ಕೋವಿಡ್: ಒಲಿಂಪಿಯನ್‌ ನಜೀಬ್‌ ಅಗಾಗೆ ಕೆಒಎ ನೆರವು

* ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿರುವ ಒಲಿಂಪಿಯನ್ ಆಟಗಾರನಿಗೆ ಕೆಒಎ ನೆರವು

* ಮಾಜಿ ಜುಡೋ ಪಟು, ಒಲಿಂಪಿಯನ್‌ ನಜೀಬ್‌ ಅಗಾಗೆ ಕೋವಿಡ್ ದೃಢಪಟ್ಟಿದೆ.

 * ಒಲಿಂಪಿಯನ್‌ ನಜೀಬ್‌ ಅಗಾ ಅವರಿಗೆ 1 ಲಕ್ಷ ರುಪಾಯಿ ನೆರವು ನೀಡಿದ ಕೆಒಎ

Karnataka Olympic Association sanctions 1 lakhs financial help for Olympian Judo Player Najib Aga kvn

ಬೆಂಗಳೂರು(ಮೇ.29): ಕೊರೋನಾ ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿರುವ ಮಾಜಿ ಜುಡೋ ಪಟು, ಒಲಿಂಪಿಯನ್‌ ನಜೀಬ್‌ ಅಗಾ ಅವರಿಗೆ ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ (ಕೆಒಎ) 1 ಲಕ್ಷ ರುಪಾಯಿ ಆರ್ಥಿಕ ನೆರವು ನೀಡಿರುವುದಾಗಿ ಕೆಒಎ ಅಧ್ಯಕ್ಷ ಕೆ.ಗೋವಿಂದರಾಜು ತಿಳಿಸಿದ್ದಾರೆ. 

1996ರ ಒಲಿಂಪಿಕ್ಸ್‌ನಲ್ಲಿ ನಜೀಬ್‌ ಸ್ಪರ್ಧಿಸಿದ್ದರು. ಇದೇ ವೇಳೆ ಇತ್ತೀಚೆಗೆ ಕೋವಿಡ್‌ಗೆ ಪತಿಯನ್ನು ಕಳೆದುಕೊಂಡ ಭಾರತ ಕಬಡ್ಡಿ ತಂಡದ ಮಾಜಿ ನಾಯಕಿ ತೇಜಸ್ವಿನಿ ಬಾಯಿ ಅವರಿಗೂ 1 ಲಕ್ಷ ರುಪಾಯಿ ನೆರವು ನೀಡಿರುವುದಾಗಿ ಗೋವಿಂದರಾಜು ತಿಳಿಸಿದ್ದಾರೆ.

ಕೋವಿಡ್‌ಗೆ ಪತಿಯನ್ನು ಕಳಕೊಂಡ ಕಬಡ್ಡಿ ತಾರೆ ತೇಜಸ್ವಿನಿಗೆ ಕೇಂದ್ರ ನೆರವು

ಕೆಲವು ದಿನಗಳ ಹಿಂದಷ್ಟೇ ಭಾರತ ಕಬಡ್ಡಿ ತಂಡದ ಮಾಜಿ ನಾಯಕಿ, 2 ಬಾರಿ ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ, ಕರ್ನಾಟಕದ ತೇಜಸ್ವಿನಿ ಬಾಯಿ ಅವರಿಗೆ ಕೇಂದ್ರ ಸರ್ಕಾರ 2 ಲಕ್ಷ ರು. ನೆರವು ನೀಡಿದೆ. ಮಾಜಿ ಅಥ್ಲೀಟ್‌ಗಳು ಹಾಗೂ ಕೋಚ್‌ಗಳಿಗೆ ಕೊರೋನಾ ಸಂಕಷ್ಟದಲ್ಲಿ ನೆರವಾಗಲು ಭಾರತೀಯ ಒಲಿಂಪಿಕ್‌ ಸಂಸ್ಥೆ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಯೋಜನೆಯೊಂದನ್ನು ಆರಂಭಿಸಿದ್ದು, ಇದರ ಅಡಿಯಲ್ಲಿ ತೇಜಸ್ವಿನಿಗೆ ನೆರವು ನೀಡಲಾಗಿದೆ.

ಕರ್ನಾಟಕದ ತೇಜಸ್ವಿನಿಗೆ 2011ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು. 2010, 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದ ಸದಸ್ಯೆಯಾಗಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

"

Latest Videos
Follow Us:
Download App:
  • android
  • ios