* ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಅಂಪೈರ್ ತೀರ್ಪಿನ ಮೇಲೆ ಸಿಂಧು ಅಕ್ರೋಶ* ಸೆಮಿಫೈನಲ್‌ನಲ್ಲಿ ಸೋತು ಕಂಚಿನದ ಪದಕಕ್ಕೆ ತೃಪ್ತಿಪಟ್ಟ ಸಿಂಧು* ಜಪಾನಿನ ಅಕಾನೆ ಯಮಗುಚಿ ಎದುರು ಸೆಮೀಸ್‌ನಲ್ಲಿ ಮುಗ್ಗರಿಸಿದ ಸಿಂಧು
ಮನಿಲಾ(ಮೇ.02): ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ (Badminton Asia Championships) ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತು ಕಂಚಿನದ ಪದಕಕ್ಕೆ ತೃಪ್ತಿಪಟ್ಟ ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು (PV Sindhu) ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅಂಪೈರ್ ತೀರ್ಮಾನದಿಂದ ಅನ್ಯಾಯವಾಗಿದೆ ಎಂದು ಕಿಡಿಕಾರಿದ್ದಾರೆ. ಪಂದ್ಯದ ಬಳಿಕ ಸಿಂಧು ಪದಕ ವಿತರಣೆ ಕಾರ‍್ಯಕ್ರಮಕ್ಕೂ ಗೈರಾಗಿದ್ದರು.
ಪಂದ್ಯದ 2ನೇ ಗೇಮ್ ವೇಳೆ ಸರ್ವ್ ಮಾಡಲು ಸಿಂಧು ತುಂಬಾ ಸಮಯ ತೆಗೆಯುತ್ತಿದ್ದಾರೆಂದು ಎದುರಾಳಿ ಜಪಾನಿನ ಅಕಾನೆ ಯಮಗುಚಿಗೆ ಅಂಪೈರ್ 1 ಪೆನಾಲ್ಟಿ ಅಂಕ ನೀಡಿದ್ದರು. ಬಳಿಕ ಅಂಪೈರ್ ಬಳಿ ಸಿಂಧು ವಾಗ್ವಾದ ನಡೆಸಿದ್ದರು. ‘ನಾನು ಸಾಕಷ್ಟು ಸಮಯ ತೆಗೆಯುತ್ತಿದ್ದೇನೆಂದು ಅಂಪೈರ್ ದಿಢೀರ್ ಪೆನಾಲ್ಟಿ ನೀಡಿದರು. ಇದು ಅನ್ಯಾಯ. ಇದರಿಂದ ಆತ್ಮವಿಶ್ವಾಸ ಕಳೆದು ಸೋಲಿಗೆ ಕಾರಣವಾಯಿತು. ಅಲ್ಲದಿದ್ದರೆ ನಾನು ಪಂದ್ಯದಲ್ಲಿ ಗೆದ್ದು ಫೈನಲ್‌ನಲ್ಲಿ ಆಡುತ್ತಿದ್ದೆ’ ಎಂದು ಸಿಂಧು ಹೇಳಿದ್ದಾರೆ.
26 ವರ್ಷದ ಪಿವಿ ಸಿಂಧು 21-13 ಗೇಮ್‌ನಲ್ಲಿ ಮೊದಲ ಸೆಟ್ ಗೆಲುವು ಸಾಧಿಸಿದ್ದರು. ಇನ್ನು ಎರಡನೇ ಗೇಮ್‌ನಲ್ಲೂ ಸಿಂಧು 14-11 ಅಂಕಗಳಿಂದ ಮುನ್ನಡೆ ಸಾಧಿಸಿದ್ದರು. ಈ ಸಂದರ್ಭದಲ್ಲಿ ಮ್ಯಾಚ್ ಅಂಪೈರ್ ಒಂದು ಪೆನಾಲ್ಟಿ ಅಂಕವನ್ನು ಅಕಾನೆ ಯಮಗುಚಿಗೆ ನೀಡಿದರು. ಇದರ ಬೆನ್ನಲ್ಲೇ ಅಂಪೈರ್ ಜತೆ ಸಿಂಧು ವಾಗ್ವಾದ ನಡೆಸಿದರು. ಅಂತಿಮವಾಗಿ ಎರಡನೇ ಹಾಗೂ ಮೂರನೇ ಗೇಮ್‌ನಲ್ಲಿ 19-21, 16-21 ಅಕಾನೆ ಯಮಗುಚಿಗೆ ಜಯ ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟರು.
Khelo India University Games ಅಥ್ಲೆಟಿಕ್ಸ್‌ನಲ್ಲಿ 3 ಬಂಗಾರದ ಪದಕ ಗೆದ್ದ ಮಂಗಳೂರು ವಿವಿ
‘ನಾನು ಸಾಕಷ್ಟು ಸಮಯ ತೆಗೆಯುತ್ತಿದ್ದೇನೆಂದು ಅಂಪೈರ್ ದಿಢೀರ್ ಪೆನಾಲ್ಟಿ ನೀಡಿದರು. ಆದರೆ ಎದುರಾಳಿ ಆಟಗಾರ್ತಿ ಆಡಲು ರೆಡಿಯಿರಲಿಲ್ಲ, ಹಾಗಾಗಿ ಕೊಂಚ ತಡವಾಯಿತು ಎಂದು ಪಂದ್ಯ ಮುಕ್ತಾಯದ ಬಳಿಕ ಪಿ ವಿ ಸಿಂಧು ಹೇಳಿದ್ದಾರೆ.
ಬೀಚ್ ಹ್ಯಾಂಡ್‌ಬಾಲ್: ಭಾರತಕ್ಕೆ ಬೆಳ್ಳಿ ಪದಕ
ನವದೆಹಲಿ: 2ನೇ ಆವೃತ್ತಿಯ ಏಷ್ಯನ್ ಮಹಿಳಾ ಯೂತ್ ಬೀಚ್ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ಈ ಬಗ್ಗೆ ರಾಷ್ಟ್ರೀಯ ಹ್ಯಾಂಡ್‌ಬಾಲ್ ಫೆಡರೇಶನ್ ಭಾನುವಾರ ಮಾಹಿತಿ ಹಂಚಿಕೊಂಡಿದೆ. ಹಾಂಕಾಂಗ್ ವಿರುದ್ಧ 2 ಪಂದ್ಯ ಗೆದ್ದ ಭಾರತ, ಬಳಿಕ ಆತಿಥೇಯ ಥಾಯ್ಲೆಂಡ್ ವಿರುದ್ಧ 1 ಗೆಲುವು, 1 ಸೋಲಿನೊಂದಿಗೆ 2ನೇ ಸ್ಥಾನ ಪಡೆದು ಬೆಳ್ಳಿಗೆ ಮುತ್ತಿಕ್ಕಿತು. ತಂಡದಲ್ಲಿ ಅನುಷ್ಕಾ ಚೌಹಾಣ್, ಜಸ್ಸಿ, ಸಂಜನಾ ಕುಮಾರಿ, ಚೇತನಾ ದೇವಿ, ವನ್ಶಿಕಾ ಮೆಹ್ತಾ ಹಾಗೂ ಇಶಾ ಮಜುಂದಾರ್ ಇದ್ದರು. ಬೆಳ್ಳಿ ಪದಕದ ಜೊತೆ ತಂಡ ಮುಂದಿನ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದುಕೊಂಡಿದೆ.
