Badminton Legend ಪ್ರಕಾಶ್ ಪಡುಕೋಣೆಗೆ ವಿಶ್ವ ಬ್ಯಾಡ್ಮಿಂಟನ್ ಜೀವಮಾನ ಸಾಧನೆ ಪ್ರಶಸ್ತಿ
* ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆಗೆ ಜೀವಮಾನ ಸಾಧನೆ ಪ್ರಶಸ್ತಿ
* ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯಯೇಷನ್‌ನಿಂದ ನಾಮ ನಿರ್ದೇಶನ
* ಪ್ರಕಾಶ್ ವಿಶ್ವ ಚಾಂಪಿಯನ್‌ಶಿಪ್ ಪದಕ ಗೆದ್ದ ಭಾರತದ ಮೊದಲ ಶಟ್ಲರ್
ನವದೆಹಲಿ(ನ.19): ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್(ಬಿಡಬ್ಲ್ಯುಎಫ್) ನೀಡುವ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಗೆ (Lifetime Achievement Award) ಈ ಬಾರಿ ಭಾರತದ ದಿಗ್ಗಜ ಶಟ್ಲರ್ ಪ್ರಕಾಶ್ ಪಡುಕೋಣೆ (Prakash Padukone) ಅವರು ಭಾಜನರಾಗಲಿದ್ದಾರೆ.
ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯಯೇಷನ್(ಬಿಎಐ) (Badminton Federation Of India) ಪ್ರಕಾಶ್ ಅವರ ಹೆಸರನ್ನು ನಾಮನಿರ್ದೇಶನ ಮಾಡಿತ್ತು. ಪ್ರಶಸ್ತಿ ಆಯೋಗದ ಶಿಫಾರಸಿನ ಮೇರೆಗೆ ಬಿಡಬ್ಲ್ಯುಎಫ್ ಕೌನ್ಸಿಲ್ ಪ್ರಕಾಶ್ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಿದೆ. ಮಾಜಿ ವಿಶ್ವ ನಂ.1 ಆಟಗಾರ ಪ್ರಕಾಶ್ ವಿಶ್ವ ಚಾಂಪಿಯನ್‌ಶಿಪ್ ಪದಕ ಗೆದ್ದ ಭಾರತದ ಮೊದಲ ಶಟ್ಲರ್ ಆಗಿದ್ದು, 2018ರಲ್ಲಿ ಬಿಎಐ ಜೀವಮಾನದ ಸಾಧನೆ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.
ಇನ್ನು ಉತ್ತರಖಂಡದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಅಲಕಾನಂದ ಅಶೋಕ್ ಪುರುಷ & ಮಹಿಳಾ ಲಿಂಗ ಸಮಾನತೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಕಳೆದ ಹಲವು ವರ್ಷಗಳಿಂದ ಬ್ಯಾಡ್ಮಿಂಟನ್ (Badminton) ಆಡಳಿತದಲ್ಲಿ ಮುಂಚೂಣಿಯಲ್ಲಿದ್ದಾರೆ.
Ab De Villiers Retires: ಕಳಚಿತು ಕ್ರಿಕೆಟ್ ಕೊಂಡಿ: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಎಬಿಡಿ ಗುಡ್ ಬೈ..!
ದಿಗ್ಗಜ ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಅವರಿಗೆ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿರುವುದು ನಮಗೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ. ಅವರ ಕೊಡುಗೆಯಿಂದಾಗಿಯೇ ಭಾರತದ ಬ್ಯಾಡ್ಮಿಂಟನ್ ಉನ್ನತ ಹಂತ ತಲುಪಿದೆ ಎಂದು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ಹರ್ಷ ವ್ಯಕ್ತಪಡಿಸಿದ್ದಾರೆ.
ಇಂಡೋನೇಷ್ಯಾ ಮಾಸ್ಟರ್ಸ್: ಅಕ್ಸೆಲ್ಸನ್‌ಗೆ ಪ್ರಣಯ್ ಶಾಕ್!
ಬಾಲಿ(ಇಂಡೋನೇಷ್ಯಾ): ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ (Indonesia masters Tournament) ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.2 ಡೆನ್ಮಾರ್ಕ್ ವಿಕ್ಟರ್ ಆಕ್ಸೆಲ್ಸನ್ ವಿರುದ್ಧ ಗೆದ್ದ ಭಾರತದ ಎಚ್.ಎಸ್.ಪ್ರಣಯ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
Interview: ದೇಶದಲ್ಲಿ Basketball ಕ್ರಿಕೆಟ್‌ನಷ್ಟೇ ಜನಪ್ರಿಯಗೊಳ್ಳಲಿದೆ: BFI ಅಧ್ಯಕ್ಷ ಗೋವಿಂದರಾಜು
14-21, 21-19, 21-16 ಗೇಮ್‌ಗಳಲ್ಲಿ ಗೆದ್ದ ಪ್ರಣಯ್, ಮಾಜಿ ವಿಶ್ವ ನಂ.1 ವಿರುದ್ಧ 6 ಮುಖಾಮುಖಿಗಳಲ್ಲಿ ಮೊದಲ ಗೆಲುವು ಸಾಧಿಸಿದರು. ಇದೇ ವೇಳೆ ಕಿದಂಬಿ ಶ್ರೀಕಾಂತ್ (Kidambi Srikanth) ಕೂಡ ಕ್ವಾರ್ಟರ್ ಫೈನಲ್‌ಗೇರಿದ್ದು, ಶುಕ್ರವಾರ ಸೆಮೀಸ್‌ನಲ್ಲಿ ಸ್ಥಾನಕ್ಕಾಗಿ ಪ್ರಣಯ್ ವಿರುದ್ಧ ಸೆಣಸಲಿದ್ದಾರೆ. ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು (PV Sindhu) ಕ್ವಾರ್ಟರ್ ಫೈನಲ್‌ಗೇರಿದ್ದು, ಟರ್ಕಿಯ ನೆಸ್ಲಿಹಾನ್ ವಿರುದ್ಧ ಸೆಣಸಲಿದ್ದಾರೆ.
ಏಷ್ಯನ್ ಆರ್ಚರಿ: ಸ್ವರ್ಣ ಗೆದ್ದ ಜ್ಯೋತಿ ಸುರೇಖಾ
ಢಾಕಾ: ವಿಶ್ವ ಚಾಂಪಿಯನ್‌ಶಿಪ್‌ನ ಮೂರು ಪದಕ ವಿಜೇತೆ ಜ್ಯೋತಿ ಸುರೇಖಾ ವೆನ್ನಮ್ ಇಲ್ಲಿ ನಡೆಯುತ್ತಿರುವ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್‌ಲ್ಲಿ (Asian Archery Championship) ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
Ind vs NZ Series: ನನ್ನ ವೀಕ್ನೆಸ್ ಗೊತ್ತು, ಬೌಲ್ಟ್ ಕುರಿತು ಅಚ್ಚರಿಯ ಹೇಳಿಕೆ ನೀಡಿದ ರೋಹಿತ್ ಶರ್ಮಾ..!
ಗುರುವಾರ ನಡೆದ ಕಾಂಪೌಂಡ್ ಮಹಿಳಾ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಜ್ಯೋತಿ, ದಕ್ಷಿಣ ಕೊರಿಯಾದ ಓಹ್ ಯೂಹ್ಯುನ್‌ರನ್ನು 146-145 ಅಂಕಗಳಿಂದ ಮಣಿಸಿ ಸ್ವರ್ಣ ಗೆದ್ದುಕೊಂಡರು. ಕಾಂಪೌಂಡ್ ಪುರುಷರ ವೈಯಕ್ತಿಕ ವಿಭಾಗದಲ್ಲಿ ಅಭಿಷೇಕ್ ವರ್ಮಾ ಹಾಗೂ ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಜ್ಯೋತಿ ಹಾಗೂ ರಿಷಬ್ ಯಾದವ್ ಬೆಳ್ಳಿ ಪದಕ ಜಯಿಸಿದರು. ಭಾರತ ಕೂಟದಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದೆ.