Doing Nothing : ಒಂದೇ ಕಡೆ ಕುಳಿತುಕೊಳ್ಳಿ ಅಂದ್ರೆ ಎಷ್ಟು ಹೊತ್ತು ಕುಳಿತುಕೊಳ್ತೀರಿ? ಐದು, ಹತ್ತು ನಿಮಿಷ ಅಷ್ಟೆ. ನಂತ್ರ ಕೈ ಮೊಬೈಲ್ ಹಿಡಿಯುತ್ತೆ, ಮನಸ್ಸು ಟೀ ಬಯಸುತ್ತೆ. ಆದ್ರೆ ಏನೂ ಮಾಡ್ದೆ ಒಂದೇ ಕಡೆ 90 ನಿಮಿಷ ಕುಳಿತುಕೊಳ್ಳುವ ಸ್ಪರ್ಧೆಯೊಂದಿದೆ.

ಕಾಂಪಿಟೇಷನ್ (Competition) ಅಂದ್ರೆ ಅಲ್ಲಿ ಸ್ಪರ್ಧಿಗಳು ಏನಾದ್ರೂ ಆಕ್ಟಿವಿಟಿ ಮಾಡ್ಬೇಕಾಗುತ್ತೆ. ಡಾನ್ಸ್, ಹಾಡು, ಓಟ, ಡ್ರಾಯಿಂಗ್ ಹೀಗೆ ಏನಾದ್ರೂ ಮಾಡ್ಲೇಬೇಕು. ಆದ್ರೆ ಒಂದು ಕಾಂಪಿಟೇಷನ್ ಇದೆ. ಅದ್ರಲ್ಲಿ ನೀವು ಏನೂ ಮಾಡ್ಬೇಕಾಗಿಲ್ಲ. ಸುಮ್ಮನೆ ಕುಳಿತುಕೊಳ್ಬೇಕು. ಯಾರು ಹೆಚ್ಚು ಹೊತ್ತು ಕುಳಿತುಕೊಳ್ತಾರೋ ಅವರಿಗೆ ಪ್ರಶಸ್ತಿ. ಎಷ್ಟು ಈಸಿ ಇದೆ ಸ್ಪರ್ಧೆ ಅಂತ ನೀವು ಅಂದ್ಕೊಂಡಿರಬಹುದು. ನಮಗೆ ಐದು ನಿಮಿಷ ಸುಮ್ಮನೆ ಕುಳಿತುಕೊಳ್ಳೋದು ಕಷ್ಟ. ಒಂದೇ ಕಡೆ ಧ್ಯಾನ ಮಾಡ್ತಾ ಕುಳಿತುಕೊಳ್ಳಿ ಅಂದ್ರೆ ಜನ ನಿದ್ರೆ ಮಾಡ್ತಾರೆ. ಮೊಬೈಲ್, ಟಿವಿ, ಮಾತು, ಟ್ರಿಪ್ ಅಂತ ಸದಾ ಆಕ್ಟಿವ್ ಆಗಿರುವ ಜನರಿಗೆ ಕುಳಿತುಕೊಳ್ಳೋದು ದೊಡ್ಡ ಸವಾಲು. ಅವರ ಮನಸ್ಸು, ದೇಹವನ್ನು ರಿಲ್ಯಾಕ್ಸ್ ಮಾಡಲೆಂದೇ ಈ ಸ್ಪರ್ಧೆ. ಈ ವಿಚಿತ್ರ ಕಾಂಪಿಟೇಷನ್ ದಕ್ಷಿಣ ಕೋರಿಯಾದಲ್ಲಿ ನಡೆಯುತ್ತೆ. ಈ ಕಾಂಪಿಟೇಷನ್ ಸ್ಪೇಷಾಲಿಟಿ ಏನು? ಸ್ಪರ್ಧಿಗಳು ಏನೆಲ್ಲ ಮಾಡ್ಬೇಕು ಎಂಬ ಮಾಹಿತಿ ಇಲ್ಲಿದೆ.

ಡೂಯಿಂಗ್ ನಥಿಂಗ್ ಗೇಮ್ (Doing Nothing Game) : 

ದಕ್ಷಿಣ ಕೋರಿಯಾ (South Korea)ದಲ್ಲಿ ಡೂಯಿಂಗ್ ನಥಿಂಗ್ ಆಟವನ್ನು ಅನೇಕ ವರ್ಷಗಳಿಂದ ಆಡ್ಕೊಂಡು ಬರಲಾಗ್ತಿದೆ. ಇದಕ್ಕೆ ಸ್ಪೇಸ್-ಔಟ್ ಅಂತ ಹೆಸರಿದೆ. ಗದ್ದಲವನ್ನು ದಿಕ್ಕರಿಸುವ ಸ್ಪರ್ಧೆ ಇದು. 2014 ರಲ್ಲಿ ಸಿಯೋಲ್ನಲ್ಲಿಇದನ್ನು ಆರಂಭಿಸಲಾಯ್ತು. ಅಂದಿನಿಂದ ಅಂತರರಾಷ್ಟ್ರೀಯ ಗಮನವನ್ನು ಇದು ಸೆಳೆಯುತ್ತಿದೆ. ಸ್ಪೇಸ್ ಔಟ್ ಸ್ಪರ್ಧೆ, ಇತರ ಸ್ಪರ್ಧೆಗಳಷ್ಟೆ ಮಹತ್ವವನ್ನು ಪಡೆದಿದೆ. ಇಡೀ ದಿನ ಕೆಲ್ಸ, ಒತ್ತಡ ಅಂತ ಓಡಾಡುವ ಜನರಿಗೆ ನೆಮ್ಮದಿ ನೀಡುವುದು ಈ ಕ್ರಿಡೆಯ ಉದ್ದೇಶವಾಗಿದೆ.

ಗಂಭೀರ್ ಹಾಗೂ ಸೂರ್ಯಕುಮಾರ್ ಯಾದವ್‌ಗೆ ಎಚ್ಚರಿಕೆ ಕೊಟ್ಟ ಇರ್ಫಾನ್ ಪಠಾಣ್!

ಸ್ಪೇಸ್ ಔಟ್ ಸ್ಪರ್ಧೆಯ ನಿಯಮ ಏನು? : 

ಸ್ಪೇಸ್-ಔಟ್ ಸ್ಪರ್ಧೆಯಲ್ಲಿ ಭಾಗವಹಿಸುವವರು ನಿದ್ರೆ ಮಾಡಬಾರದು. ಮಾತನಾಡಬಾರದು. ಫೋನ್ಗಳನ್ನು ಬಳಸಬಾರದು. ಎಲ್ಲೂ ಸುತ್ತಾಡಬಾರದು. ಕುಳಿತಲ್ಲಿಯೇ ಕುಳಿತುಕೊಳ್ಳಬೇಕು. ಒಂದಲ್ಲ ಎರಡಲ್ಲ ಬರೋಬ್ಬರಿ 90 ನಿಮಿಷಗಳ ಕಾಲ ಒಂದೇ ಕಡೆ ಕುಳಿತು ವಿಶ್ರಾಂತಿ ಪಡೆಯಬೇಕು. ಸ್ಪರ್ಧಿಗಳು ಎಚ್ಚರವಾಗಿದ್ದಾರಾ, ಶಾಂತವಾಗಿದ್ದಾರಾ ಎಂಬುದನ್ನು ನಿರಂತರವಾಗಿ ಪರೀಕ್ಷೆ ಮಾಡಲಾಗುತ್ತದೆ. ಅಲ್ಲದೆ ಸ್ಪರ್ಧಿಗಳ ಹೃದಯಬಡಿತವನ್ನೂ ಪರೀಕ್ಷಿಸಲಾಗುತ್ತದೆ. ಸ್ಥಿರವಾದ ಹೃದಯ ಬಡಿತವನ್ನು ಹೊಂದಿರುವ ವ್ಯಕ್ತಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ವಿರಾಟ್ ಕೊಹ್ಲಿ ನಂ.18 ಜೆರ್ಸಿ ತೊಟ್ಟು ಕಣಕ್ಕಿಳಿದ ರಿಷಭ್ ಪಂತ್! ಹೊಸ ಚರ್ಚೆ ಬೆನ್ನಲ್ಲೇ ಬಿಸಿಸಿಐ ಸ್ಪಷ್ಟನೆ

ಸಾಮಾನ್ಯವಾಗಿ ಜೆಜು ದ್ವೀಪದಲ್ಲಿರುವ ಸಿಯೋಗ್ವಿಪೋ ಫಾರೆಸ್ಟ್ ಆಫ್ ಹೀಲಿಂಗ್ನಂತಹ ಪ್ರಶಾಂತ ಸೆಟ್ಟಿಂಗ್ಗಳಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಇದು ನಗರ ಪ್ರದೇಶಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. ತೆರೆದ ಆಕಾಶದ ಕೆಳಗೆ, ಶಾಂತ ಪ್ರದೇಶದಲ್ಲಿ ಇದನ್ನು ಮಾಡೋದ್ರಿಂದ ಸ್ಪರ್ಧಿ ಶಾಂತನೆ ಅನುಭವವಿಸುತ್ತಾನೆ. ಸ್ಪರ್ಧಿಯ ಬಗ್ಗೆ ಕೇಳಿದ್ರೆ ಇದು ಅತಿ ಸುಲಭ ಅನ್ನಿಸುತ್ತೆ. ಆದ್ರೆ ಒಂದೂವರೆ ಗಂಟೆಗಳ ಕಾಲ ಚಲನ ಇಲ್ದೆ, ಮಾನಸಿಕವಾಗಿ ನಿಷ್ಕ್ರಿಯವಾಗಿರುವುದು ದೊಡ್ಡ ಸವಾಲು. ಸಾಧನಗಳನ್ನು ಪರಿಶೀಲಿಸಲು, ಮಾತನಾಡಲು ಅಥವಾ ಸ್ಥಾನಗಳನ್ನು ಬದಲಾಯಿಸಲು ಸ್ಪರ್ಧಿಗಳು ತಮ್ಮ ನೈಸರ್ಗಿಕ ಪ್ರಚೋದನೆಗಳನ್ನು ನಿಗ್ರಹಿಸುವ ಅಗತ್ಯವಿದೆ, ಇದು ಸಂಪರ್ಕ ಕಡಿತಗೊಳಿಸುವ ಮತ್ತು ಕ್ಷಣದಲ್ಲಿ ಇರುವ ಸಾಮರ್ಥ್ಯದ ನಿಜವಾದ ಪರೀಕ್ಷೆಯಾಗಿದೆ. ಸ್ಪೇಸ್-ಔಟ್ ಸ್ಪರ್ಧೆ ದಿನೇ ದಿನೇ ಪ್ರಸಿದ್ಧಿ ಪಡೆಯುತ್ತಿದೆ. ವೇಗವಾಗಿ ಓಡ್ತಿರುವ ಈ ಜೀವನದಲ್ಲಿ ನೆಮ್ಮದಿ ಎಷ್ಟು ಮುಖ್ಯ, ಶಾಂತತೆ ಎಷ್ಟು ಅಗತ್ಯ ಎಂಬುದನ್ನು ಈ ಸ್ಪರ್ಧೆ ಹೇಳುತ್ತದೆ. ಬೀಜಿಂಗ್, ರೋಟರ್ಡ್ಯಾಮ್ ಮತ್ತು ತೈಪೆಯಂತಹ ನಗರಗಳಲ್ಲಿ ಇದು ಸಾಕಷ್ಟು ಪ್ರಸಿದ್ಧಿ ಪಡೆದಿದೆ.