ಶೂಟಿಂಗ್‌ ವಿಶ್ವಕಪ್‌: ಭಾರತದ ಶೂಟರ್‌ಗಳ ಭರ್ಜರಿ ಪದಕ ಬೇಟೆ!

ಐಎಸ್‌ಎಸ್‌ಎಫ್‌ ಶೂಟಿಂಗ್‌ನಲ್ಲಿ ಭಾರತದ ಶೂಟರ್‌ಗಳ ಪದಕ ಭೇಟೆ ಮುಂದುವರೆದಿದ್ದು, ಪದಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಈ ಕುರಿತಾದ ಒಂದು ರಿಪಪೋರ್ಟ್ ಇಲ್ಲಿದೆ ನೋಡಿ.

ISSF World Cup Indian Shooter Continue Dominate Performance in Delhi kvn

ನವದೆಹಲಿ(ಮಾ.23): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಯುವ ಶೂಟರ್‌ಗಳ ಪದಕ ಬೇಟೆ ಮುಂದುವರಿದಿದೆ. ಟೂರ್ನಿಯ 3ನೇ ದಿನವಾದ ಸೋಮವಾರ ಭಾರತ 3 ಚಿನ್ನ ಸೇರಿ ಒಟ್ಟು 5 ಪದಕ ಜಯಿಸಿತು. ಒಟ್ಟು 6 ಚಿನ್ನ, ತಲಾ 4 ಬೆಳ್ಳಿ ಹಾಗೂ ಕಂಚಿನೊಂದಿಗೆ ಒಟ್ಟು 14 ಪದಕ ಗೆದ್ದಿರುವ ಭಾರತ, ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಅಮೆರಿಕ 6 ಪದಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ ಸೌರಭ್‌ ಚೌಧರಿ ಹಾಗೂ ಮನು ಭಾಕರ್‌ ಜೋಡಿ ಚಿನ್ನ ಜಯಿಸಿದರೆ, ಅಭಿಷೇಕ್‌ ವರ್ಮಾ ಹಾಗೂ ಯಶಸ್ವಿನಿ ದೇಶ್ವಾಲ್‌ ಕಂಚು ಗೆದ್ದರು. ಇನ್ನು 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ ಇಳವಿನಿಲ್‌ ವಳರಿವನ್‌ ಹಾಗೂ ದಿವ್ಯಾನ್ಶ್‌ ಪನ್ವಾರ್‌ ಜೋಡಿಗೆ ಚಿನ್ನ ಜಯಿಸಿತು.

ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ಮತ್ತೆ 4 ಪದಕ

ಗುರ್ಜೋತ್‌, ಮೈರಾಜ್‌ ಅಹ್ಮದ್‌ ಹಾಗೂ ಅಂಗದ್‌ ವೀರ್‌ ಅವರನ್ನೊಳಗೊಂಡ ಭಾರತ ಸ್ಕೀಟ್‌ ತಂಡ, ಚಿನ್ನದ ಪದಕದ ಪಂದ್ಯದಲ್ಲಿ ಕತಾರ್‌ ವಿರುದ್ಧ ಗೆಲುವು ಸಾಧಿಸಿತು. ಪರಿನಾಜ್‌ ಕಾರ್ತಿಕಿ ಸಿಂಗ್‌ ಹಾಗೂ ಗನೀಮತ್‌ ಶೆಖೂಂ ಅವರಿದ್ದ ಮಹಿಳಾ ಸ್ಕೀಟ್‌ ತಂಡ ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿತು.
 

Latest Videos
Follow Us:
Download App:
  • android
  • ios