ಒಲಿಂಪಿಕ್ಸ್‌ ಚಿನ್ನ ಗೆದ್ದ ಬಳಿಕ 12 ಕೆ.ಜಿ. ದಪ್ಪ ಆಗಿದ್ದೆ ಎಂದ ನೀರಜ್ ಚೋಪ್ರಾ..!

* ಒಲಿಂಪಿಕ್ಸ್‌ ಬಳಿಕ ಇಷ್ಟಪಟ್ಟಿದ್ದನ್ನೆಲ್ಲಾ ತಿಂದಿದ್ದಾಗಿ ಹೇಳಿದ ನೀರಜ್ ಚೋಪ್ರಾ

* ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ನೀರಜ್

* ಒಲಿಂಪಿಕ್ಸ್‌ ಬಳಿಕ 12 ಕೆಜಿ ದಪ್ಪವಾಗಿದ್ದರ ಸೀಕ್ರೇಟ್ ಬಿಚ್ಚಿಟ್ಟ ಚಿನ್ನದ ಹುಡುಗ

Javelin Thrower Neeraj Chopra gained close to 12 kgs after Olympics gold Now he has lost 5 kgs in last 22 days kvn

ನವದೆಹಲಿ(ಡಿ.31): ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಐತಿಹಾಸಿಕ ಚಿನ್ನದ ಪದಕ ಗೆದ್ದ ಬಳಿಕ ಏನು ಬೇಕೋ ಎಲ್ಲವನ್ನೂ ತಿಂದೆ. ನನ್ನ ದೇಹದ ತೂಕ 12 ಕೆ.ಜಿ ಹೆಚ್ಚಾಗಿತ್ತು ಎಂದು ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ (Neeraj Chopra) ಹೇಳಿಕೊಂಡಿದ್ದಾರೆ. ಅಮೆರಿಕದಲ್ಲಿ ಅಭ್ಯಾಸ ನಡೆಸುತ್ತಿರುವ ಅವರು, ‘ಬಹಳ ದಿನಗಳಿಂದ ಡಯಟ್‌ ಕಾಪಾಡಿಕೊಂಡಿದ್ದೆ. ಆದರೆ ಒಲಿಂಪಿಕ್ಸ್‌ (Olympics) ಬಳಿಕ ಆಸೆಯಾಗಿದ್ದೆಲ್ಲವನ್ನೂ ಸೇವಿಸಿದೆ. 12-13 ಕೆ.ಜಿ. ದಪ್ಪ ಆಗಿದ್ದೆ. ಕಳೆದ 22 ದಿನಗಳಿಂದ ಅಭ್ಯಾಸ ನಡೆಸುತ್ತಿದ್ದು 5.5 ಕೆ.ಜಿ ತೂಕ ಇಳಿಸಿದ್ದೇನೆ’ ಎಂದಿದ್ದಾರೆ. 

ಹರ್ಯಾಣ ಮೂಲದ ನೀರಜ್ ಚೋಪ್ರಾ, ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ (Javelin Throw) ಸ್ಪರ್ಧೆಯ ಫೈನಲ್‌ನಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಜಯಿಸಿ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದರು. ಇದರ ಜತೆಗೆ ಶತಮಾನದ ಬಳಿಕ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಸಾಧಕ ಎನ್ನುವ ಹಿರಿಮೆಗೆ ನೀರಜ್ ಪಾತ್ರರಾಗಿದ್ದರು

ಸದ್ಯ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅಭ್ಯಾಸ ನಡೆಸುತ್ತಿರುವ ನೀರಜ್ ಚೋಪ್ರಾ, ಮಾಧ್ಯಮದವರ ಜತೆ ವಿಡಿಯೋ ಸಂಭಾಷಣೆ ನಡೆಸಿದ್ದು, ನಾನು ಟೋಕಿಯೋದಿಂದ ವಾಪಾಸ್ಸಾದ ಬಳಿಕ ನನಗೆ ಏನು ಇಷ್ಟವೋ ಆ ಎಲ್ಲಾ ಆಹಾರಗಳನ್ನು ಎಷ್ಟು ಬೇಕೋ ಅಷ್ಟು ತಿಂದೆ. ಒಲಿಂಪಿಕ್ಸ್‌ಗೆ ಫಿಟ್‌ ಆಗಿರಲು ಇದಕ್ಕೂ ಮೊದಲು ನಾನು ಕಠಿಣ ಡಯೆಟ್ ಪಾಲಿಸಿದ್ದೆ. ನಾನು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಬಳಿಕ ಏನೆಲ್ಲ ಇಷ್ಟವೋ ಅದನ್ನೆಲ್ಲ ತಿಂದೆ, ಹೀಗಾಗಿ 12 ಕೆ.ಜಿ ತೂಕ ಜಾಸ್ತಿಯಾದೆ ಎಂದು ನೀರಜ್ ಹೇಳಿದ್ದಾರೆ.

ಕೊಟ್ಟ ಮಾತು ಉಳಿಸಿದ ಮಹೀಂದ್ರಾ: ಚಿನ್ನದ ಹುಡುಗ ನೀರಜ್‌ಗೆ ದುಬಾರಿ ಗಿಫ್ಟ್!

ಟೋಕಿಯೋ ಒಲಿಂಪಿಕ್ಸ್‌ ಮುಕ್ತಾಯದ ಬಳಿಕ ಜಾವೆಲಿನ್ ಸ್ಪರ್ಧೆಯಿಂದ ದೂರವೇ ಉಳಿದಿದ್ದ ನೀರಜ್ ಇದೀಗ 2022ರಲ್ಲಿ ಹಲವು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. 90 ಮೀ. ದೂರಕ್ಕೆ ಜಾವೆಲಿನ್‌ ಎಸೆಯುವ ಗುರಿ ಹೊಂದಿದ್ದು, ಅದಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿರುವುದಾಗಿ ನೀರಜ್‌ ತಿಳಿಸಿದ್ದಾರೆ. 2022ರಲ್ಲಿ ನೀರಜ್ ಚೋಪ್ರಾ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌, ಡೈಮಂಡ್ ಲೀಗ್, ಕಾಮನ್‌ವೆಲ್ತ್‌ ಗೇಮ್ಸ್‌ ಹಾಗೂ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಐಎಸ್‌ಎಲ್‌: ಕೊನೆಗೂ ಜಯ ಕಂಡ ಬೆಂಗಳೂರು ಎಫ್‌ಸಿ

ವಾಸ್ಕೋ:  8ನೇ ಆವೃತ್ತಿಯ ಇಂಡಿಯನ್ ಸೂಪರ್‌ ಲೀಗ್ (Indian Super League) ಟೂರ್ನಿಯಲ್ಲಿ ಸತತ 8 ಪಂದ್ಯಗಳಲ್ಲಿ ಗೆಲುವನ್ನೇ ಕಾಣದೆ ಕಂಗೆಟ್ಟಿದ್ದ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ(Bengaluru FC) ಕೊನೆಗೂ ಗೆದ್ದು ನಿಟ್ಟುಸಿರು ಬಿಟ್ಟಿದೆ. 

ಗುರುವಾರ ನಡೆದ ಚೆನ್ನೈಯಿನ್‌ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬಿಎಫ್‌ಸಿ 4-2 ಗೋಲುಗಳ ಗೆಲುವು ಸಾಧಿಸಿತು. ಈ ಆವೃತ್ತಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಬಿಎಫ್‌ಸಿ ಆ ಬಳಿಕ 4 ಸೋಲು, 3 ಡ್ರಾ ಕಂಡಿತ್ತು. ಈ ಜಯದೊಂದಿಗೆ ತಂಡ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ.

ರಾಷ್ಟ್ರೀಯ ಹಾಕಿ ಶಿಬಿರಕ್ಕೆ ರಾಜ್ಯದ ಮೂವರು ಆಯ್ಕೆ

ನವದೆಹಲಿ: ಜನವರಿ 3ರಿಂದ ಬೆಂಗಳೂರಲ್ಲಿ ಆರಂಭಗೊಳ್ಳಲಿರುವ ರಾಷ್ಟ್ರೀಯ ಹಿರಿಯ ಪುರುಷರ ಹಾಕಿ ಶಿಬಿರಕ್ಕೆ ಗುರುವಾರ 60 ಆಟಗಾರರ ಪಟ್ಟಿಯನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು, ಕರ್ನಾಟಕದ ಮೊಹಮದ್‌ ರಾಹೀಲ್‌, ಶೇಷೇ ಗೌಡ ಹಾಗೂ ಲಿಖಿತ್‌ ಎಂ.ಬಿ. ಸ್ಥಾನ ಪಡೆದಿದ್ದಾರೆ. 

ಇತ್ತೀಚೆಗೆ ನಡೆದ ಹಿರಿಯ, ಕಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಹಾಗೂ ಹಾಕಿ ಇಂಡಿಯಾದಿಂದ ಮಾನ್ಯತೆ ಪಡೆದಿರುವ ಇತರ ದೇಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಆಯ್ಕೆ ಮಾಡಲಾಗಿದೆ. 2022ರ ಎಫ್‌ಐಎಚ್‌ ಪ್ರೊ ಲೀಗ್‌ ಪಂದ್ಯಗಳಿಗೆ ಸಿದ್ಧತೆ ಆರಂಭಿಸುವ ಮುನ್ನ 33 ಆಟಗಾರರನ್ನು ಶಿಬಿರದಲ್ಲಿ ಉಳಿಸಿಕೊಳ್ಳಲಾಗುತ್ತದೆ.

Latest Videos
Follow Us:
Download App:
  • android
  • ios