T20 World Cup: ಪಾಕ್ ಕ್ರಿಕೆಟ್ ತಂಡಕ್ಕೆ ಹೇಡನ್ ಕೋಚ್!
* ಪಾಕ್ ತಂಡದ ಪ್ರಧಾನ ಕೋಚ್ ಆಗಿ ಮ್ಯಾಥ್ಯೂ ಹೇಡನ್ ನೇಮಕ
* ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾ ಮಾಜಿ ವೇಗಿ ವೆರ್ನಾನ್ ಫಿಲಾಂಡರ್ ಆಯ್ಕೆ
* ರಮೀಜ್ ರಾಜಾ ಪಿಸಿಬಿ ಅಧ್ಯಕ್ಷರಾದ ಬೆನ್ನಲ್ಲೇ ಮಹತ್ವದ ತೀರ್ಮಾನ
ಕರಾಚಿ(ಸೆ.14): ಐಸಿಸಿ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡ ಆಸ್ಪ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್‌ರನ್ನು ಪ್ರಧಾನ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ದ.ಆಫ್ರಿಕಾದ ಮಾಜಿ ವೇಗಿ ವರ್ನೊನ್ ಫಿಲಾಂಡರ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ನೇಮಕಗೊಂಡ ಬೆನ್ನಲ್ಲೇ, ಕೋಚ್‌ಗಳ ನೇಮಕವೂ ಆಗಿದೆ. ದಿಗ್ಗಜ ಬ್ಯಾಟ್ಸ್‌ಮನ್ ಆಗಿರುವ ಹೇಡನ್, ಸಾಕಷ್ಟು ಅನುಭವ ಹೊಂದಿದ್ದು, ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದು, ಹೇಡನ್ ಮಾರ್ಗದರ್ಶನ ತಂಡಕ್ಕೆ ಅನುಕೂಲವಾಗಲಿದೆ ಎಂದು ಪಿಸಿಬಿ ನೂತನ ಅಧ್ಯಕ್ಷ ತಿಳಿಸಿದ್ದಾರೆ.
ಇನ್ನು ಫಿಲಾಂಡರ್ ಸಹಾ ಅತ್ಯುತ್ತಮ ಅನುಭವಿ ಕ್ರಿಕೆಟಿಗನಾಗಿದ್ದು, ಬೌಲಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ದ ಫಿಲಾಂಡರ್ ಉತ್ತಮ ಬೌಲಿಂಗ್ ದಾಖಲೆ ಹೊಂದಿದ್ದು, ಅವರ ಅನುಭವ ಪಾಕ್ ತಂಡಕ್ಕೆ ನೆರವಾಗಲಿದೆ ಎಂದು ರಾಜಾ ತಿಳಿಸಿದ್ದಾರೆ
IPL 2021: RCB ತಂಡ ಕೂಡಿಕೊಂಡ ಬೆಂಕಿ-ಬಿರುಗಾಳಿ..! ಈ ಸಲಾ ಕಪ್ ನಮ್ದೇ ನಾ..?
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ತಂಡದ ಪ್ರಧಾನ ಕೋಚ್ ಮಿಸ್ಬಾ ಉಲ್ ಹಕ್ ಹಾಗೂ ಬೌಲಿಂಗ್ ಕೋಚ್ ವಕಾರ್ ಯೂನಿಸ್ ತಮ್ಮ ಸ್ಥಾನಗಳಿಗೆ ದಿಢೀರ್ ರಾಜಿನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಪಿಸಿಬಿ ಸಕ್ಲೈನ್ ಮುಷ್ತಾಕ್ ಹಾಗೂ ಅಬ್ದುಲ್ ರಜಾಕ್ ಅವರನ್ನು ಹಂಗಾಮಿ ಕೋಚ್ ಆಗಿ ನೇಮಿಸಿತ್ತು.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಇನ್ನು ಅಕ್ಟೋಬರ್ 24ರಿಂದ ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಬಾಬರ್ ಅಜಂ ಪಡೆಯು ಬಲಿಷ್ಠ ಟೀಂ ಇಂಡಿಯಾವನ್ನು ಎದುರಿಸಲಿದೆ.