ಬೆಂಗಳೂರು ಓಪನ್‌ ಆಡಲಿದ್ದಾರೆ ಲಿಯಾಂಡರ್ ಪೇಸ್

ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಪೇಸ್ ಭಾರತದಲ್ಲಿ ಆಡಲಿರುವ ಕೊನೆಯ ಟೂರ್ನಿ ಎನ್ನುವುದು ವಿಶೇಷ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

Indian Tennis Legend Leander Paes to play in Bangaluru Open

ಬೆಂಗಳೂರು(ಫೆ.07): 2020ರಲ್ಲಿ ತಮ್ಮ 30 ವರ್ಷಗಳ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಲಿರುವ ದಿಗ್ಗಜ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌, ಫೆ.10ರಿಂದ ಆರಂಭಗೊಳ್ಳಲಿರುವ ಬೆಂಗಳೂರು ಓಪನ್‌ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. 

ಇದು ಭಾರತದಲ್ಲಿ ಅವರು ಆಡಲಿರುವ ಕೊನೆ ಟೂರ್ನಿ ಎನ್ನುವುದು ವಿಶೇಷ. ಪೇಸ್‌ ಈ ವರ್ಷ ಕೆಲ ಆಯ್ದ ಪಂದ್ಯಾವಳಿಗಳಲ್ಲಿ ಆಡುತ್ತಿದ್ದು, ಸದ್ಯ ಪುಣೆ ಓಪನ್‌ನಲ್ಲಿ ಕಣಕ್ಕಿಳಿದಿದ್ದಾರೆ. ಬೆಂಗಳೂರು ಓಪನ್‌ನಲ್ಲಿ ಆಡುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ‘ತವರಿನಲ್ಲಿ ಭಾರತೀಯ ಅಭಿಮಾನಿಗಳ ಮುಂದೆ ಆಡುವುದು ನನಗೆ ಬಹಳ ಸಂತಸ ಹಾಗೂ ಸ್ಫೂರ್ತಿ ನೀಡಲಿದೆ. ಬೆಂಗಳೂರು ಅಭಿಮಾನಿಗಳು ಟೆನಿಸ್‌ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ. ಕ್ರೀಡಾಂಗಣ ಉತ್ತಮವಾಗಿದೆ. ಅಲ್ಲಿ ಆಡಲು ನನಗೆ ಖುಷಿಯಾಗುತ್ತದೆ’ ಎಂದಿದ್ದಾರೆ.

ಡೇವಿಸ್‌ ಕಪ್‌: ಕ್ರೊವೇಷಿಯಾ ಪಂದ್ಯಕ್ಕೆ ಭಾರತ ತಂಡ ಪ್ರಕಟ

ನವದೆಹಲಿ: ಮಾ.6 ಹಾಗೂ 7ರಂದು ಕ್ರೊವೇಷಿಯಾ ವಿರುದ್ಧ ಜಾಗ್ರೆಬ್‌ನಲ್ಲಿ ನಡೆಯಲಿರುವ ಡೇವಿಸ್‌ ಕಪ್‌ ವಿಶ್ವ ಗುಂಪು ಅರ್ಹತಾ ಸುತ್ತಿನ ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡಿದೆ. 6 ಸದಸ್ಯರ ತಂಡದಲ್ಲಿ ಲಿಯಾಂಡರ್‌ ಪೇಸ್‌ಗೆ ಸ್ಥಾನ ನೀಡಲಾಗಿದೆ. ರೋಹಿತ್‌ ರಾಜ್‌ಪಾಲ್‌ ತಂಡದ ಆಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ತಂಡ: ಪ್ರಜ್ನೇಶ್‌ ಗುಣೇಶ್ವರನ್‌, ಸುಮಿತ್‌ ನಗಾಲ್‌, ರಾಮ್‌ಕುಮಾರ್‌ ರಾಮನಾಥನ್‌, ರೋಹನ್‌ ಬೋಪಣ್ಣ, ದಿವಿಜ್‌ ಶರಣ್‌, ಲಿಯಾಂಡರ್‌ ಪೇಸ್‌.

 

Latest Videos
Follow Us:
Download App:
  • android
  • ios