ಇಂಡೊನೇಷ್ಯಾ ಮಾಸ್ಟರ್ಸ್‌: ಲಕ್ಷ್ಯ, ಶುಭಾಂಕರ್‌ ಔಟ್‌

ಇಂಡೋನೇಷ್ಯಾ ಮಾಸ್ಟರ್ಸ್‌ ಅರ್ಹತಾ ಸುತ್ತಿನಲ್ಲೇ ಲಕ್ಷ್ಯ ಸೆನ್‌, ಶುಭಾಂಕರ್‌ ಡೇ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

Indonesia Masters qualifiers Lakshya sen Subhankar failed to reach the main round

ಜಕಾರ್ತ(ಜ.15): 2020ರ ಋುತುವಿನ 2ನೇ ಬ್ಯಾಡ್ಮಿಂಟನ್‌ ಟೂರ್ನಿಯಾದ ಇಂಡೋನೇಷ್ಯಾ ಮಾಸ್ಟರ್ಸ್‌ನ ಅರ್ಹತಾ ಸುತ್ತಲ್ಲಿ ಭಾರತದ ಯುವ ಶಟ್ಲರ್‌ಗಳಾದ ಲಕ್ಷ್ಯ ಸೆನ್‌, ಶುಭಾಂಕರ್‌ ಡೇ ಸೋಲುಂಡು ಹೊರಬಿದ್ದಿದ್ದಾರೆ. 

ಇಂಡೋನೇಷ್ಯಾ ಮಾಸ್ಟರ್ಸ್: ಸಿಂಧು-ಸೈನಾ ಮುಖಾಮುಖಿ?

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ಅರ್ಹತಾ ಸುತ್ತಲ್ಲಿ ಲಕ್ಷ್ಯ, ಥಾಯ್ಲೆಂಡ್‌ನ ತೊಂಗ್ಸಾಕ್‌ ಸೆನ್ಸೊಬೂನ್ಸಕ್‌ ವಿರುದ್ಧ 13-21, 12-21 ಗೇಮ್‌ಗಳಲ್ಲಿ ಸೋಲು ಅನುಭವಿಸಿದರು. ಮತ್ತೊಂದು ಸಿಂಗಲ್ಸ್‌ನಲ್ಲಿ ಶುಭಾಂಕರ್‌, ಥಾಯ್ಲೆಂಡ್‌ನ ಸುಪ್ಪನ್ಯು ಅವಿಹಿಂಗ್ಸನೊನ್‌ ಎದುರು 16-21, 12-21 ಗೇಮ್‌ಗಳಲ್ಲಿ ಪರಾಭವ ಹೊಂದಿದರು.

ಪ್ರಶಸ್ತಿ ಗೆದ್ದ ಬೆನ್ನಲ್ಲೇ ವಿಶ್ವ ನಂ. 1 ಬ್ಯಾಡ್ಮಿಂಟನ್ ಆಟಗಾರನಿಗೆ ಆಕ್ಸಿಡೆಂಟ್

ಬುಧವಾರದಿಂದ ಆರಂಭವಾಗಲಿರುವ ಪ್ರಮುಖ ಸುತ್ತಿನಲ್ಲಿ ಪಿ.ವಿ. ಸಿಂಧು, ಸೈನಾ, ಕಿದಂಬಿ ಶ್ರೀಕಾಂತ್‌, ಸಾಯಿ ಪ್ರಣೀತ್‌, ಪ್ರಣಯ್‌, ಸಮೀರ್‌ ವರ್ಮಾ ಆಡಲಿದ್ದಾರೆ.
 

Latest Videos
Follow Us:
Download App:
  • android
  • ios