ಚಿನ್ನ ಗೆದ್ದು ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದ ಮೀರಾಬಾಯಿ ಚಾನು
* ಟೋಕಿಯೋ ಪದಕ ವಿಜೇತೆ ಮೀರಾ ಬಾಯಿ ಚಾನು ಮತ್ತೊಮ್ಮೆ ಭರ್ಜರಿ ಶುಭಾರಂಭ
* ಸಿಂಗಾಪುರ ವೇಟ್‌ಲಿಫ್ಟಿಂಗ್ ಇಂಟರ್‌ನ್ಯಾಷನಲ್ ಮೀಟ್‌ನಲ್ಲಿ ಚಾನು ಕೊರಳಿಗೆ ಚಿನ್ನದ ಪದಕ
* ಕಾಮನ್‌ವೆಲ್ತ್ ಗೇಮ್ಸ್‌ಗೆ ಮೀರಾಬಾಯಿ ಚಾನು ಅರ್ಹತೆ
ನವದೆಹಲಿ(ಫೆ.25): ಟೋಕಿಯೋ ಒಲಿಂಪಿಕ್ಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು (Mirabai Chanu) ಸಿಂಗಾಪುರ ವೇಟ್‌ಲಿಫ್ಟಿಂಗ್ ಇಂಟರ್‌ನ್ಯಾಷನಲ್ ಮೀಟ್‌ನ 55 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅಮೋಘ ಪ್ರದರ್ಶನ ತೋರಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ಗೆ (Commonwealth Games) ಮೀರಾಬಾಯಿ ಚಾನು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ (Tokyo Olympics) ಕ್ರೀಡಾಕೂಟದ ಬಳಿಕ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಮೀರಾಬಾಯಿ ಚಾನು, ಸಿಂಗಾಪುರ ವೇಟ್‌ಲಿಫ್ಟಿಂಗ್ ಇಂಟರ್‌ನ್ಯಾಷನಲ್ ಮೀಟ್‌ನಲ್ಲಿ (Singapore weightlifting international meet) 86 ಕೆ.ಜಿ. ಸ್ನ್ಯಾಚ್ ಹಾಗೂ 105 ಕೆ.ಜಿ. ಕ್ಲೀನ್ ಅಂಡ್ ಜೆರ್ಕ್ ಹೀಗೆ 191 ಕೆ.ಜಿ. ಬಾರ ಎತ್ತುವ ಮೂಲಕ, ಈ ವರ್ಷಾಂತ್ಯದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನ 55 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಮೀರಾಬಾಯಿ ಚಾನು 49 ಕೆ.ಜಿ ಹಾಗೂ 55 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಇದೀಗ ಮೀರಾಬಾಯಿ ಚಾನು ಯಾವ ವಿಭಾಗದಲ್ಲಿ ಸ್ಪರ್ಧಿಸಬೇಕು ಎನ್ನುವುದನ್ನು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ ತೀರ್ಮಾನಿಸಲಿದೆ ಎಂದು ರಾಷ್ಟ್ರೀಯ ಕೋಚ್ ವಿಜಯ್ ಶರ್ಮಾ ತಿಳಿಸಿದ್ದಾರೆ.
ಕೊಟ್ಟ ಮಾತು ಉಳಿಸಿದ ಮಹೀಂದ್ರಾ: ಚಿನ್ನದ ಹುಡುಗ ನೀರಜ್‌ಗೆ ದುಬಾರಿ ಗಿಫ್ಟ್!
ನಮ್ಮ ಗುರಿ ಮೀರಾಬಾಯಿ ಚಾನು ಅವರ ಸ್ಯಾಚ್ ಟೆಕ್ನಿಕ್ ಅರಿಯುವುದಾಗಿತ್ತು. ಆಕೆ 81 ಕೆ.ಜಿ. ಹಾಗೂ 84 ಕೆ.ಜಿ. ಬಾರ ಎತ್ತಿದ್ದಾರೆ. ಈ ಹಿಂದೆ 86 ಕೆ.ಜಿ(ರಾಷ್ಟ್ರೀಯ ದಾಖಲೆ) ನಿರ್ಮಿಸಿದ್ದಾರೆ. ಸದ್ಯ ಮೀರಾಬಾಯಿ ಚಾನು ಅವರ ಪ್ರದರ್ಶನ ತೃಪ್ತಿಕರವಾಗಿದೆ. ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ ಒಂದೇ ಪ್ರಯತ್ನದಲ್ಲಿ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಇನ್ನು ಸಂಕೇರ್ ಸರ್ಗಾರ್ ಪುರುಷರ 55 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡು ದಾಖಲೆ ನಿರ್ಮಿಸಿದ್ದಾರೆ. 55 ವಿಭಾಗದ ಸ್ಪರ್ಧೆಯಲ್ಲಿ 143 ಕೆ,ಜಿ. ಕ್ಲೀನ್ ಅಂಡ್ ಜರ್ಕ್ ಹಾಗೂ ಸ್ನ್ಯಾಚ್ ಸ್ಪರ್ಧೆಯಲ್ಲಿ 113 ಕೆ.ಜಿ ಸಹಿತ ಒಟ್ಟು 256 ಕೆ.ಜಿ ಬಾರ ಎತ್ತಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇನ್ನುಳಿದಂತೆ ಸಿ. ರಿಶಿಕಾಂತ್ ಸಿಂಗ್ 55 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ರಿಶಿಕಾಂತ್ ಸಿಂಗ್ 55 ಕೆ.ಜಿ. ವಿಭಾಗದಲ್ಲಿ 110 ಕೆ.ಜಿ ಸ್ನ್ಯಾಚ್ ಹಾಗೂ 136 ಕೆ.ಜಿ ಕ್ಲೀನ್ ಅಂಡ್ ಜೆರ್ಕ್ ಬಾರ ಎತ್ತುವ ಮೂಲಕ ಒಟ್ಟು 246 ಕೆ.ಜಿ ಬಾರ ಎತ್ತಿ ರಜತ ಪದಕ ಮುಡಿಗೇರಿಸಿಕೊಂಡಿದ್ದಾರೆ.