ಬೆಂಗಳೂರು[ನ.17]: ಬೆಂಗಳೂರು ಯುವ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಂಸದರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ನಗರದಲ್ಲಿ ಕ್ರಿಕೆಟ್ ಪಂದ್ಯವೊಂದನ್ನು ಉದ್ಘಾಟಿಸಿ ಬ್ಯಾಟ್ ಬೀಸಿ ಮಿಂಚಿದ್ದ ತೇಜಸ್ವಿ, ಇದೀಗ ಬ್ಯಾಡ್ಮಿಂಟನ್ ಆಡುವ ಮೂಲಕ ಗಮನ ಸೆಳೆದಿದ್ದಾರೆ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ, ಸಾಮಾಜಿಕ ಜಾಲತಾಣದಲ್ಲಿ ಟ್ವಿಟರಿಗನೊಬ್ಬ, ಸಂಸದರಾದ ಬಳಿಕ ಕೆಲಸದ ಒತ್ತಡ ಖಂಡಿತವಾಗಿಯೂ ಹೆಚ್ಚಾಗಿರುತ್ತದೆ. ನೀವು ಫಿಟ್ ಆಗಿರಲು ಜಿಮ್ ಅಥವಾ ಯೋಗದ ಮೊರೆ ಹೋಗುತ್ತೀರಾ ಎಂದು ಪ್ರಶ್ನಿಸಿದ್ದಾನೆ.

ತೇಜಸ್ವಿ ಸೂರ್ಯ ನೆಚ್ಚಿಕೊಂಡು 3.2 ಲಕ್ಷ ರೂ. ಕಳಕೊಂಡ ಸ್ಪರ್ಧಿ !

ಈ ಪ್ರಶ್ನೆಗೆ ಉತ್ತರಿಸಿರುವ ತೇಜಸ್ವಿ ಸೂರ್ಯ ಸ್ಮಾಷ್ ಮಾಡುತ್ತಿರುವ ವಿಡಿಯೋದೊಂದಿಗೆ, ನಾನು ಕೆಲವೊಮ್ಮೆ ಬ್ಯಾಡ್ಮಿಂಟನ್ ಆಡುವ ಮೂಲಕ ರಿಲ್ಯಾಕ್ಸ್ ಆಗುತ್ತೇನೆ. ಆದರೆ ನನ್ನ ಹಿರಿಯರಾದ ಕಿರಣ್ ರಿಜಿಜು, ರಾಜ್ಯವರ್ಧನ್ ಸಿಂಗ್ ಅವರು ಸೆಟ್ ಮಾಡಿರುವ ಸ್ಟ್ಯಾಂಡರ್ಡ್ ತಲುಪಬೇಕಿದೆ ಎಂದು ಉತ್ತರಿಸಿದ್ದಾರೆ.

ಫಿಟ್ ಇಂಡಿಯಾ ಕ್ಯಾಂಪೇನ್ ಸಹ ಜನಪ್ರಿಯವಾಗಿದ್ದು  ವಿವಿಧ ನಾಯಕರು, ಸೆಲೆಬ್ರಿಟಿಗಳು ವಿಡಿಯೋ ಮಾಡಿ ಅಭಿಮಾನಿಗಳ ಮೆಚ್ಚುಗೆ ಗಳಿಸಿಕೊಂಡಿದ್ದರು. ದೇಶದ ಅತಿ ಕಿರಿಯ ಸಂಸದರಲ್ಲಿ ಸ್ಥಾನ ಪಡೆದುಕೊಂಡಿರುವ ಸೂರ್ಯ ಬೆಂಗಳೂರು ಬನ್ನೇರುಘಟ್ಟ ರಸ್ತೆಯನ್ನು ಹೇಗೆ ದುರಸ್ತಿ ಮಾಡಿದ್ದೇವೆ ಎಂಬುದನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಸರ್ಕಾರ ಮತ್ತು ಅಧಿಕಾರಿಗಳು ಮಾತ್ರವಲ್ಲ ಅವರ ಜತೆ ಜನರು ಕೈಜೋಡಿಸಿದರೆ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಬನ್ನೇರುಘಟ್ಟ ರಸ್ತೆಯ ಉದಾಹರಣೆ ನೀಡಿದ್ದರು.