ನವದೆಹಲಿ(ಆ.31): ಕೊರೋನಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ನಡೆದ ಫಿಡೆ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ ಹಾಗೂ ರಷ್ಯಾ ತಂಡಗಳನ್ನು ಜಂಟಿ ವಿಜೇತರನ್ನಾಗಿ ಘೋಷಿಸಲಾಗಿದೆ. 

ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದ ನಿಹಾಲ್‌ ಸರಿನ್‌ ಮತ್ತು ದಿವ್ಯಾ ದೇಶ್‌ಮುಖ್‌ ಅವರಿದ್ದ ತಂಡದ ವಿರುದ್ಧ ರಷ್ಯಾ ಜೋಡಿ ಗೆಲುವು ಸಾಧಿಸಿತ್ತು. ಆದರೆ ಭಾರತ ತಂಡ ಫಲಿತಾಂಶವನ್ನು ಪ್ರಶ್ನಿಸಿತ್ತು. ನಂತರ ಕೂಲಂಕಷವಾಗಿ ಪರಿಶೀಲಿಸಿ ಎರಡೂ ತಂಡಗಳನ್ನು ವಿಜೇತ ಎಂದು ಆಯೋಜಕರು ಘೋಷಿಸಿದರು. 

2002ರ ಬಳಿಕ ರಷ್ಯಾ ಇದೇ ಮೊದಲ ಬಾರಿಗೆ ಚೆಸ್‌ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕವನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ಫಿಡೆ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ, ಮೊದಲ ಬಾರಿ ಫೈನಲ್‌ ಪ್ರವೇಶಿಸಿತ್ತು. 2014ರಲ್ಲಿ ಭಾರತ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದೇ ಈ ವರೆಗಿನ ಸಾಧನೆಯಾಗಿತ್ತು.

ಕ್ರೀಡಾ ಸಾಧಕರಿಗೆ ಸಿಹಿ ಸುದ್ದಿ: ಪ್ರಶಸ್ತಿಗಳ ನಗದು ಮೊತ್ತ ಗಣನೀಯ ಹೆಚ್ಚಳ!

ಫಲಿತಾಂಶ ನಿರ್ಧಾರದ ಬಗ್ಗೆ ಎದುರಾದ ವಿವಾದದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧಗಳು ವ್ಯಕ್ತವಾಗಿವೆ.