ಪ್ಯಾರಿ​ಸ್(ಜೂ.11)‌: ವಿಶ್ವದ ನಂ.1 ಟೆನಿಸ್‌ ಆಟ​ಗಾರ ನೊವಾಕ್‌ ಜೋಕೊ​ವಿಚ್‌ ಹಾಗೂ 13 ಬಾರಿ ಫ್ರೆಂಚ್‌ ಒಪನ್‌ ಗೆದ್ದಿ​ರುವ ರಾಫೆಲ್‌ ನಡಾಲ್‌ ಫ್ರೆಂಚ್‌ ಓಪನ್‌ ಸೆಮಿಫೈನಲ್‌ ಪ್ರವೇಶಿಸಿದ್ದು, ಇಬ್ಬರೂ ಸೆಮಿಫೈನಲ್‌ನಲ್ಲೇ ಮುಖಾಮುಖಿಯಾಗಲಿದ್ದಾರೆ. ಹೀಗಾಗಿ ಹೈವೋ​ಲ್ಟೇಜ್‌ ಕದ​ನಕ್ಕೆ ಶುಕ್ರ​ವಾರದ ಓಪ​ನ್‌​ ಸೆಮಿ​ಫೈ​ನ​ಲ್‌​ ಸಾಕ್ಷಿ​ಯಾ​ಗ​ಲಿದೆ. 

ಇಬ್ಬರೂ ಫ್ರೆಂಚ್‌ ಓಪನ್‌ ಸೆಮಿ​ಫೈ​ನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು 8ನೇ ಬಾರಿ ಆಗಿ​ದೆ. ಜೋಕೊ​ವಿಚ್‌ ಇಟ​ಲಿಯ ಮ್ಯಾಥ್ಯೂ ಬೆರೆಟಿನ ವಿರುದ್ಧ 6-3,6-2,6-7(5), 7-5ರಿಂದ ಗೆದ್ದರೆ, ನಡಾಲ್‌ ಅರ್ಜೆಂಟೀ​ನಾದ ಡೀಗೋ ಸ್ವಾಜ್‌ರ್‍ಮ್ಯಾನ್‌ ವಿರುದ್ಧ 6-3,4-6,6-4,6-0 ರಿಂದ ಗೆದ್ದರು.

ಫ್ರೆಂಚ್‌ ಓಪನ್‌: ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್‌ ಔಟ್‌

ಫ್ರೆಂಚ್‌ ಓಪನ್‌: ಚೊಚ್ಚಲ ಫೈನಲ್‌ಗೆ ಅನಸ್ತೇಸಿಯಾ

ಪ್ಯಾರಿಸ್‌: ರಷ್ಯಾದ ಅನಸ್ತೇಸಿಯಾ ಪಾವ್ಲುಚೆಂಕೋವಾ ಫ್ರೆಂಚ್‌ ಓಪನ್‌ ಮಹಿಳೆಯರ ಸಿಂಗಲ್ಸ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರದ ಸೆಮಿಫೈನಲ್‌ನಲ್ಲಿ ಸ್ಲೊವೇನಿಯಾದ ತಮಾರಾ ಜಿದಾನ್ಸೆಕ್‌ ವಿರುದ್ಧ 7-5, 6-3 ನೇರ ಸೆಟ್‌ ಗಳಿಸಿದ ಪಾವ್ಲುಚೆಂಕೋವಾ, 2015ರಲ್ಲಿ ಮರಿಯಾ ಶರಪೋವಾ ಬಳಿಕ ಫ್ರೆಂಚ್‌ ಓಪನ್‌ ಮಹಿಳೆಯರ ಸಿಂಗಲ್ಸ್‌ ಫೈನಲ್‌ ತಲುಪಿದ ಮೊದಲ ರಷ್ಯಾ ಆಟಗಾರ್ತಿ ಎನಿಸಿಕೊಂಡಿದ್ದಾರೆ.