ನವದೆಹಲಿ(ಮಾ.19): ಕೋವಿಡ್‌-19ನಿಂದಾಗಿ ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಸ್ಪರ್ಧೆಯಿಂದ ಹೊರಗುಳಿದಿದ್ದ ಭಾರತದ ಪಿಸ್ತೂಲ್‌ ಹಾಗೂ ರೈಫಲ್‌ ಶೂಟರ್‌ಗಳು ಶುಕ್ರವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.

ಕೋವಿಡ್‌ ಬಳಿಕ ಈ ಗಾತ್ರದ, ಬಹು ರಾಷ್ಟ್ರೀಯ, ಒಲಿಂಪಿಕ್‌ ಕ್ರೀಡೆಯೊಂದರ ಟೂರ್ನಿ ನಡೆಯುತ್ತಿರುವುದು ಇದೇ ಮೊದಲು. ಚಾಂಪಿಯನ್‌ಶಿಪ್‌ನಲ್ಲಿ ಭಾರತ, ಕೊರಿಯಾ, ಸಿಂಗಾಪುರ್‌, ಅಮೆರಿಕ, ಯುಕೆ, ಇರಾನ್‌, ಫ್ರಾನ್ಸ್‌, ಇಟಲಿ ಸೇರಿದಂತೆ ಒಟ್ಟು 53 ರಾಷ್ಟ್ರಗಳ 294 ಶೂಟರ್‌ಗಳು ಪಾಲ್ಗೊಳ್ಳಲಿದ್ದಾರೆ. 

ಪ್ರೊ ಕಬಡ್ಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಆಯೋಜಕರು

ಭಾರತ 57 ಸದಸ್ಯರ ಬಲಿಷ್ಠ ತಂಡವನ್ನು ಕಣಕ್ಕಿಳಿಸುತ್ತಿದೆ. ಈಗಾಗಲೇ ಟೋಕಿಯೋ ಒಲಿಂಪಿಕ್ಸ್‌ಗೆ 15 ಸ್ಥಾನಗಳನ್ನು ಪಡೆದಿರುವ ಭಾರತ, ಮತ್ತಷ್ಟು ಅರ್ಹತಾ ಕೋಟಾಗಳನ್ನು ಗಳಿಸಲು ಎದುರು ನೋಡುತ್ತಿದೆ. ಪ್ರಮುಖವಾಗಿ 25 ಮೀ. ರಾರ‍ಯಪಿಡ್‌ ಫೈರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಅನೀಶ್‌ ಭನವಾಲಾ ಒಲಿಂಪಿಕ್‌ ಅರ್ಹತೆ ಪಡೆಯುವ ನಿರೀಕ್ಷೆ ಇದೆ.

18 ವರ್ಷದ ಅನೀಶ್‌ ಭನವಾಲಾ 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಗಮನ ಸೆಳೆದಿದ್ದರು. ಸದ್ಯ 25 ಮೀ. ರಾರ‍ಯಪಿಡ್‌ ಫೈರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ 12ನೇ ಶ್ರೇಯಾಂಕ ಹೊಂದಿದ್ದಾರೆ. ಈ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದರೆ ಟೋಕಿಯೋ ಒಲಿಂಪಿಕ್ಸ್‌ಗೆ ಅನೀಶ್ ಅರ್ಹತೆಗಿಟ್ಟಿಸಿಕೊಳ್ಳಲಿದ್ದಾರೆ.