ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಧರಣಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದ ಸಿಪಿಐ ನಾಯಕಿ ಬೃಂದಾ ಕಾರಾಟ್‌ಗೆ ಮುಖಭಂಗವಾಗಿದೆ. ಇದು ಕ್ರೀಡಾಪಟುಗಳ ಧರಣಿ, ಇದನ್ನು ರಾಜಕೀಯ ಮಾಡಬೇಡಿ. ನೀವು ವೇದಿಕೆಯಿಂದ ಕೆಳಗಿಳಿಯಿರಿ ಎಂದು ಭಜರಂಗ ಪೂನಿಯಾ ಸೇರಿದಂತೆ ಕುಸ್ತಿಪಟುಗಳು ಹೇಳಿದ ಘಟನೆ ನಡೆದಿದೆ.
ದೆಹಲಿ(ಜ.19): ಭಾರತೀಯ ಕುಸ್ತಿ ಫೆಡರೇಶನ್ ಹಾಗೂ ಕುಸ್ತಿಪಟುಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪ ಮಾಡಿರುವ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಭಾರತದ ಖ್ಯಾತ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ಸೇರಿದಂತೆ ಹಲವು ಕ್ರೀಡಾಪಟುಗಳು ಈ ಧರಣಿಯ ನೇತೃತ್ವ ವಹಿಸಿದ್ದಾರೆ. ಈ ಧರಣಿಯಲ್ಲಿ ಪಾಲ್ಗೊಳ್ಳಲು ಬಂದ ಸಿಪಿಐ ನಾಯಕಿ ಬೃಂದಾ ಕಾರಾಟ್‌ಗೆ ಮುಖಭಂಗವಾಗಿದೆ. ವೇದಿಕೆಗೆ ಆಗಮಿಸಿದ ಬೃಂದಾ ಕಾರಾಟ್ ಹಾಗೂ ಎಡಪಕ್ಷಗಳ ನಾಯಕಿರನ್ನು ವೇದಿಕೆಯಿಂದ ಹೊರಕಳುಹಿಸಿದ ಘಟನ ನಡೆದಿದೆ. ಇದು ಕ್ರೀಡಾಪಟುಗಳ ಧರಣಿ. ಇದನ್ನು ರಾಜಕೀಯ ಮಾಡಬೇಡಿ, ದಯವಿಟ್ಟು ವೇದಿಕೆಯಿಂದ ಹೊರನಡೆಯಿರಿ ಎಂದು ಕುಸ್ತಿಪಟು ಭದರಂಗ್ ಪೂನಿಯಾ ಹೇಳಿದ್ದಾರೆ.
ಕುಸ್ತಿಪಟುಗಳ ಧರಣಿಗೆ ಬೃಂದಾ ಕಾರಾಟ್ ಹಾಗೂ ಇತಪ ಸಿಪಿಐ ನಾಯಕಿಯರು ಆಗಮಿಸಿದ್ದಾರೆ. ಕುಸ್ತಿಪಟಗಳ ಧರಣಿಯಿಂದ ರಾಜಕೀಯ ಮೈಲೇಜ್ ಪಡೆಯಲು ಯತ್ನಿಸಿದ್ದರು. ಇದಕ್ಕಾಗಿ ಜಂತರ್ ಮಂತರ್‌ಗೆ ಆಗಮಿಸಿದ ಬಂದಾ ಕಾರಾಟ್, ನೇರವಾಗಿ ಕುಸ್ತಿಪಟುಗಳ ಧರಣಿ ನಡೆಸುತ್ತಿದದ್ ವೇದಿಕೆ ಆಗಮಿಸಿದರು. ಈ ವೇಳೆ ಇಡೀ ಕುಸ್ತಿಪಟುಗಳು ಈ ನಡೆಯನ್ನು ವಿರೋಧಿಸಿದರು. ವೇದಿಕೆಯಿದ ಹೊರನಡೆಯುವಂತೆ ಸೂಚಿಸಿದರು.
ದೆಹಲಿಯಲ್ಲಿ ಮುಂದುವರಿದ ಕುಸ್ತಿಪಟುಗಳ ಪ್ರತಿಭಟನೆ!
ವೇದಿಕೆ ಹತ್ತುತ್ತವೇ ಮುಖಭಂಗಕ್ಕೆ ಒಳಗಾದ ಬೃಂದಾ ಕಾರಾಟ್ ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ನಾವು ಮಾತನಾಡುವುದಿಲ್ಲ. ನೀವು ಮಾತನಾಡಿ ಎಂದು ಮನವಿ ಮಾಡಿದ್ದಾರೆ. ಆದರೆ ಕುಸ್ತಿಪಟುಗಳು ವೇದಿಕೆ ಬಿಟ್ಟು ಕೆಳಗಿಳಿಯುವಂತೆ ಮನವಿ ಮಾಡಿದ್ದಾರೆ. ತೀವ್ರ ಹಿನ್ನಡೆ ಅನುಭವಿಸಿದ ಬೃಂದಾ ಕಾರಾಟ್ ಹಾಗೂ ಇತತರು ವೇದಿಕೆಯಲ್ಲಿ ಕುಳಿತು ಧರಣಿಗೆ ಬೆಂಬಲ ನೀಡುವುದಾಗಿ ಮನವಿ ಮಾಡಿದ್ದಾರೆ. ಈ ವೇಳೆ ಕುಸ್ತಿಪಟು ಭಜರಂಗ್ ಪೂನಿಯಾ, ಮೈಕ್ ಮೂಲಕ ಮನವಿ ಮಾಡಿದ್ದಾರೆ. ಇದು ಕ್ರೀಡಾಪಟುಗಳು ನಡೆಸುತ್ತಿರುವ ಧರಣಿ. ಇಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ. ನೀವು ವೇದಿಕೆಯಿಂದ ಕೆಳಗಿಳಿಯುವಂತೆ ಮನವಿ ಮಾಡಿದ್ದರೆ. ಈ ವಿಚಾರವನ್ನು ರಾಜಕೀಯ ಮಾಡಬೇಡಿ ಎಂದು ಕೈಜೋಡಿ ಮನವಿ ಮಾಡಿದರು.
ಕುಸ್ತಿಪಟುಗಳು ವೇದಿಕೆಯಲ್ಲಿ ಬೃಂದಾ ಕಾರಾಟ್‌ಗೆ ಅವಕಾಶ ನೀಡಲಿಲ್ಲ. ಇದರಿಂದ ಹಿನ್ನಡೆ ಅನುಭವಿಸಿದ ಕಾರಟ್ ಹಾಗೂ ಇತರರು ಸ್ಥಳದಿಂದ ಕಾಲ್ಕಿತ್ತರು. ಬೃಂದಾ ಕಾರಾಟ್ ಈ ಧರಣಿಯಲ್ಲಿ ಪಾಲ್ಗೊಳ್ಳಲು ಪ್ರಮುಖ ಕಾರಣವಿದೆ. ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಬಿಜೆಪಿ ಜೊತೆ ಗುರುತಿಸಿಕೊಂಡಿರುವ ನಾಯಕರಾಗಿದ್ದಾರೆ. ಹೀಗಾಗಿ ಈ ಅಸ್ತ್ರ ಹಿಡಿದು ಬಿಜೆಪಿ ಸರ್ಕಾರ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ತಂತ್ರ ಹೆಣೆಯಲಾಗಿತ್ತು. ಆದರೆ ಇದಕ್ಕೆ ಅವಕಾಶ ಸಿಗಲಿಲ್ಲ. ಇತ್ತ ತೀವ್ರ ಪ್ರತಿಭಟನೆಯ ಬೆನ್ನಲ್ಲೇ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ರೆಸ್ಲಿಂಗ್ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ದೌರ್ಜನ್ಯದ ಆರೋಪ!
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ತನಿಖೆ ನಡೆಸಬೇಕು. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವವರೆಗೆ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕುಸ್ತಿಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಎಲ್ಲಾ ಆರೋಪಗಳನ್ನು ಬ್ರಿಜ್‌ಭೂಷಣ್ ನಿರಾಕರಿಸಿದ್ದು, ಯಾವುದೇ ತನಿಖೆಗೆ ಸಿದ್ಧ ಎಂದಿದ್ದಾರೆ.
