ನವದೆಹಲಿ(ಮಾ.23): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಖೇಲೋ ಇಂಡಿಯಾ ಯೋಜನೆ 2025-26ರ ವರೆಗೂ ವಿಸ್ತರಿಸಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಸೋಮವಾರ ರಾಜ್ಯಸಭೆಯಲ್ಲಿ ತಿಳಿಸಿದರು. 

ದೇಶದ ಯುವ ಕ್ರೀಡಾ ಪ್ರತಿಭೆಗಳನ್ನು ಹುಡುಕುವ ಉದ್ದೇಶದಿಂದ 2018ರಲ್ಲಿ ಆರಂಭಗೊಂಡ ಖೇಲೋ ಇಂಡಿಯಾ ಯೋಜನೆಗೆ 2021-22ರಿಂದ 2025-26ರ ವರೆಗೂ 8,750 ಕೋ

ಟಿ ರು. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಖೇಲೋ ಇಂಡಿಯಾಗೆ 657.71 ಅನುದಾನ ಘೋಷಿಸಲಾಗಿದೆ.

 

ಓರ್ಲಿಯನ್ಸ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಸೈನಾ ಸ್ಪರ್ಧೆ

ಪ್ಯಾರಿಸ್‌: ಭಾರತದ ಅಗ್ರ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್‌ ಹಾಗೂ ಸೈನಾ ನೆಹ್ವಾಲ್‌ ಇಲ್ಲಿ ಬುಧವಾರದಿಂದ ಆರಂಭಗೊಳ್ಳಲಿರುವ ಓರ್ಲಿಯನ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ರ‍್ಯಾಂಕಿಂಗ್‌ ಅಂಕಗಳನ್ನು ಕಲೆಹಾಕಲಿದ್ದಾರೆ. 

ಲಯದ ಸಮಸ್ಯೆ ಎದುರಿಸುತ್ತಿರುವ ಇಬ್ಬರಿಗೂ ಪ್ರತಿ ಟೂರ್ನಿಯ ಮುಖ್ಯವೆನಿಸಿದ್ದು, ಸಾಧ್ಯವಾದಷ್ಟು ರ‍್ಯಾಂಕಿಂಗ್‌ ಅಂಕಗಳನ್ನು ಗಳಿಸಿ, ಅಗ್ರ 38ರೊಳಗೆ ಸ್ಥಾನ ಉಳಿಸಿಕೊಳ್ಳಬೇಕಿದೆ. ಈ ಇಬ್ಬರ ಜೊತೆ ಭಾರತದ ಇನ್ನೂ ಹಲವು ಶಟ್ಲರ್‌ಗಳು ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.