ಚೆನ್ನೈನಲ್ಲಿ US ಚೆಸ್ ತಂಡವನ್ನು ಸ್ವಾಗತಿಸಿದ ಯು.ಎಸ್. ಕಾನ್ಸಲ್ ಜನರಲ್ ಜುಡಿತ್ ರೇವಿನ್
ಮಾಮಲ್ಲಪುರಂನಲ್ಲಿ ಗುರುವಾರ, ಜುಲೈ 28 ರಂದು ಆರಂಭವಾಗಲಿರುವ 44ನೇ ಚೆಸ್ ಒಲಂಪಿಯಾಡ್ಗೆ ಮುನ್ನ ಚೆನ್ನೈನ ಯು.ಎಸ್.ಕಾನ್ಸಲ್ ಜನರಲ್ ಜುಡಿತ್ ರೇವಿನ್ ಅವರು ಯು.ಎಸ್. ಚೆಸ್ ತಂಡದ ಆಟಗಾರರನ್ನು ಅಭಿನಂದಿಸಿ ಶುಭ ಹಾರೈಸಿದರು.
ಚೆನ್ನೈ, (ಜುಲೈ 28): ಚೆನ್ನೈನ ಯು.ಎಸ್.ಕಾನ್ಸಲ್ ಜನರಲ್ ಜುಡಿತ್ ರೇವಿನ್ ಅವರು ಇಂದು(ಗುರುವಾರ) ಯುನೈಟೆಡ್ ಸ್ಟೇಟ್ಸ್ ಚೆಸ್ ತಂಡವನ್ನು ಮಾಮಲ್ಲಪುರಂಗೆ ಸ್ವಾಗತಿಸಿದರು. ಶಿಕ್ಷಣ ಮತ್ತು ಕ್ರೀಡಾ ರಾಜತಾಂತ್ರಿಕತೆಯನ್ನು ಅಪಾರವಾಗಿ ಬೆಂಬಲಿಸುವ ಕಾನ್ಸಲ್ ಜನರಲ್ ಚೆಸ್ ಆಟಗಾರರಿಗೆ ಅಭಿನಂದಿಸಿದರು.
ಜುಲೈ 28ರಿಂದ ಆಗಸ್ಟ್ 9, 2022 ರವರೆಗೆ ನಡೆಯಲಿರುವ 44ನೇ ಚೆಸ್ ಒಲಂಪಿಯಾಡ್ ಪಂದ್ಯಗಳನ್ನು ಇಂಡಿಯನ್ ಚೆಸ್ ಫೆಡರೇಷನ್ ಮತ್ತು ತಮಿಳುನಾಡು ಸರ್ಕಾರ ಆಯೋಜಿಸಿದ್ದು, ಪಂದ್ಯಗಳಲ್ಲಿ ತಂಡಕ್ಕೆ ಯಶಸ್ಸು ದೊರಕಲಿ ಎಂದು ಹಾರೈಸಿದರು.
ಆಟಗಾರರೊಂದಿಗೆ ಚರ್ಚೆ ನಡೆಸಿದ ಕಾನ್ಸಲ್ ಜನರಲ್ ಜುಡಿತ್ ರೇವಿನ್ ಚೆನ್ನೈನಲ್ಲಿನ ಚೆಸ್ ಒಲಂಪಿಯಾಡ್ ಚೆಸ್ ಕ್ರೀಡೆಯನ್ನು ಜನಪ್ರಿಯಗೊಳಿಸುವುದಲ್ಲದೆ, ನೈಜ ಜಾಗತಿಕ ಸ್ಪರ್ಧೆಯು ಪ್ರಪಂಚದ ಎಲ್ಲ ಚೆಸ್ ಪ್ರಿಯರನ್ನು ಒಗ್ಗೂಡಿಸಲು ನೆರವಾಗುತ್ತದೆ ಎಂದರು.
ಕ್ರಿಕೆಟ್, ಹಾಕಿ, ಕಬಡ್ಡಿ ಸೇರಿದಂತೆ ಇತರೆ ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕಾನ್ಸಲ್ ಜನರಲ್ ಯು.ಎಸ್. ಚೆಸ್ ಗ್ರಾಂಡ್ಮಾಸ್ಟರ್ಸ್(ಜಿಎಂ), ಇಂಟರ್ನ್ಯಾಷನಲ್ ಮಾಸ್ಟರ್ಸ್(ಐಎಂ) ಮತ್ತು ವಿಮೆನ್ ಗ್ರಾಂಡ್ಮಾಸ್ಟರ್ಸ್(ಡಬ್ಲ್ಯೂಜಿಎಂ) ರನ್ನು ಉದ್ದೇಶಿಸಿ, “ಚೆನ್ನೈನಲ್ಲಿನ ಚೆಸ್ ಒಲಂಪಿಯಾಡ್ನಲ್ಲಿ ನೀವೆಲ್ಲ ಯುನೈಟೆಡ್ ಸ್ಟೇಟ್ಸ್ ಪ್ರತಿನಿಧಿಸುತ್ತಿರುವುದಕ್ಕೆ ನಾನು ಬಹಳ ಹೆಮ್ಮೆ ಪಡುತ್ತೇನೆ. ಯು.ಎಸ್. ಮತ್ತು ಭಾರತ ನಡುವಿನ ಆಳವಾದ ಬಾಂಧವ್ಯವು ನಿಮ್ಮಂತಹ ಕ್ರೀಡಾ ರಾಜತಾಂತ್ರಿಕರಿಂದ ಜನರಿಂದ ಜನರಿಗೆ ಸಂಪರ್ಕಗಳಿಂದ ಬೆಸೆದುಕೊಂಡಿದೆ. ಚೆನ್ನೈನ ಯು.ಎಸ್.ಕಾನ್ಸುಲೇಟ್ ಜನರಲ್ ಯು.ಎಸ್-ಭಾರತ ಬಾಂಧವ್ಯಗಳ 75ನೇ ವಾರ್ಷಿಕೋತ್ಸದ ಸಂದರ್ಭದಲ್ಲಿ ಚೆಸ್ ಒಲಂಪಿಯಾಡ್ ಚೆನ್ನೈನಲ್ಲಿ ನಡೆಯುವುದನ್ನು ವೀಕ್ಷಿಸಲು ರೋಮಾಂಚಿತವಾಗಿದೆ ಎಂದು ಹೇಳಿದರು.
ಮುಕ್ತ ವಿಭಾಗದಲ್ಲಿ ಯು.ಎಸ್. ತಂಡದ ನಾಯಕ ಜಾನ್ ಡೊನಾಲ್ಡ್ಸನ್, ಚೆನ್ನೈನಲ್ಲಿ ನಡೆಯುತ್ತಿರುವ 44 ನೇ ಚೆಸ್ ಒಲಂಪಿಯಾಡ್ನಲ್ಲಿ ಸ್ಪರ್ಧಿಸುವುದು ಗೌರವದ ವಿಷಯ. ಭಾರತವು ಚೆಸ್ ಜನ್ಮಸ್ಥಾನ ಎಂದು ಹಲವರಿಂದ ಪರಿಗಣಣಿಸಲ್ಪಟ್ಟಿದ್ದು, ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ಸೂಕ್ತವಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿಈ ಒಲಿಂಪಿಯಾಡ್ ಆಯೋಜಿಸಲು ಮುಂದೆಬಂದ ಇಂಡಿಯನ್ ಚೆಸ್ ಫೆಡರೇಷನ್ ಗೆ ಆಭಾರಿಯಾಗಿದ್ದೇನೆ. ಚೆನ್ನೈನಲ್ಲಿ ಈ ವರ್ಷ ತುರುಸಿನ ಸ್ಪರ್ಧೆಯನ್ನು ನಿರೀಕ್ಷಿಸುತ್ತೇವೆ ಎಂದರು.
ಭಾರತ ಚೆಸ್ ಒಲಿಂಪಿಯಾಡ್ ಆಯೋಜಿಸಲು ಮುಂದೆ ಬಂದ ಬಗ್ಗೆ ಜಾನ್ ಅವರ ಅಭಿಪ್ರಾಯಗಳನ್ನು ಪುನರುಚ್ಛರಿಸಿದ ಯು.ಎಸ್. ಮಹಿಳಾ ತಂಡದ ನಾಯಕಿ ಮೆಲಿಕ್ಸೆಟ್ ಖಚಿಯನ್, ಮೊಟ್ಟಮೊದಲ ಬಾರಿಗೆ ಒಲಂಪಿಯಾಡ್ ಆಯೋಜಿಸುತ್ತಿರುವುದಕ್ಕೆ ಭಾರತವನ್ನು ಅಭಿನಂದಿಸಿದರು. “ಭಾರತವು ಸದೃಢವಾದ ಚೆಸ್ ಸಂಪ್ರದಾಯಗಳ ದೇಶವಾಗಿದೆ. ಇದು ಐದು ಬಾರಿ ವಿಶ್ವ ಚಾಂಪಿಯನ್ ಆದ ವಿಶ್ವನಾಥನ್ ಆನಂದ್ ಅವರ ದೇಶ. ಚೆನ್ನೈಗೆ ಕೂಡಾ ಸುದೀರ್ಘ ಚೆಸ್ ಇತಿಹಾಸ ಹೊಂದಿದೆ. 2013ರಲ್ಲಿ ಚೆನ್ನೈ ವಿಶ್ವನಾಥನ್ ಆನಂದ್- ಮ್ಯಾಗ್ನಸ್ ಕಾರ್ಲ್ಸೆನ್ ನಡುವಿನ ವಿಶ್ವ ಚಾಂಪಿಯನ್ಶಿಪ್ ಪಂದ್ಯವನ್ನು ಮೊಟ್ಟ ಮೊದಲ ಬಾರಿಗೆ ಆಯೋಜಿಸಿತ್ತು. ಭಾರತವು ಇತ್ತೀಚಿನ ದಿನಗಳಲ್ಲಿ ವಿಶ್ವ ಚೆಸ್ನಲ್ಲಿ ಹಲವು ಚೆಸ್ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು ಮುಂಚೂಣಿಯಲ್ಲಿದೆ. ನಮ್ಮ ಯು.ಎಸ್. ತಂಡವು ಈ ವರ್ಲ್ಡ್ ಚೆಸ್ ಒಲಂಪಿಯಾಡ್ ಭಾಗವಾಗಲು ಮತ್ತು ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದೇವೆ” ಎಂದರು ಖಚಿಯಾನ್.
ಜಾನ್ ಡೊನಾಲ್ಡ್ಸನ್ ಅವರ ನಾಯಕತ್ವದ ಯು.ಎಸ್. ತಂಡವು ಮುಕ್ತ ವಿಭಾಗದಲ್ಲಿಸ್ಪರ್ಧೆಯಲ್ಲಿರುವ 187 ತಂಡಗಳಲ್ಲಿ ಮೊದಲ ಸ್ಥಾನದಲ್ಲಿದೆ. ತಂಡದಲ್ಲಿ ಗ್ರಾಂಡ್ಮಾಸ್ಟರ್(ಜಿಎಂ) ಫ್ಯಾಬಿಯನೊ ಕರುಆನಾ, ಜಿಎಂ ಲೇವನ್ ಅರೋನಿಯನ್, ಜಿಎಂ ವೆಸ್ಲೀ ಸೊ, ಜಿಎಂ ಲೀನನಿಯರ್ ಡೊಮಿಂಗ್ಯುಜ್ ಮತ್ತು ಜಿಎಂ ಸ್ಯಾಮ್ ಶಂಕ್ಲಾಂಡ್ ಇದ್ದಾರೆ. ಜಿಎಂ ರಾಬರ್ಟ್ ಹೆಸ್ ಈ ತಂಡದ ತರಬೇತುದಾರರಾಗಿದ್ದಾರೆ
ಮಹಿಳಾ ವಿಭಾಗದಲ್ಲಿ ಮೆಲಿಕ್ಸೆಟ್ ಖಚಿಯನ್ ಅವರ ನೇತೃತ್ವ ಹೊಂದಿರುವ ಯು.ಎಸ್. ತಂಡವು ನಾಯಕಿ 162 ತಂಡಗಳಲ್ಲಿ ಎಂಟ ನೇ ಸ್ಥಾನದಲ್ಲಿದ್ದಾರೆ. ಜಿಎಂ ಐರಿನಾ ಕ್ರಶ್, ಐ ಎಂ ಕ್ಯಾರಿಸ್ಸಾ ಯಿಪ್, ಐ ಎಂ ಅನ್ನಾ ಜಟೋನ್ಸ್ಕಿಹ್, ವಿಮೆನ್ ಗ್ರಾಂಡ್ಮಾಸ್ಟರ್ ತತೆವ್, ಅಬ್ರಹಮ್ಯಂ ಮತ್ತು ಡಬ್ಲ್ಯೂಜಿಎಂ ಗುಲ್ರುಕ್ಬಿಗಿಮ್, ಟೊಖಿರ್ಜೊನೊವಾ ಮಹಿಳೆಯರ ತಂಡದಲ್ಲಿದ್ದು, ಜಿಎಂ ಅಲೆಜಾಂಡ್ರೊ ರಮಿರೆಜ್ ತರಬೇತುದಾರರಾಗಿದ್ದಾರೆ.