ಫ್ರೆಂಚ್ ಓಪನ್ 2020: ಪ್ರಶಸ್ತಿಗಾಗಿ ನಡಾಲ್-ಜೋಕೋ ನಡುವೆ ಸೆಣಸಾಟ
ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ರಾಫೆಲ್ ನಡಾಲ್ ದಾಖಲೆಯ 13ನೇ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ್ದಾರೆ. ಫೈನಲ್‌ನಲ್ಲಿ ಜೋಕೋವಿಚ್ ಅವರನ್ನು ಎದುರಿಸಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್(ಅ.10): ದಾಖಲೆ 13ನೇ ಗ್ರ್ಯಾನ್‌ಸ್ಲಾಮ್ ಮೇಲೆ ಕಣ್ಣಿಟ್ಟಿ ರುವ ಸ್ಪೇನ್‌ನ ರಾಫೆಲ್ ನಡಾಲ್, ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಫೈನಲ್ ಪ್ರವೇಶಿಸಿದ್ದಾರೆ. ಇದ ರೊಂದಿಗೆ ನಡಾಲ್ 13 ಬಾರಿ ಫ್ರೆಂಚ್ ಓಪನ್ ಫೈನಲ್‌ಗೇರಿದ ಮೊದಲ ಟೆನಿಸಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೀಗ ಫ್ರೆಂಚ್ ಓಪನ್ ಫೈನಲ್‌ನಲ್ಲಿ ನೊವಾಕ್ ಜೋಕೋವಿಚ್ ಅವರನ್ನು ಎದುರಿಸಲಿದ್ದಾರೆ
ಸ್ವಿಜರ್‌ಲೆಂಡ್‌ನ ಫೆಡರರ್ 12 ಸಲ ವಿಂಬಲ್ಡನ್ ಫೈನಲ್‌ಗೇರಿದ್ದಾರೆ. ಪುರುಷರ ಸಿಂಗಲ್‌ಸ್ ಸೆಮೀಸ್ ನಲ್ಲಿ ನಡಾಲ್, ಅರ್ಜೆಂಟೀನಾದ ಡಿಗೊ ಸ್ಚರ್ಟಜಮನ್ ವಿರುದ್ಧ 6-3, 6-3, 7-6(7-0) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಇನ್ನು ವಿಶ್ವ ನಂ.1 ಶ್ರೇಯಾಂಕಿತ ಜೋಕೋ ಸ್ಟೆಫಾನೋ ಟಿಟ್ಸಿಪಾಸ್ ಎದುರು 6-3, 6-2, 5-7, 4-6 ಹಾಗೂ 6-1 ಸೆಟ್‌ಗಳಿಂದ ಪ್ರಯಾಸದ ಗೆಲುವು ಪಡೆದರು.
ಫ್ರೆಂಚ್ ಓಪನ್: ಸ್ವಿಟೆಕ್-ಕೆನಿನ್ ಫೈನಲ್ ಫೈಟ್
ಕೆನಿನ್-ಸ್ವಿಟೆಕ್ ಫೈನಲ್ ಇಂದು: ಮಹಿಳಾ ಸಿಂಗಲ್‌ಸ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಸೋಫಿಯಾ ಕೆನಿನ್ ಹಾಗೂ ಪೋಲೆಂಡ್‌ನ ಇಗಾ ಸ್ವಿಟೆಕ್ ಸೆಣಸಲಿದ್ದಾರೆ. ಈ ವರ್ಷದ 2ನೇ ಗ್ರ್ಯಾನ್‌ಸ್ಲಾಮ್ ಮೇಲೆ ಕೆನಿನ್ ಕಣ್ಣಿಟ್ಟಿದ್ದರೆ, ಸ್ವಿಟೆಕ್ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಗೆಲ್ಲುವ ತವಕದಲ್ಲಿದ್ದಾರೆ.
ಈ ವರ್ಷದ ಆರಂಭದಲ್ಲಿ ಕೆನಿನ್, ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದರು. ಇತ್ತ ಟೂರ್ನಿಯುದ್ದಕ್ಕೂ ಅಚ್ಚರಿ ಫಲಿತಾಂಶ ನೀಡಿರುವ ಸ್ವಿಟೆಕ್ ಪ್ರಿ ಕ್ವಾರ್ಟರಲ್ಲಿ, ರೋಮೇನಿಯಾದ ಸಿಮೊನಾ ಹಾಲೆಪ್ ರನ್ನು ಹೊರದಬ್ಬಿದ್ದರು.