ದುಬೈ(ಡಿ.14): ಭಾರತದ ಮಹಿಳಾ ಟೆನಿಸ್‌ ಆಟಗಾರ್ತಿ ಅಂಕಿತಾ ರೈನಾ, ಈ ವರ್ಷದಲ್ಲಿ 3ನೇ ಡಬಲ್ಸ್‌ ಪ್ರಶಸ್ತಿ ಗೆದ್ದಿದ್ದಾರೆ. ಆಲ್‌ ಹಬ್ತೂರ್‌ ಚಾಲೆಂಜ್‌ನ ಡಬಲ್ಸ್‌ ವಿಭಾಗದ ಪ್ರಶಸ್ತಿ ಜಯಿಸಿದ್ದಾರೆ. 

ಆಲ್‌ ಹಬ್ತೂರ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಅಂಕಿತಾ, ಜಾರ್ಜಿಯಾದ ಎಕ್ತಾರಿನೆ ಗೊರ್ಗೊಡ್ಜ್‌ ಜೋಡಿ, ಸ್ಪೇನ್‌ನ ಅಲೀನಾ ಬೊಲ್ಸೊವಾ ಮತ್ತು ಸ್ಲೋವಾಕಿಯಾದ ಕಜಾ ಜುವಾನ್‌ ಜೋಡಿ ವಿರುದ್ಧ 6-4, 3-6, 10-6 ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟಿತು. 

ಈ ವರ್ಷದ ಫೆಬ್ರವರಿಯಲ್ಲಿ ಅಂಕಿತಾ ಮೂರು ಬಾರಿ ಡಬಲ್ಸ್‌ ಫೈನಲ್ ಪ್ರವೇಶಿಸಿದ್ದರು. ಈ ಪೈಕಿ ಪ್ರತ್ಯೇಕ ಜೊತೆಗಾರ್ತಿಯರೊಂದಿಗೆ 2 ಡಬಲ್ಸ್‌ ಪ್ರಶಸ್ತಿ ಗೆದ್ದಿದ್ದರು. ದೀರ್ಘಕಾಲದ ಬಳಿಕ ಟೆನಿಸ್ ಆಡುತ್ತಿರುವುದು ತಮಗೆ ಹೊಸ ಹುರುಪು ತಂದುಕೊಟ್ಟಿದೆ ಎಂದು ಅಂಕಿತಾ ರೈನಾ ಹೇಳಿದ್ದಾರೆ.