ನಡಾಲ್‌, ಜೋಕೋವಿಚ್‌, ಜ್ವರೇವ್ ಮಣಿಸಿ ಮ್ಯಾಡ್ರಿಡ್‌ ಓಪನ್‌ ಗೆದ್ದ ಕಾರ್ಲೋಸ್..!

* ಟೆನಿಸ್ ದಿಗ್ಗಜರನ್ನು ಮಣಿಸಿ ಮ್ಯಾಡ್ರಿಡ್‌ ಓಪನ್‌ ಜಯಿಸಿದ ಕಾರ್ಲೋಸ್‌ ಆಲ್ಕಾರಾಜ್‌

* 19 ವರ್ಷದ ಸ್ಪೇನ್‌ ಯುವ ಆಟಗಾರ ಕಾರ್ಲೋಸ್‌ ಆಲ್ಕಾರಾಜ್‌

* ವೃತ್ತಿಜೀವನ ಎರಡನೇ ಎಟಿಪಿ ಪ್ರಶಸ್ತಿ ಜಯಿಸಿದ ಯುವ ಟೆನಿಸ್ ತಾರೆ

Carlos Alcaraz Topples Zverev For Madrid Title kvn

ಮ್ಯಾಡ್ರಿಡ್(ಮೇ.09)‌: ಟೆನಿಸ್‌ ಲೋಕದಲ್ಲಿ ಹೊಸ ತಾರೆಯ ಉದಯವಾಗಿದೆ. ಫ್ರೆಂಚ್‌ ಓಪನ್‌ಗೆ (French Open) ಕೇವಲ ಒಂದು ವಾರ ಬಾಕಿ ಇರುವಾಗಲೇ ದಿಗ್ಗಜ ಆಟಗಾರರನ್ನು ಮಣಿಸಿ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಮ್ಯಾಡ್ರಿಡ್ ಓಪನ್‌ ಟೆನಿಸ್ ಟೂರ್ನಿಯಲ್ಲಿ (Madrid Open Tennis Tournament) ಕಾರ್ಲೋಸ್‌ ಆಲ್ಕಾರಾಜ್‌ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ದಿಗ್ಗಜ ಟೆನಿಸಿಗರಾದ ರಾಫೆಲ್‌ ನಡಾಲ್‌ ಹಾಗೂ ನೋವಾಕ್‌ ಜೋಕೋವಿಚ್‌ರನ್ನು ಸ್ಪೇನ್‌ನ 19 ವರ್ಷದ ಆಟಗಾರ ಕಾರ್ಲೋಸ್‌ ಆಲ್ಕಾರಾಜ್‌ ಸತತ 2 ದಿನಗಳಲ್ಲಿ ಸೋಲಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದರು. ಇದೀಗ ಫೈನಲ್‌ನಲ್ಲಿ ಇದೀಗ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಅಲೆಕ್ಸಾಂಡರ್ ಜ್ವರೇವ್ ವಿರುದ್ದ 6-3, 6-1 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಾರ್ಲೋಸ್‌ ವೃತ್ತಿಜೀವನದ ಎರಡನೇ ಎಟಿಪಿ 1000 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಮ್ಯಾಡ್ರಿಡ್‌ ಓಪನ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ನಡಾಲ್‌ ವಿರುದ್ಧ ಜಯಿಸಿದ ಕಾರ್ಲೋಸ್‌, ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಜೋಕೋವಿಚ್‌ ವಿರುದ್ಧ ಜಯಗಳಿಸಿದರು. ಇನ್ನು ಭಾನುವಾರ ನಡೆದ ಫೈನಲ್ ಕಾದಾಟದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು.  ಮಣ್ಣಿನ ಅಂಕಣದಲ್ಲಿ ಸತತ 2 ದಿನ ಈ ಇಬ್ಬರು ದಿಗ್ಗಜರನ್ನು ಸೋಲಿಸಿದ ಮೊದಲಿಗ ಎನ್ನುವ ದಾಖಲೆ ಬರೆದರು. ಮೇ 16ರಿಂದ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಆರಂಭಗೊಳ್ಳಲಿದ್ದು, ಕಾರ್ಲೋಸ್‌ ಆಲ್ಕಾರಾಜ್‌ ಭಾರೀ ನಿರೀಕ್ಷೆ ಮೂಡಿಸಿದ್ದಾರೆ.

ಈ ವರ್ಷವೂ ಕೊಡವಾ ಹಾಕಿ ಕಪ್‌ ಇಲ್ಲ: 2023ರಲ್ಲಿ ಟೂರ್ನಿ

ಮಡಿಕೇರಿ: ಹಾಕಿ ಉತ್ಸವದ ಮೂಲಕ ವಿಶ್ವದ ಗಮನ ಸೆಳೆದು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಈ ಬಾರಿಯೂ ನಡೆಯುತ್ತಿಲ್ಲ. ಪ್ರತಿ ವರ್ಷ ಏಪ್ರಿಲ್‌ ಮೇನಲ್ಲಿ ಸುಮಾರು ಒಂದು ತಿಂಗಳ ಕಾಲ ಕುಟುಂಬವೊಂದರ ಸಾರಥ್ಯದಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿತ್ತು. ಪ್ರಕೃತಿ ವಿಕೋಪ ಹಾಗೂ ಕೊರೋನಾ ಕಾರಣದಿಂದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಹಾಕಿ ಉತ್ಸವ ಈ ಬಾರಿಯೂ ಕೊರೋನಾ ಕಾರಣದಿಂದಾಗಿ ನಡೆಯುತ್ತಿಲ್ಲ. ಆದರೆ 2023ರಲ್ಲಿ ಟೂರ್ನಿಯನ್ನು ಪುನಾರಂಭಿಸಲು ಉದ್ದೇಶಿಸಲಾಗಿದ್ದು, ಅಪ್ಪಚ್ಚಟ್ಟೋಳಂಡ ಕುಟುಂಬ 23ನೇ ವರ್ಷದ ಹಾಕಿ ಉತ್ಸವವನ್ನು ನಡೆಸುವ ಜವಾಬ್ದಾರಿ ವಹಿಸಿಕೊಂಡಿದೆ.

ಕೊಡವ ಕೌಟುಂಬಿಕ ಹಬ್ಬ ಎಂದರೆ ಅದೊಂದು ದೊಡ್ಡ ಉತ್ಸವ. ವಿಶ್ವದಲ್ಲೇ ಇಂತಹ ಕ್ರೀಡಾ ಹಬ್ಬ ಎಲ್ಲೂ ನಡೆಯುತ್ತಿಲ್ಲ. ಕೊಡವ ಕುಟುಂಬವೊಂದರ ಮುಂದಾಳತ್ವದಲ್ಲಿ ಪ್ರತಿ ವರ್ಷ ಹಾಕಿ ಹಬ್ಬ ನಡೆಯುತ್ತದೆ. ಒಂದು ಹಾಕಿ ಉತ್ಸವಕ್ಕೆ ಸುಮಾರು ಒಂದು ಕೋಟಿ ರುಪಾಯಿ ವರೆಗೂ ಖರ್ಚಾಗುತ್ತದೆ. ಈ ಉತ್ಸವದಲ್ಲಿ ಮಹಿಳೆಯರು, ಪುರುಷರು, ಮಕ್ಕಳು ಹಾಗೂ ಹಿರಿಯರು ತಮ್ಮ ಕುಟುಂಬದ ತಂಡದಲ್ಲಿ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆಯುತ್ತಿದ್ದರು. ಸುಮಾರು 300 ತಂಡಗಳು, 5 ಸಾವಿರ ಆಟಗಾರರು ಸುಮಾರು 50ಕ್ಕೂ ಅಧಿಕ ತೀರ್ಪುಗಾರರು ಈ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ದೇಶ, ವಿದೇಶದಲ್ಲಿ ನೆಲೆಸಿದ್ದವರು ಜಿಲ್ಲೆಗೆ ಬಂದು ತಮ್ಮ ಕುಟುಂಬದ ಪರವಾಗಿ ಆಟವಾಡುತ್ತಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ಈ ಹಾಕಿ ಉತ್ಸವ ನಡೆಯದಿರುವುದು ಅವರಲ್ಲಿ ನಿರಾಸೆ ಮೂಡಿಸಿದೆ.

ಥಾಮಸ್‌, ಉಬರ್‌ ಕಪ್‌: ಭಾರತ ಭರ್ಜರಿ ಶುಭಾರಂಭ

ಹಾಕಿ ಹಬ್ಬದಿಂದಾಗಿ ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರ ತಂಡದಲ್ಲಿ ಹಾಕಿ ಆಟಗಾರರು ಪಾಲ್ಗೊಳ್ಳುವಂತಾಯಿತು. ಹೊಸ ಮುಖಗಳಿಗೆ ಅವಕಾಶ ನೀಡುವಂತಾಯಿತು. ಆದರೆ ಈಗ ಹಾಕಿ ಹಬ್ಬ ಇಲ್ಲದಿರುವುದು ಮುಂದಿನ ಹಾಕಿ ಆಟಗಾರರಿಗೆ ತೊಂದರೆಯಾಗಿದೆ. ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಪ್ಪ ಅವರು ಕರಡ ಗ್ರಾಮದಲ್ಲಿ 1997ರಲ್ಲಿ ಮೊದಲ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟವು ನಡೆಸಿದ್ದರು. ಅಂದು ಒಲಂಪಿಕ್ಸ್‌ ಮಾದರಿಯಲ್ಲಿಯೇ ಹಾಕಿ ಕ್ರೀಡಾಕೂಟ ನಡೆದು ವಿಶ್ವದಾದ್ಯಂತ ಗಮನಸೆಳೆದಿತ್ತು.

ಪ್ರಾಕೃತಿಕ ವಿಕೋಪ ಹಾಗೂ ಕೊರೋನಾ ಕಾರಣದಿಂದಾಗಿ 2019ರಿಂದ ಕೊಡವ ಕೌಟುಂಬಿಕ ಹಾಕಿ ಉತ್ಸವ ನಡೆದಿಲ್ಲ. ಮುಂದಿನ ಬಾರಿಯ ಹಾಕಿ ಉತ್ಸವವನ್ನು ಅಪ್ಪಚೆಟ್ಟೋಳಂಡ ತಂಡ ವಹಿಸಿಕೊಂಡಿದೆ. - ಬುಟ್ಟಿಯಂಡ ಚೆಂಗೆಪ್ಪ, ಕಾರ್ಯದರ್ಶಿ ಹಾಕಿ ಕೂರ್ಗ್‌

Latest Videos
Follow Us:
Download App:
  • android
  • ios