ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಅನರ್ಹಗೊಂಡಿದ್ದ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಕೋರ್ಟ್‌ನ ತೀರ್ಪಿಗಾಗಿ ಇಡೀ ಭಾರತ ಕಾದು ಕುಳಿತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್: ಒಲಿಂಪಿಕ್ಸ್ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಿಂದ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಭಾರತದ ಕುಸ್ತಿಪಟು ವಿನೇಶ್ ಪೋಗಟ್‌ನಲ್ಲಿಸಿದ್ದ ಅರ್ಜಿಯನ್ನು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಹಂಗಾಮಿ ಪೀಠ ಪೂರ್ಣಗೊಳಿಸಿದೆ. ಫಲಿತಾಂಶ ಪೂರಕವಾಗಿ ಬರಬಹುದು ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್‌ ಆಶಾಭಾವನೆ ವ್ಯಕ್ತಪಡಿಸಿದೆ. 

50 ಕೆಜಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ದೇಹದ ತೂಕ 100 ಗ್ರಾಂನಷ್ಟು ಹೆಚ್ಚಿತ್ತು ಎನ್ನುವ ಕಾರಣಕ್ಕಾಗಿ ವಿನೇಶ್ ಪೋಗಟ್ ಅವರನ್ನು ಅನರ್ಹ ಗೊಳಿಸಲಾಗಿತ್ತು. ಈ ಮೂಲಕ ಫೈನಲ್‌ನಲ್ಲಿ ಆಡುವ ಅವಕಾಶ ನಿರಾಕರಿಸುವ ಜೊತೆಗೆ ಇಡೀ ಒಲಿಂಪಿಕ್ ನಲ್ಲಿನ ಅವರ ಎಲ್ಲಾ ಸಾಧನೆಗಳನ್ನು ಬದಿಗೊತ್ತಲಾಗಿತ್ತು.

ಬೆಳ್ಳಿ ಪದಕಕ್ಕೆ ಮುಂದುವರೆದ ವಿನೇಶ್ ಫೋಗಟ್ ಹೋರಾಟ; ಮಹತ್ವದ ನಿರ್ಧಾರ ಪ್ರಕಟಿಸಿದ ಕ್ರೀಡಾ ನ್ಯಾಯ ಮಂಡಳಿ

ಈ ಹಿನ್ನೆಲೆಯಲ್ಲಿ ವಿನೇಶ್ ಪೋಗಟ್ ಮೇಲ್ಮನವಿ ಸಲ್ಲಿಸಿದ್ದರು. ಅದರಲ್ಲಿ ಫೈನಲ್‌ನಲ್ಲಿ ಯಾರೇ ಬೆಳ್ಳಿ ಪದಕ ವಿಜೇತರಾದರೂ ಅವರ ಜೊತೆಗೆ ತಮ್ಮನ್ನೂ ಜಂಟಿ ವಿಜೇತರೆಂದು ಘೋಷಿಸಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾ ಲಯ (ಕ್ರೀಡೆ) ವಾದ- ಪ್ರತಿವಾದ ಆಲಿಸಿತ್ತು. ವಿನೇಶ್ ಪೋಗಟ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. ನ್ಯಾಯಾಲಯ ಇದೀಗ ಇಂದು ರಾತ್ರಿ ಅಂದರೆ ಶನಿವಾರ ರಾತ್ರಿ ಭಾರತೀಯ ಕಾಲಮಾನ 9.30ಕ್ಕೆ ಈ ವಿಚಾರಣೆಯ ತೀರ್ಪು ಹೊರಬೀಳಲಿದೆ ಎಂದು ವರದಿಯಾಗಿದೆ.

Scroll to load tweet…

ವಿನೇಶ್ ಪದಕಕ್ಕೆ ಅರ್ಹರು: ಸಚಿನ್ ತೆಂಡುಲ್ಕರ್

ನವದೆಹಲಿ: ವಿನೇಶ್ ಫೈನಲ್‌ಗೆ ನ್ಯಾಯಯುತವಾಗಿ ಅರ್ಹತೆ ಪಡೆದಿದ್ದಾರೆ. ಹೀಗಾಗಿ ಅವರು ಪದಕಕ್ಕೆ ಅರ್ಹರು ಎಂದು ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ. ಈ ಬಗ್ಗೆ ಶುಕ್ರವಾರ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿರುವ, 'ವಿನೇಶ್ ಡೋಪಿಂಗ್‌ನಿಂದ ಅನರ್ಹಗೊಂಡಿದ್ದಲ್ಲ. ತೂಕ ಹೆಚ್ಚಾಗಿದ್ದಕ್ಕೆ ಪದಕ ತಪ್ಪಿಸಿಕೊಂಡಿದ್ದಾರೆ. ಎದುರಾಳಿಗಳನ್ನು ನ್ಯಾಯಯುತವಾಗಿ ಸೋಲಿಸಿ ಫೈನಲ್‌ಗೇರಿದ್ದರು' ಎಂದಿದ್ದಾರೆ.

ಕುಸ್ತಿಯಲ್ಲಿ ಮತ್ತೆ ಮತ್ತೆ ನಿರಾಸೆ

ಭಾರತ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ನಿರೀಕ್ಷೆ ಇಟ್ಟುಕೊಂಡಿದ್ದ ಕ್ರೀಡೆಯಲ್ಲಿ ಕುಸ್ತಿಯೂ ಒಂದು. ಆದರೆ ಕುಸ್ತಿಪಟುಗಳು ನಿರೀಕ್ಷೆ ಉಳಿಸಿಕೊಂಡಿಲ್ಲ. ಈ ಬಾರಿ ಮಹಿಳಾ ವಿಭಾಗದಲ್ಲಿ ಐವರು, ಪುರುಷರ ವಿಭಾಗದಲ್ಲಿ ಅಮನ್‌ ಒಬ್ಬರೇ ಭಾರತವನ್ನು ಪ್ರತಿನಿಧಿಸಿದ್ದರು. ಈ ಪೈಕಿ ವಿನೇಶ್‌ ಫೋಗಟ್‌ ಫೈನಲ್‌ಗೇರಿದರೂ, ಪದಕ ಸುತ್ತಿನ ಪಂದ್ಯಕ್ಕೂ ಮುನ್ನ ಅನರ್ಹಗೊಂಡು ಹೊರಬಿದ್ದರೆ, ಅಂತಿಮ್‌ ಪಂಘಲ್‌, ಅನ್ಶು ಮಲಿಕ್‌ ಮೊದಲ ಸುತ್ತಿನಲ್ಲೇ ಅಭಿಯಾನ ಕೊನೆಗೊಳಿಸಿದ್ದರು. ನಿಶಾ ದಹಿಯಾ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದಾರೆ. ಸದ್ಯ ರೀತಿಕಾ ಹೂಡಾ ಮಾತ್ರ ಕಣದಲ್ಲಿದ್ದು, ಶನಿವಾರ ಅಭಿಯಾನ ಆರಂಭಿಸಲಿದ್ದಾರೆ.