ಭಾರತ ಮಹಿಳಾ ತಂಡದ ಬೆನ್ನಲ್ಲೇ ಪುರುಷ ತಂಡ ಕೂಡ ಖೋ ಖೋ ವಿಶ್ವ ಚಾಂಪಿಯನ್ ಆಗಿದೆ. ನೇಪಾಳ ವಿರುದ್ದದ ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ.
ನವದೆಹಲಿ(ಜ.19) ಇದೇ ಮೊದಲ ಬಾರಿಗೆ ನಡೆದ ಖೋ ಖೋ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪುರುಷ ತಂಡ ಚಾಂಪಿಯನ್ ಆಗಿದೆ. ಇದಕ್ಕೂ ಮೊದಲು ಭಾರತದ ಮಹಿಳಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಭಾರತ ಮಹಿಳಾ ಹಾಗೂ ಪುರುಷ ತಂಡ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಿತ್ತು. ಪುರುಷರ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ನಾಯಕ ಪ್ರತೀಕ್ ವೈಕರ್ ಮತ್ತು ರಾಮ್ಜಿ ಕಶ್ಯಪ್ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಮೆನ್ ಇನ್ ಬ್ಲೂತಂಡ, ಪ್ರವಾಸಿ ನೇಪಾಳ ವಿರುದ್ಧ 54-36 ಅಂಕಗಳಿಂದ ಭರ್ಜರಿ ಜಯ ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದಕ್ಕೂ ಮುನ್ನ ನಡೆದ ಮಹಿಳೆಯರ ವಿಭಾಗದ ಫೈನಲ್‌ನಲ್ಲಿಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡವು 78-40 ಅಂಕಗಳಿಂದ ನೇಪಾಳ ಮಹಿಳಾ ತಂಡವನ್ನು ಸೋಲಿಸಿ ವಿಜಯದ ಕೇಕೆ ಹಾಕಿತು.
ಮೊದಲು ದಾಳಿ ನಡೆಸಿದ ರಾಮ್ಜಿ ಕಶ್ಯಪ್ ಅವರ ಅಸಾಧಾರಣ ಸ್ಕೈ ಡೈವ್ ಮೂಲಕ ನೇಪಾಳದ ಸೂರಜ್ ಪೂಜಾರ ಅವರನ್ನು ಔಟ್ ಮಾಡಿದರು. ನಂತರ ಸುಯಾಶ್ ಗಾರ್ಗೇಟ್, ಭರತ್ ಸಾಹು ಅವರನ್ನು ಟಚ್ ಮಾಡಿ ಔಟ್ ಮಾಡಿದರು. ಈ ಮೂಲಕ ಕೇವಲ 4 ನಿಮಿಷಗಳಲ್ಲಿ10 ಅಂಕಗಳೊಂದಿಗೆ ಭಾರತಕ್ಕೆ ಉತ್ತಮ ಆರಂಭ ಪಡೆಯಿತು. ಸ್ಕೈ ಡೈವ್‌ಗೆ ಹೆಸರಾದ ಪುರುಷರ ತಂಡವು ಮೊದಲ ಅವಧಿಯ ಅಂತ್ಯಕ್ಕೆ ಭರ್ಜರಿ ಆರಂಭ ಪಡೆಯಿತು. ಇದು ಅವರ ಎದುರಾಳಿಗಳಿಗೆ ಡ್ರೀಮ್ ರನ್ ಅನ್ನು ತಡೆಯಿತು. ಮೊದಲಾರ್ಧದ ಅಂತ್ಯಕ್ಕೆ ಭಾರತ ತಂಡವು 26-0 ಅಂಕಗಳ ಮುನ್ನಡೆ ಸಾಧಿಸಿತು.
ಟೀಮ್ ಇಂಡಿಯಾ ವಿರುದ್ಧ ಪುಟಿದೇಳುವ ಪ್ರಯತ್ನದಲ್ಲಿನೇಪಾಳ ತಂಡವು ಟರ್ನ್ 4 ರಲ್ಲಿಕಠಿಣ ಹೋರಾಟ ನಡೆಸಿತು. ಆದರೆ ಮತ್ತೊಮ್ಮೆ ಪ್ರತೀಕ್ ವೈಕರ್ ನೇತೃತ್ವದ ಡಿಫೆಂಡರ್‌ಗಳು ಮತ್ತು ಈ ಬಾರಿ ಚಿಂಗಾರಿ ಎಂದು ಪ್ರೀತಿಯಿಂದ ಕರೆಯಲ್ಪಡುವ ಸಚಿನ್ ಭಾರ್ಗೊ ಅವರು ತುಂಬಾ ಬಲಶಾಲಿ ಎಂದು ಸಾಬೀತುಪಡಿಸಿದರು. ಅಂತಿಮವಾಗಿ ಮೆಹುಲ್ ಮತ್ತು ಸುಮನ್ ಬರ್ಮನ್ 54-36 ಅಂಕಗಳ ಅಂತರದಲ್ಲಿಭಾರತ ಗೆಲುವು ಸಾಧಿಸಲು ನೆರವಾದರು.
ಭಾರತ ಮಹಿಳಾ ತಂಡಕ್ಕೆ ಖೋ ಖೋ ವಿಶ್ವ ಚಾಂಪಿಯನ್ ಕಿರೀಟ, ನೇಪಾಳ ಮಣಿಸಿ ದಾಖಲೆ
ಗಣ್ಯರ ಸಮಾಗಮ: ಉದ್ಘಾಟನಾ ಖೋ ಖೋ ವಿಶ್ವಕಪ್ ಫೈನಲ್ ಪಂದ್ಯಗಳಿಗೆ ಹಲವು ಗಣ್ಯರು ಸಾಕ್ಷಿಯಾದರು. ಇದು ಈ ಐತಿಹಾಸಿಕ ಕ್ರೀಡಾಕೂಟಕ್ಕೆ ಇನ್ನಷ್ಟು ಮೆರಗು ನೀಡಿತು. ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಂಕಜ್ ಮಿಥಾಲ್ ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ಸೇರಿ ಹಲವರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು. ಇವರಲ್ಲದೆ, ಒಡಿಶಾದ ಕ್ರೀಡೆ ಹಾಗೂ ಉನ್ನತ ಶಿಕ್ಷ ಣ ಸಚಿವ ಸೂರ್ಯವಂಶಿ ಸೂರಜ್, ಅಂತಾರಾಷ್ಟ್ರೀಯ ಖೋ ಖೋ ಫೆಡರೇಶನ್ ಅಧ್ಯಕ್ಷ ಸುಧಾಂಶು ಮಿತ್ತಲ್ ಸಹ ಉಪಸ್ಥಿತರಿದ್ದರು.
