Badminton: ಇಂದಿನಿಂದ ಸುದೀರ್‌ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿ
* ಇಂದಿನಿಂದ ಸುದೀರ್‌ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿ ಆರಂಭ
* ಸೈನಾ, ಸಿಂಧು ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ ಭಾರತ ತಂಡ
* ‘ಎ’ ಗುಂಪಿನಲ್ಲಿ ಸ್ಥಾನ ಪಡೆಡಿರುವ ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
ವಾಂಟಾ(ಸೆ.26): ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು(PV Sindhu), ಸೈನಾ ನೆಹ್ವಾಲ್(Saina Nehwal), ಚಿರಾಗ್-ಸಾತ್ವಿಕ್ ಅನುಪಸ್ಥಿತಿಯಲ್ಲಿ ಭಾರತ ತಂಡ ಭಾನುವಾರದಿಂದ ಆರಂಭಗೊಳ್ಳಲಿರುವ ಸುದೀರ್‌ಮನ್ ಕಪ್ ಬ್ಯಾಡ್ಮಿಂಟನ್(Badminton) ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.
‘ಎ’ ಗುಂಪಿನಲ್ಲಿ ಸ್ಥಾನ ಪಡೆಡಿರುವ ಭಾರತಕ್ಕೆ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ಎದುರಾಗಲಿದೆ. ಹಾಲಿ ಚಾಂಪಿಯನ್ ಚೀನಾ ಹಾಗೂ ಆತಿಥೇಯ ಫಿನ್ಲೆಂಡ್ ಸಹ ಗುಂಪಿನಲ್ಲಿವೆ. ಒಂದು ಮುಖಾಮುಖಿಯಲ್ಲಿ 2 ಸಿಂಗಲ್ಸ್(ಪುರುಷ, ಮಹಿಳಾ) ಹಾಗೂ 3 ಡಬಲ್ಸ್(ಪುರುಷ, ಮಹಿಳಾ, ಮಿಶ್ರ) ಪಂದ್ಯಗಳು ಇರಲಿವೆ. ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್, ಬಿ.ಸಾಯಿಪ್ರಣೀತ್ ಭಾರತದ ಸವಾಲು ಮುನ್ನಡೆಸಲಿದ್ದಾರೆ.
ಆರ್ಚರಿ ವಿಶ್ವ ಕೂಟ ಭಾರತಕ್ಕೆ 2 ಬೆಳ್ಳಿ ಪದಕ
ಯಾಂಕ್ಟನ್(ಅಮೆರಿಕ): ಭಾರತದ ಮಹಿಳಾ ಹಾಗೂ ಮಿಶ್ರ ಕಾಂಪೌಂಡ್ ತಂಡಗಳು ಇಲ್ಲಿ ನಡೆಯುತ್ತಿರುವ ಆರ್ಚರಿ(Archery) ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿವೆ. ಎರಡೂ ವಿಭಾಗಗಳ ಫೈನಲ್‌ಗಳಲ್ಲಿ ಭಾರತೀಯ ತಂಡಗಳು ಕೊಲೊಂಬಿಯಾ ವಿರುದ್ಧ ಸೋಲುಂಡವು.
IPL 2021 ಎಂದೆಂದಿಗೂ ನಮ್ದು ಆರ್‌ಸಿಬಿಗೆ ಸಪೋರ್ಟ್ ಎಂದ ಕಿಚ್ಚ ಸುದೀಪ್..!
ಮಿಶ್ರ ತಂಡ ವಿಭಾಗದಲ್ಲಿ ಅಭಿಷೇಕ್ ವರ್ಮಾ-ಜ್ಯೋತಿ ಸುರೇಖಾ ಕೊಲಂಬಿಯಾ ಜೋಡಿ ವಿರುದ್ಧ 150-154ರಲ್ಲಿ ಸೋತರೆ, ಜ್ಯೋತಿ, ಮುಸ್ಕನ್ ಹಾಗೂ ಪ್ರಿಯಾ ಅವರಿದ್ದ ತಂಡವು, 224-229ರ ಅಂತರದಲ್ಲಿ ಪರಾಭವಗೊಂಡಿತು.
ಡುರಾಂಡ್ ಕಪ್ ಸೆಮೀಸ್‌ಗೆ ಬೆಂಗ್ಳೂರಿನ 2 ತಂಡಗಳು
ಕೋಲ್ಕತಾ: ಡುರಾಂಡ್ ಕಪ್ ಫುಟ್ಬಾಲ್(Football) ಟೂರ್ನಿಯ ಸೆಮಿಫೈನಲ್‌ಗೆ ಬೆಂಗಳೂರಿನ 2 ತಂಡಗಳು ಪ್ರವೇಶಿಸಿವೆ. ಶನಿವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) ಆರ್ಮಿ ಗ್ರೀನ್ ತಂಡದ ವಿರುದ್ಧ 3-2 ಗೋಲುಗಳಲ್ಲಿ ಜಯಿಸಿತು. ಸೆಮೀಸ್‌ನಲ್ಲಿ ಬಿಎಫ್‌ಸಿ(BFC), ಎಫ್‌ಸಿ ಗೋವಾ ವಿರುದ್ಧ ಸೆಣಸಲಿದೆ. ಕ್ವಾರ್ಟರ್‌ನಲ್ಲಿ ವಾಕ್ ಓವರ್ ಪಡೆದ ಎಫ್‌ಸಿ ಬೆಂಗಳೂರು ಯುನೈಟೆಡ್(Bengaluru United) ತಂಡ ಸೆಮೀಸ್‌ನಲ್ಲಿ ಕೋಲ್ಕತಾದ ಮೊಹಮೆಡನ್ ಕ್ಲಬ್ ವಿರುದ್ಧ ಆಡಲಿದೆ.