Asianet Suvarna News Asianet Suvarna News

ಮತ್ತೆ ಟೀಂ ಇಂಡಿಯಾ ಕೋಚ್ ಆಗ್ತಾರಾ ಗ್ಯಾರಿ ಕಸ್ರ್ಟನ್‌..?

* ಟಿ20 ವಿಶ್ವಕಪ್‌ ಬಳಿಕ ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಅವಧಿ ಅಂತ್ಯ

* ಹೊಸ ಕೋಚ್‌ ಹುಡುಕಾಟದಲ್ಲಿದೆ ಬಿಸಿಸಿಐ

* ಗ್ಯಾರಿ ಕರ್ಸ್ಟನ್‌ ಟೀಂ ಇಂಡಿಯಾ ಕೋಚ್ ಆಗುವ ಕುರಿತಂತೆ ಹೇಳಿದ್ದೇನು?

Former Cricketer Gary Kirsten not looking to make comeback as Team India coach Says Report kvn
Author
New Delhi, First Published Sep 15, 2021, 12:50 PM IST

ನವದೆಹಲಿ(ಸೆ.15): ಟಿ20 ವಿಶ್ವಕಪ್‌ ಬಳಿಕ ರವಿಶಾಸ್ತ್ರಿ ಭಾರತ ತಂಡದ ಪ್ರಧಾನ ಕೋಚ್‌ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದ್ದು, ನೂತನ ಕೋಚ್‌ ಯಾರಾಗಬಹುದು ಎನ್ನುವ ಚರ್ಚೆ ಶುರುವಾಗಿದೆ. 

ಈ ಸಂಬಂಧ ಟೈಮ್ಸ್‌ನೌ ನ್ಯೂಸ್‌ ಮಾಧ್ಯಮಕ್ಕೆ ಹೇಳಿಕೆ ನೀಡಿರುವ 2011ರ ಏಕದಿನ ವಿಶ್ವಕಪ್‌ ವಿಜೇತ ತಂಡದ ಕೋಚ್‌ ಆಗಿದ್ದ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಗ್ಯಾರಿ ಕಸ್ರ್ಟನ್‌, ತಾವು ಮತ್ತೆ ಟೀಂ ಇಂಡಿಯಾ ಕೋಚ್‌ ಆಗಲು ಅರ್ಜಿ ಹಾಕುವುದಿಲ್ಲ ಎಂದಿದ್ದಾರೆ. 

ಗ್ಯಾರಿ ಕಸ್ರ್ಟನ್ 2007ರಿಂದ 2011ರ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಗ್ಯಾರಿ ಕಸ್ರ್ಟನ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಟೆಸ್ಟ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿತ್ತು. ಇದಾದ ಬಳಿಕ ಬರೋಬ್ಬರಿ 28 ವರ್ಷಗಳ ಬಳಿಕ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಜಯಿಸಿ ಸಂಭ್ರಮಿಸಿತ್ತು. ಇನ್ನು ಗುರು ಗ್ಯಾರಿ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

ಮಾಮರವೆಲ್ಲೋ ಕೋಗಿಲೆ ಎಲ್ಲೋ ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದ ಅನಿಲ್ ಕುಂಬ್ಳೆ!

ಇದೇ ವೇಳೆ ಲಂಕಾ ಪ್ರವಾಸದ ವೇಳೆ ಭಾರತ ತಂಡದ ಕೋಚ್‌ ಆಗಿದ್ದ ರಾಹುಲ್‌ ದ್ರಾವಿಡ್‌ರನ್ನು ಪೂರ್ಣಾವಧಿ ಕೋಚ್‌ ಆಗುವಂತೆ ಕೇಳಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ. 
 

Follow Us:
Download App:
  • android
  • ios