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕ್ರೀಡೆಗೂ ಸೈ, ತಾಯ್ತನಕ್ಕೂ ಎನ್ನುವಂತಿದೆ ಈ ಚಿತ್ರ. ಅಷ್ಟಕ್ಕೂ ಇದು ಎಲ್ಲಿ ನಡೆದದ್ದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..
ನವದೆಹಲಿ[ಡಿ.] ವಾಲಿಬಾಲ್ ಆಟಗಾರ್ತಿಯೊಬ್ಬರು ಆಟದ ನಡುವೆಯೇ ಸ್ಟೇಡಿಯಂನಲ್ಲಿ ತನ್ನ ಮಗುವಿಗೆ ಎದೆಹಾಲುಣಿಸಿದ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಶಹಬ್ಬಾಶ್ ಅಂದಿದ್ದಾರೆ.
ಟ್ರೆಕ್ಕಿಂಗ್ ತೆರಳಿದ್ದ ಕಿರಿಯರ ಟೀಂ ಇಂಡಿಯಾ
ಐಜ್ವಾಲ್’ನಲ್ಲಿ ನಡೆಯುತ್ತಿರುವ ಮಿಜೋರಾಂ ಸ್ಟೇಟ್ ಗೇಮ್ಸ್ 2019 ಪಂದ್ಯಾವಳಿಯಲ್ಲಿ ತೈಕೋಮ್ ವಿಧಾನಸಭಾ ಕ್ಷೇತ್ರದ ವಾಲಿಬಾಲ್ ಆಟಗಾರ್ತಿ ಲಾಲ್ವೆಂಟ್ಲುವಾಂಗಿ ಆಟದ ನಡುವೆ ತನ್ನ 7 ತಿಂಗಳ ಮಗುವಿಗೆ ಹಾಲುಣಿಸುವ ಮೂಲಕ ತಾಯ್ತನವನ್ನು ಮೆರೆದಿದ್ದಾರೆ.
ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ದುಬೆ ಫಿಕ್ಸ್..?
ತಾಯ್ತನ ಹಾಗೆಯೇ ಕ್ರೀಡಾಪಟುತ್ವವನ್ನು ಏಕಕಾಲದಲ್ಲಿ ನಿಭಾಯಿಸಿದ ವಾಲಿಬಾಲ್ ಆಟಗಾರ್ತಿ ಲಾಲ್ವೆಂಟ್ಲುವಾಂಗಿಯ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರಿಗರು ಕೊಂಡಾಡಿದ್ದಾರೆ.
ಈ ಚಿತ್ರವನ್ನು ಗಮನಿಸಿದ ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೋಮವ್ಯಾ ರೋಯ್ಟೆ ಅಭಿನಂದನೆಯ ರೂಪದಲ್ಲಿ 10 ಸಾವಿರ ರುಪಾಯಿ ಬಹುಮಾನ ಘೋಷಿಸಿದ್ದಾರೆ.